'ಮೇಘದೂತ'ದಂತೆ ಪತ್ರ ದೂತ
ನಿಧಾನವಾಗಿ ಕೈ ಬರಹ ಮರೆಯಾಗುತ್ತಿದೆ. ನಮ್ಮ ಶಾಲಾ ದಿನಗಳಲ್ಲಿ ಕೈ ಬರಹ ಚೆನ್ನಾಗಿರಲು ...
ನಿಧಾನವಾಗಿ ಕೈ ಬರಹ ಮರೆಯಾಗುತ್ತಿದೆ. ನಮ್ಮ ಶಾಲಾ ದಿನಗಳಲ್ಲಿ ಕೈ ಬರಹ ಚೆನ್ನಾಗಿರಲು ಕಾಂಪೋಸಿಶನ್ ಬರೆಸುತ್ತಿದ್ದರು. ನಮ್ಮ ಹಿರಿಯ ಉಪಾಧ್ಯಾಯರಿಗೆ ಬರೆಯುತ್ತಿದ್ದ ಪತ್ರಗಳನ್ನು ಅವರು ತಿದ್ದಿ-ತೀಡಿ ನಮಗೆ ವಾಪಸ್ಸು ಕಳಿಸಿ ತರಬೇತಿ ಕೊಡುತ್ತಿದ್ದರು. ಲಗ್ನವಾದ ಹೊಸದರಲ್ಲಿ ಗಂಡ-ಹೆಂಡಿರ ನಡುವೆ ನಡೆಯುತ್ತಿದ್ದ ಪ್ರೇಮಪತ್ರಗಳು ನಿಜಕ್ಕೂ ಕಾಳಿದಾಸನ 'ಮೇಘದೂತ'ದಂತೆ ಪತ್ರದೂತವಾಗಿರುತ್ತಿತ್ತು. ಕಂಪ್ಯೂಟರ್ ಮುಖೇನ ಬರುವ ಸಂದೇಶದಲ್ಲಿ ಯಾವ ಭಾವ-ರಾಗ ಇದೆ? ಕೈ ಬರಹದ ಸಂಸ್ಕೃತಿ ಇಲ್ಲವಾಗುತ್ತಿರುವುದು ಖೇದಕರ.ಟಿ
ಟಲಲಿತಾರಾವ್, ಬೆಂಗಳೂರು
5 ದಶಕಗಳಿಂದ ಬರೆಯುತ್ತಿದ್ದೇನೆ
'ನೀವು ಈಗಲೂ ಕೈ ಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಎಂಬ ಅನುಮಾನವೇಕೆ? ಈಗಲೂ, ಮುಂದೂ ಬರೆಯುವ ಜನ ಇದ್ದೇ ಇರುತ್ತಾರೆ. ನಾನಂತೂ ಐವತ್ತೈದು ವರ್ಷಗಳಿಂದ ತಿಂಗಳಿಗೆ 5-6 ಪತ್ರಗಳನ್ನು ಬರೆಯುತ್ತಾ ಬಂದಿದ್ದೇನೆ. ಪ್ರಕಾಶಕರಿಗೆ, ಸಾಹಿತಿಗಳಿಗೆ, ಪತ್ರಿಕೆಗಳಿಗೆ ಕೆಲವರು ಬರೆಯುತ್ತಾರೆ. ತಾವೇ ತಿಳಿಸಿದಂತೆ ಪತ್ರಿಕೆಗಳು ನುಡಿಯಲ್ಲಿ ಟೈಪ್ ಮಾಡಬೇಕೆಂದು ಒತ್ತಾಯ ಹೇರುವವರೆಗೂ ಬರೆಯುತ್ತೇನೆ. ಆತ್ಮೀಯರಿಗೆ ಪತ್ರ ಬರೆಯುವುದೇ ಬಂಧತ್ವದ ಕುಣಿಕೆ. ಇದು ಉಳಿಯಬೇಕಲ್ಲವೇ? ಟಿ
ಟಜಿ ರಾಜನ್, ತುಮಕೂರು
ಪರಂಪರೆಯನ್ನು ಉಳಿಸಿ
ಈ ಮನ್ವಂತರದಲ್ಲಿ ಬದಲಾವಣೆಯ ಅಗತ್ಯ ಕಾಣುತ್ತಿದೆ. ನಮ್ಮ ಪತ್ರ ಪರಂಪರೆಯ ಗಟ್ಟಿತನದ ಮಜಲುಗಳು ಜಾರುತ್ತಿವೆ. ಪಳೆಯುಳಿಕೆಗಳಾಗುತ್ತಿವೆ. ನಮಗೆ ಸಂತಸ ನೀಡುವ ಮಾಧ್ಯಮವೇ ಪತ್ರ. ಕಡಿಮೆ ದರದಲ್ಲಿ ನಮ್ಮ ಎಲ್ಲಾ ವಿಷಯವನ್ನು ದೇಶದ ಯಾವ ಭಾಗದಲ್ಲಿರಲಿ ತಿಳಿಸಬಹುದು. 50 ಪೈಸೆಯ ಪತ್ರ ನಮ್ಮ ಬದುಕಿನ ಸಂಪರ್ಕ ಕೊಂಡಿಗಳು ಹಾಗೂ ಸ್ನೇಹ ಬಾಂಧವ್ಯದ, ವ್ಯವಹಾರದ ಕೊಂಡಿಗಳು. ಇವೆಲ್ಲ ಮುಂದಿನ ಪೀಳಿಗೆಗೆ ದಾಖಲೆಗಳು. ಆದಕಾರಣ ಇದನ್ನು ಉಳಿಸಿಕೊಳ್ಳಬೇಕಾಗಿದೆ. ಪತ್ರ ಬರೆಯುವುದನ್ನು ಒಂದು ಹವ್ಯಾಸವೆಂದು ಪರಿಗಣಿಸಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು. ಉಳಿಸಬೇಕು.ಟಿ
ಟವೇದಮೂರ್ತಿ ಮದ್ದೇರು, ಚಿತ್ರದುರ್ಗ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

