ಬೈಟುಕಾಫಿ

ತಂತ್ರಜ್ಞಾನದ ಮೋಡಿ!

Published On :

ಕಾಲ ಉರುಳಿದಂತೆ ಹಲವು ಬದಲಾವಣೆಗಳು ಆಗಿ ಹೋಗುತ್ತಿದೆ. ಇದಕ್ಕೆ ಮೂಲ ಕಾರಣ ತಂತ್ರಜ್ಞಾನದ ಮೋಡಿ. ಹಿಂದೆ ಪತ್ರ ಬರಹವನ್ನೇ ನಂಬಿ ಜೀವನ ನಡೆಸುತ್ತಿದ್ದವರು ಇಂದು ಪತ್ರ ಸಂಸ್ಕೃತಿಯನ್ನೇ ಮರೆತಿರುವುದು ವಿಷಾದನೀಯ. ಮೊಬೈಲ್ ಮೋಡಿಗೆ ಒಳಗಾಗಿರುವ ಮನುಷ್ಯನ ಈ ವ್ಯವಸ್ಥೆಯಿಂದ ಪತ್ರ ಬರಹ ಮೂಲೆ ಗುಂಪಾಗಿದೆ. ಅಲ್ಲದೆ ಪತ್ರ ಬರೆಯುವಂತಹ ಹವ್ಯಾಸಿಗರಿಗೂ ಇರಿಸು ಮುರಿಸು ತರಿಸಿದೆ. ನಾನೂ ತಂತ್ರಜ್ಞಾನಕ್ಕೆ ಒಳಗಾಗಿರುವದು ಸತ್ಯ. ಇದೀಗ ಪತ್ರ ಬರೆಯುವುದೆಂದರೆ ಅಲರ್ಜಿಯಾಗಿ ಪರಿಣಮಿಸಿದೆ. ಟಿ
= ಮಹಾಂತೇಶ ರಾಜಗೋಳಿ,  ಬೈಲಹೊಂಗಲ

ಕೈ ಬರಹದ ಮೋಡಿ ಚೆಂದ
ನನ್ನ ದೃಷ್ಟಿಯಲ್ಲಿ ಕೈ ಬರಹ ಬೇಕೇಬೇಕು. ಎಷ್ಟೇ ಕಂಪ್ಯೂಟರೀಕರಣವಾದರೂ ಈ ಸಂಸ್ಕೃತಿಗೆ ಸಾಟಿ ಇಲ್ಲ. ಹಾಗೆಂದು ತಂತ್ರಜ್ಞಾನವನ್ನು ಅಲ್ಲಗಳೆಯಲಾಗದು. ಮುಂದಿನ ಜನಾಂಗಕ್ಕೆ ಅದೂ ಬೇಕು. ನಾನು ಕಲಾವಿದನಾದ್ದರಿಂದ ಬರಹವಿಲ್ಲದೇ ಬದುಕಲಾರೆ. ಚಿತ್ರ ಬರೆಯುವ ನಾನು ಅಕ್ಷರವನ್ನು ದುಂಡಗೆ ಬರೆಯುತ್ತೇನೆ. ನಾನು ನನ್ನ ಹೆತ್ತವರಿಗಾಗಲಿ, ಸಹೋದರ-ಸಹೋದರಿಯರಿಗಾಗಲಿ ಪತ್ರ ಬರೆದವನೇ ಅಲ್ಲ. ಕಾರಣ ಬಾಲ್ಯದಿಂದ ಎಲ್ಲರೊಂದಿಗೆ ಒಡನಾಡಿಕೊಂಡೇ ಇದ್ದೆ. ದೂರದೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ ಆ ಪ್ರಮೇಯ ಒದಗುತ್ತಿತ್ತೇನೋ? ಟಿ
= ಪ್ರಸನ್ನ, ಚೋಳೇನಹಳ್ಳಿ

ಅದರ ಸಂವೇದನೆಯೇ ಬೇರೆ
3ಡಿ ಆ್ಯನಿಮೇಷನ್ ಗೊತ್ತಿರುವುದಲ್ಲದೇ ಕಂಪ್ಯೂಟರ್ ಗ್ರಾಫಿಕ್‌ನಲ್ಲೇ ಕೆಲಸ ಮಾಡುತ್ತಿರುವ ನನಗೆ ಕೈ ಬರಹವೇ ಇಷ್ಟ! ಅದರಲ್ಲಿರುವ ಸಂವೇದನೆಯೇ ಬೇರೆ. ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಪ್ಪ-ಅಮ್ಮನಿಗೆ ಪತ್ರ ಬರೆಯಲೇ ಬೇಕಿತ್ತು. ನನ್ನ ಅಪ್ಪ-ಅಮ್ಮನ ಬಳಿ ಆಗ ಫೋನ್ ಇರಲಿಲ್ಲವೆಂಬುದು ಕೂಡ ಅನುಕೂಲಕರವಾದ ಸಂಗತಿಯಾಗಿತ್ತು. ಆದರೆ ಈಗ ಮೊಬೈಲ್‌ಮಯವಾಗಿ ಪತ್ರ ವ್ಯವಹಾರ ಮಾಯವಾಗುತ್ತಿದೆ. ಎಷ್ಟೆ ಎಸ್ಸೆಮ್ಮೆಸ್ಸು ಕಳಿಸಿದರೂ ಕೈ ಬರಹದಲ್ಲಿ ಬರೆಯುವ ವಿಷಯಗಳು ಅಲ್ಲಿ ಇಲ್ಲವಾಗಿವೆ ಎನ್ನುವುದೇ ವಿಷಾದಕರ.ಟಿ
= ನಾಗೇಂದ್ರ ಎಚ್. ಎಸ್, ಹಾಸನ

ಫೋನ್ ಮತ್ತು ಈಮೇಲ್‌ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.