ಬೈಟುಕಾಫಿ

ಪ್ರೇಮಪತ್ರಕ್ಕೆ ಕೈ ಬರಹವೇ ಸೈ

ಕೈ ಬರಹದಲ್ಲಿ ಬರೆಯೋದು ಸರಳ, ಸುಲಭ ಹಾಗೂ ಅನಿವಾರ್ಯ. ಕಾರಣ ನನ್ನ ಮನೆಯಲ್ಲಿ ಕಂಪ್ಯೂಟರ್ ಇಲ್ಲ...

Published On :

ಕೈ ಬರಹದಲ್ಲಿ ಬರೆಯೋದು ಸರಳ, ಸುಲಭ ಹಾಗೂ ಅನಿವಾರ್ಯ. ಕಾರಣ ನನ್ನ ಮನೆಯಲ್ಲಿ ಕಂಪ್ಯೂಟರ್ ಇಲ್ಲ, ಊರಲ್ಲಿ ಬ್ರೌಸಿಂಗ್ ಸೆಂಟರ್ ಇಲ್ಲ, ಕೈ ಬರಹ ಚಿಕ್ಕಂದಿನಿಂದ ರೂಢಿಯಾಗಿದೆ. ನನ್ನ ಸ್ನೇಹಿತರು, ನೀನು ಬಿಡಪ್ಪಾ ಇವತ್ತಿಗೂ ಅಂಚೆ ಕಚೇರಿಯವರನ್ನು ಉದ್ಧಾರ ಮಾಡ್ತೀಯಾ ಎಂದು ಲೇವಡಿ ಮಾಡ್ತಾರೆ. ಕೈ ಬರಹವೇ ಖುಷಿ. ಕೈಬರಹದ ಪತ್ರ ಕೊಡುವ ಮಧುರ ಭಾವನೆಯನ್ನು ಎಲೆಕ್ಟ್ರಾನಿಕ್ ಮಾಧ್ಯಮ ಕೊಡುವುದಿಲ್ಲ. ಪ್ರೇಮಪತ್ರಕ್ಕೆ ಕೈ ಬರವಣಿಗೆಯೇ ವಿನಃ ಬೇರಲ್ಲ. ಟಿ
-ಮಂಜು ಜಿ., ಬಳ್ಳಾರಿ


ಭಾವನಾತ್ಮಕ ಸಂಬಂಧದ ಕೊಂಡಿ
ಸಾಫ್ಟ್ವೇರ್ ಯುಗದಲ್ಲಿ ಕೈಬರಹದಲ್ಲಿ ಬರೆಯುವ ಪುರುಸೊತ್ತು ಖಂಡಿತ ಯಾರಿಗೂ ಇಲ್ಲ. ಈ ಪೇಸ್ಬುಕ್, ಎಸ್.ಎಮ್.ಎಸ್, ವಾಟ್ಸ್ ಆ್ಯಪ್, ಇ-ಮೇಲ್ಗಳಿಂದ ಕೆಲವೇ ಸೆಕೆಂಡುಗಳಲ್ಲಿ ಸಂದೇಶ ರವಾನೆಯಾಗುವುದರಿಂದ ಯಾರೂ ಪತ್ರ ಬರೆಯುವುದಿಲ್ಲ. ಆದರೆ ನನ್ನ ಸ್ನೇಹಿತರಲ್ಲಿ ಒಬ್ಬರಿಗೆ ಕೈಬರಹದ ಅಭ್ಯಾಸ ಈಗಲೂ ಇದೆ. ಅವರು ತಮ್ಮ ಪ್ರೀತಿಯ ಗೆಳೆಯ-ಗೆಳತಿಯರಿಗೆ ಹುಟ್ಟುಹಬ್ಬದಂದು ಉಡುಗೊರೆಯಾಗಿ ತಾವೇ ರಚಿಸಿದ ಕವನಗಳನ್ನು ಕೊಡುವರು. ಇದರಿಂದ ಭಾವನಾತ್ಮಕ ಸಂಬಂಧಗಳು ಗಟ್ಟಿಗೊಳ್ಳುವುದು.ಟಿ
-ಅಂಜಲಿಕೃಷ್ಣ, ಹಾಸನ


ತಂತ್ರಜ್ಞಾನದ ದಾಳಿ
ಕೈ ಬರಹ ಎಂಬುದು ಒಂದು ಕಲಾತ್ಮಕ ಜೋಡಣೆ. ಆದರೆ ಇತ್ತೀಚೆಗೆ ಇದು ನಶಿಸಿ ಹೋಗುತ್ತಿದೆ. ತಂತ್ರಜ್ಞಾನವು ಅಭಿವೃದ್ಧಿಗೆ ಮುಖ್ಯ. ಆದರೆ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಪತ್ರ ಸಂದೇಶವು ಇಂದು ಕಾಣದಾಗುತ್ತಿದೆ. ಇತ್ತೀಚೆಗಂತೂ ತಂತ್ರಜ್ಞಾನಗಳಿಂದ ಎಲ್ಲಾ ರೀತಿಯ ಸಂದೇಶಗಳು ರವಾನೆಯಾಗುತ್ತಿವೆ. ಈಗಿನ ಯುವಜನತೆ ಕ್ಲಾಸ್ನಲ್ಲಿ ನೋಟ್ಸ್ಗಳನ್ನು ಬರೆದುಕೊಳ್ಳಲು ಉದಾಸೀನ ತೋರುವಾಗ ಇನ್ನು ಅವರು ಪತ್ರಗಳನ್ನು ಬರೆಯುವುದು ಅಸಾಧ್ಯದ ಮಾತಲ್ಲವೇ? ನಾನಂತೂ ದಿನಕ್ಕೆ ನಾಲ್ಕು ಪತ್ರಗಳನ್ನು ಕೈ ಬರಹದಿಂದ ಬರೆದು ಪತ್ರಿಕೆಗಳಿಗೆ ಕಳಿಸುತ್ತೇನೆ.ಟಿ
-ಲತಾ ಎ., ಉಜಿರೆ


ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.