ಅಳೋಕ್ನಾಥ್ ಅಲ್ಲ ಅಲೋಕ್ನಾಥ್

-ಇಂಟರ್ನೆಟ್ ಅಣಕದ ಹೊಸ ತುತ್ತು ಈ ಅಲೋಕ್ನಾಥ್
ಈ ಟ್ವಿಟ್ಟರ್ ಫೇಸ್ಬುಕ್ ಮಂದಿ ಅದೆಲ್ಲಿಂದ ಕಾಮಿಡಿ ಕ್ಯಾರೆಕ್ಟರ್ಗಳನ್ನು ಹುಡುಕ್ತಾರೋ, ಅವರಿಗೊಂದು ಸಲಾಂ ಹೇಳಲೇಬೇಕು. ರಜನಿಕಾಂತ್, ರವಿಂದ್ರ ಜಡೇಜ, ಅಲಿಯ ಭಟ್, ರಾಹುಲ್ ಗಾಂಧಿ, ಉಷಾ ಉತ್ತುಪ್, ಹೀಗೆ ಅವರ ಕೈಲಿ ಜೋಕಾಗಿ ಜೋತಾಡದವರೇ ಇಲ್ಲ. ಅದಕ್ಕೆ ಇತ್ತೀಚೆಗಿನ ಸೇರ್ಪಡೆ ಬಾಲಿವುಡ್ನ ಹಿರಿಯ ಪೋಷಕ ನಟ ಅಲೋಕ್ನಾಥ್.
ಅಲೋಕ್ನಾಥ್ ಹಿಂದಿ ಚಿತ್ರರಂಗದ 'ಬಾಬೂಜಿ' ಅಂತಲೇ ಫೇಮಸ್ಸು. ಹೆಚ್ಎಂಟಿ (ಹೆಣ್ಮಕ್ಳ ತಂದೆ)ಅಂತಲೂ ಕರೀತಾರೆ. ಬಾಲಿವುಡ್ನ ಅತ್ಯಂತ ಸಂಸ್ಕಾರವಂತ ನಟ ಯಾರು ಅಂತ ಕೇಳಿದರೆ ಜನ ತೋರಿಸುವುದು ಅಲೋಕ್ನಾಥ್ರನ್ನೇ. ಯಾಕಂದ್ರೆ ಬಹುತೇಕ ಚಿತ್ರಗಳಲ್ಲಿ ಇವರು ಕನ್ಯಾಪಿತೃವಾಗಿಯೇ ನಟಿಸಿರೋದು. ಹೆಣ್ಣನ್ನು ಕೆಟ್ಟದಾಗಿ ನೋಡೋ ಪಾತ್ರ ಮಾಡಿದ್ದೇ ಅಪರೂಪ. ಮದುವೆ ದೃಶ್ಯ, ಸೆಂಟಿಮೆಂಟ್ ಸ್ಸೀನು ಇತ್ಯಾದಿ ಇದೆ ಅಂದ್ರೆ ಅಲ್ಲಿ ಅಲೋಕ್ನಾಥ್ ಇರಲೇಬೇಕು. ಇಂತಿಪ್ಪ ಅಲೋಕ್ನಾಥ್ ಮೇಲೆ ಸದ್ಯಕ್ಕೆ ಟ್ವಿಟ್ಟರ್ ಹಕ್ಕಿ ಕಣ್ಣು ಬಿದ್ದಿದ್ದು ರಾಶಿಗಟ್ಟಲೆ ಜೋಕುಗಳು ಹರಿದಾಡುತ್ತಿವೆ. ಮೊನ್ನೆಯಷ್ಟೇ ಐವತ್ತೇಳು ವರ್ಷ ತುಂಬಿದ ಅಲೋಕ್ನಾಥ್ಗೆ ಇವರೆಲ್ಲ ಸೇರಿ ಅರವತ್ತನೇ ವಯಸ್ಸಿನ ಷಷ್ಟಿಪೂರ್ತಿ ಮಾಡಲು ಈಗಲೇ ತಯಾರಾಗಿದ್ದಾರೆ.
ಒಂದಷ್ಟು ಅಲೋಕ್ನಾಥ್ ಜೋಕ್ ನಿಮಗಾಗಿ. ಕಣ್ಣೀರ್ ಹಾಕೋ ಹಾಗಿಲ್ಲ ಎಂಬ ಷರತ್ತಿನ ಮೇಲೆ!
= ಅಲೋಕ್ ನಾಥ್ ನೋಡೋ ಟಿವಿ ಚಾನಲ್ : ಸಂಸ್ಕಾರ್, ಭಕ್ತಿ ಸಂಗೀತ್
= ಅಲೋಕ್ನಾಥ್ ಹುಟ್ಟಿದಾಗ ನರ್ಸ್ ಅಲೋಕ್ ತಾಯಿಗೆ ಹೇಳಿದ್ದು : ಒಳ್ಳೆ ಸುದ್ದಿ. ನೀವು ಹೆಣ್ಮಗುವಿನ ತಂದೆಗೆ ಜನ್ಮ ಕೊಟ್ಟಿದೀರಿ!
= ಅಲೋಕ್ ಮನೆಗೆ ಅಪರಿಚಿತ ಹೆಣ್ಮಕ್ಕಳು ಬಂದರೂ, ಹೊಸಿಲಿನ ಮೇಲೆ ಅಕ್ಕಿ ಸೇರಿಟ್ಟು ಒದ್ದು ಬರೋಕೆ ಹೇಳಿ ಮನೆದುಂಬಿಸ್ಕೊಳ್ತಾರೆ.
