ಸಾಹಿತ್ಯದ ಒಂದು ಪ್ರಕಾರ
ದಶಕಗಳ ಹಿಂದೆ ಸಂವಹನಕ್ಕೆ ಪತ್ರಗಳೇ ಸಾಧನವಾಗಿದ್ದವು. ನಂತರ ಸ್ಥಿರ ದೂರವಾಣಿ, ಈಗ ಮೊಬೈಲ್ ಮೂಲಕ ...
ದಶಕಗಳ ಹಿಂದೆ ಸಂವಹನಕ್ಕೆ ಪತ್ರಗಳೇ ಸಾಧನವಾಗಿದ್ದವು. ನಂತರ ಸ್ಥಿರ ದೂರವಾಣಿ, ಈಗ ಮೊಬೈಲ್ ಮೂಲಕ ನೇರವಾಗಿ, ಇಲ್ಲದಿದ್ದರೆ ಎಸ್.ಎಂ.ಎಸ್ ಅನ್ನುವಂತಾಗಿದೆ. ಕೈಬರಹದ ಪತ್ರಗಳು ಸಾಹಿತ್ಯದ ಒಂದು ಪ್ರಕಾರ. ನನ್ನ ಶಾಲಾ-ಕಾಲೇಜುಗಳ ದಿನಗಳಲ್ಲಿ ತಂದೆತಾಯಿಗೆ ನನ್ನ ಬೇಡಿಕೆಗಳನ್ನೊಳಗೊಂಡ ಪತ್ರ ಬರೆದಿದ್ದುಂಟು. ಶುಭಾಷಯ ಪತ್ರ ತಯಾರಿಸಿ, ಸುಂದರ ಅಕ್ಷರಗಳಲ್ಲಿ ಬರೆದು ಬಂಧುಬಳಗಕ್ಕೆ ಕಳಿಸುತ್ತಿದ್ದೆ. ನಾನು ಕೊನೆಯದಾಗಿ ಕೈಬರಹದಲ್ಲಿ ಬರೆದದ್ದು ಪ್ರೇಮಪತ್ರ. ಟಿ
- ಡಾ. ಸಮೀರ ಹಾದಿಮನಿ, ಆಲಮೇಲ
ಮೇಲ್ ಹಾಕಿ ಬಿಡಿ ಸರ್...
ಫೋನ್ ಮತ್ತು ಈಮೇಲ್ಗಳು ಬದುಕಿನಲ್ಲಿ ದಾಂಗುಡಿಯಿಟ್ಟ ಮೇಲೆ, ಬಿಳಿ ಹಾಳೆಯ ಮೇಲೆ ಮುದ್ದು ಮುದ್ದಾಗಿ ಅರಳುತ್ತಿದ್ದ ಅಕ್ಷರಗಳು ಮಾತು ನಿಲ್ಲಿಸಿವೆ. ಅದೆಷ್ಟೋ ದೂರದಿಂದ ಹೊತ್ತು ತಂದು ಹಂಚುತ್ತಿದ್ದ ಅಂಚೆಯಣ್ಣನ ಚೀಲ ಇಂದು ನಿರಾಳವಾಗಿದೆ. ಮೊಬೈಲು ಮುಗುಳ್ನಗುತ್ತದೆ. ಹುಡುಗ, ಹುಡುಗಿಗೆ ಮೂರಕ್ಷರದ ಮೆಸೇಜು ಕುಟ್ಟಿ ನಿಟ್ಟುಸಿರಾಗುತ್ತಾನೆ. ಪ್ರೇಮಪತ್ರಗಳೂ ಇಂದು ಪ್ರಾಮುಖ್ಯತೆ ಕಳೆದುಕೊಂಡಿವೆ. ನನ್ನ ಕೈಬರಹಕ್ಕೆ ಮೇಷ್ಟ್ರ ಶಹಬ್ಬಾಷ್ಗಿರಿ ನೆನಪಾದರೆ ಕೈಬರಹ ಕಳೆದು ಹೋಯಿತೆ ಎಂಬ ಅನುಮಾನ ಕಾಡದೇ ಇರದು.
- ನಾಗೇಶ್. ಜಿ. ನಾಯಕ, ಉಡಿಕೇರಿ
ಭಾವುಕತೆಯ ಕೊರತೆ
'ಅಂಚೆ'ಯಣ್ಣನ ದಾರಿ ಕಾಯುತ್ತಿದ್ದ ಕಾಲ ಇಂದಿಗೂ ನೆನಪಾಗಿ ಉಳಿದಿರುವುದು ವಿಷಾದವೇ ಸರಿ. ದೂರದ ಊರಿನಲ್ಲಿರುವ ಅಕ್ಕ ನಮ್ಮನ್ನು ಕುರಿತಾಗಿ ವಿಚಾರಿಸುವ ಒಂದೇ ಒಂದು ವಾಕ್ಯ ಕಿವಿಯ ಮೇಲೆ ಬಿದ್ದರೆ ಅಷ್ಟಕ್ಕೆ ಸಂತೋಷ. ಎಷ್ಟೋ ಸಲ ಪತ್ರ ಓದುವಾಗ ಭಾವುಕರಾಗಿದ್ದೂ ಉಂಟು. ಕಾಲ ಬದಲಾಗಿದೆ. ಅಂತರ್ಜಾಲ ಬಲಾಢ್ಯವಾಗಿದೆ. ಎಸ್ಸೆಮ್ಮೆಸ್ಸ್, ಇ-ಮೇಲ್ಗಳು ಪತ್ರದ ಸವಿ ನೆನಪನ್ನು ಮರೆಸಿ ಮೆರೆಯುವ ಕಾಲ ಬಂದಿದೆ. ಒಟ್ಟಿನಲ್ಲಿ ಈ ಅಂತರ್ಜಾಲದ ವಹಿವಾಟಿನಲ್ಲಿ ಉತ್ತಮವಾದ ತಪ್ಪಿಲ್ಲದ ಬರವಣಿಗೆ ಮರೆಯಾಗುತ್ತಿರುವುದಂತೂ ನಿಜ. ಟಿ
- ರಾಧಾ ಆರ್., ಮೈಸೂರು
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