= ಅಲೋಕ್ನಾಥ್ ಹೇಳೋದು : ಭಾರತೀಯರೆಲ್ಲ ನನ್ನ ಬೀಗರ ಸಮಾನ !
= ಅಲೋಕ್ನಾಥ್ ಲೆಸ್ಬಿಯನ್ ಮದುವೆಗಳನ್ನು ಬೆಂಬಲಿಸುತ್ತಾರೆ. ಕಾರಣ : ಎರಡು ಕನ್ಯಾದಾನ ಜತೆಗೇ ಮಾಡಬಹುದು ಅಂತ !
= ಅಲೋಕ್ನಾಥ್ ಎಷ್ಟು ಸಂಸ್ಕಾರಿ ಅಂದರೆ ಮೊಬೈಲಲ್ಲಿ ಟೆಂಪಲ್ರನ್ ಆಡುವಾಗಲೂ ಅವರು ಚಪ್ಪಲಿ ಬಿಚ್ಚಿಡುತ್ತಾರೆ.
= ಅಲೋಕ್ನಾಥ್ರ ವಾಟ್ಸಾಪ್ ಸ್ಟೇಟಸ್ ಹೀಗಿರುತ್ತದೆ : ಲಾಸ್ಟ್ ಕನ್ಯಾದಾನ ಡನ್ ಅಟ್...
= ಅಲೋಕ್ ನಾಥ್ಗೆ ಫೇಸ್ಬುಕ್ಕಲ್ಲಿ ಫ್ರೆಂಡ್ಸೇ ಇಲ್ಲ. ಯಾಕಂದ್ರೆ ಅವ್ರು ಸ್ನೇಹಿತರನ್ನು ಸಂಬಂಧಿಗಳನ್ನಾಗಿ ಮಾಡಿಕೊಳ್ತಾರೆ.
= ಅಲೋಕ್ನಾಥ್ ಎಷ್ಟು ಡೀಸೆಂಟ್ ಅಂದ್ರೆ ಸ್ನಾನ ಮಾಡಬೇಕಾದರೂ ಕಣ್ಣು ಮುಚ್ಚಿಕೊಳ್ತಾರೆ.
= ಅಲೋಕ್ನಾಥ್ ಬ್ಯಾಚಲರ್ ಪಾರ್ಟಿಯನ್ನು ವೈಷ್ಣೋದೇವಿ ದೇವಸ್ಥಾನದಲ್ಲಿ ಕೊಟ್ಟಿದ್ದರಂತೆ.
ಅಲೋಕ್ನಾಥ್ರ ವಿಕಿಪೇಜ್ ಪ್ರಕಾರ ಅತಿ ಹೆಚ್ಚು ಕನ್ಯಾದಾನ ಮಾಡಿದ ದಾಖಲೆ ಅವರ ಹೆಸರಲ್ಲಿದೆಯಂತೆ.
= ಅಲೋಕ್ನಾಥ್ ಜುಕರ್ಬರ್ಗ್ಗೆ ಮನವಿ ಮಾಡಿದ್ದಾರಂತೆ : ಫೇಸ್ಬುಕ್ನಲ್ಲಿ ಆಶೀರ್ವಾದ ಬಟನ್ ಬೇಕು ಅಂತ!
= ಅಲೋಕ್ನಾಥ್ಗೆ ಸಿನಿಮಾದಲ್ಲಿ ವಿಲನ್ ರೋಲ್ ಕೊಟ್ರೆ ಸಿಗರೇಟಿನ ಬದಲು ಊದಿನಕಡ್ಡಿ ಸೇದುತ್ತಾರಂತೆ.
= ಅವರು ತುಂಬಾ ನಿಧಾನ ನಡೆಯುತ್ತಾರಂತೆ. ಯಾಕಂದ್ರೆ 'ಬಾಬೂಜಿ ಧೀರೆ ಚಲ್ನಾ..' ಹಾಡು ತಮಗೇ ಹೇಳಿದ್ದು ಅಂದ್ಕೊಂಡಿದ್ದಾರೆ
= ಅಲೋಕ್ಗೆ ಫುಟ್ಬಾಲ್ ಇಷ್ಟವಿಲ್ಲ. ಅವರು ಚೆಂಡು ಕಾಲಿಗೆ ತಾಕಿದರೆ ನಮಸ್ಕಾರ ಮಾಡುತ್ತಾರೆ.
= ಅಲೋಕ್ನಾಥ್ ಸೆಲ್ಫಿ ಕ್ಲಿಕ್ ಮಾಡಿಕೊಂಡರೆ ಅದರಲ್ಲಿ ಅವರ ಐವತ್ತೆರಡು ಜನ ಸಂಬಂಧಿಗಳು, ದೇವರ ಫೋಟೋ, ಮನೆ ಕೆಲಸದವರು, ಸಾಕಿದ ನಾಯಿ ಎಲ್ಲರೂ ಇರ್ತಾರೆ.
= ಅಲೋಕ್ನಾಥ್ ಸ್ಕೂಲ್ಗೆ ಚಕ್ಕರ್ ಹಾಕಿ ದೇವಸ್ಥಾನಕ್ಕೆ ಹೋಗ್ತಿದ್ದರಂತೆ!
ಇದು ಬರೀ ಟ್ರೇಲರ್. ಅಸಲೀ ಫಿಲ್ಮ್ ಬೇಕಂದ್ರೆ ಒಮ್ಮೆ ನೀವೇ ಗೂಗಲ್ ಹೊಕ್ಕು ನೋಡಿ. ನಕ್ಕು ನಲಿಯಿರಿ. ಆಶೀರ್ವಾದ ಪಡೆಯೋದ್ ಮಾತ್ರ ಮರೀಬೇಡಿ !
= ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


