ಹೊಲದಲ್ಲೇ ಎಂಎಸ್ಜಿ ಸಂಸ್ಕರಣೆ

ಕಳವಳಕಾರಿ ಸಂಗತಿ ಏನೆಂದರೆ ವ್ಯಕ್ತಿ ಎಷ್ಟು ಬೇಗ ಎಂಎಸ್ಜಿ (ಮೊನೊ ಸೋಡಿಯಂ ಗ್ಲುಟಮೇಟ್) ಆಹಾರಗಳಿಗೆ ದಾಸನಾಗುತ್ತಾನೆಯೋ ಅಷ್ಟೇ ಬೇಗ ಆತನ ನರವ್ಯೂಹದ ಸಾಮರ್ಥ್ಯ ಕ್ಷೀಣಿಸುತ್ತ ಬರುತ್ತದೆ ಎನ್ನುವುದು. ಈಗೀಗ ಶಿಶು ಆಹಾರ (ಬೇಬಿ ಫುಡ್)ಗಳಲ್ಲಿಯೂ ಎಂಎಸ್ಜಿ ಇರುತ್ತದೆ. ಮೂರ್ನಾಲ್ಕು ದಶಕಗಳ ಹಿಂದಿನವರೆಗೂ ಸಂಸ್ಕರಿತ ಆಹಾರ ತಯಾರಕರು ಸ್ವಯಂಪ್ರೇರಣೆಯಿಂದ ಶಿಶು ಆಹಾರದಲ್ಲಿ ಎಂಎಸ್ಜಿ ಇರದಿರುವಂತೆ ನಿಗಾ ವಹಿಸುತ್ತಿದ್ದರು. ಬರುತ್ತಬರುತ್ತ ಆ ಕಳಕಳಿ ಕ್ಷೀಣಿಸತೊಡಗಿದೆ. ಎಂಎಸ್ಜಿ ದುಷ್ಟರಿಣಾಮ ವಯಸ್ಕರಿಗಿಂತ ಮಕ್ಕಳಲ್ಲಿ ನಾಲ್ಕು ಪಟ್ಟು ಅಧಿಕ. ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಎಂಎಸ್ಜಿ ಎಳೆಯ ಮೆದುಳನ್ನು ಘಾಸಿಗೊಳಿಸಬಲ್ಲದು ಎನ್ನುವುದು ದೃಢಪಟ್ಟಿದೆ. ಮಕ್ಕಳಿಗೆ ಐದು ವರ್ಷ ತುಂಬುವವರೆಗಾದರೂ ಮನೆಯಲ್ಲಿ ಮಾಡಿದ ಆಹಾರವನ್ನೇ ಕೊಡಿ ಎಂದು ಶಿಶು ತಜ್ಞರು, ಮಕ್ಕಳ ತಜ್ಞರು ಹೇಳುವುದು ಇದೇ ಕಾರಣಕ್ಕೆ. ಮಕ್ಕಳ ಆಹಾರ ಕೊಳ್ಳುವಾಗ ದಯವಿಟ್ಟು ಲೇಬಲ್ ಗಮನಿಸಿ. ಅದರಲ್ಲಿ 'ಒಮೆಗಾ ಪ್ರೊಟೀನ್ ರೀಫೈನ್ಡ್', 'ಹೈಡ್ರೊಲೈಸ್ಡ್ ಫಿಶ್ ಎಮಲ್ಶನ್', 'ಸ್ಟೀಮ್ ಹೈಡ್ರೊಲೈಸ್ಡ್' ಎನ್ನುವುದು ಇದ್ದರೆ ಅವನ್ನು ಖರೀದಿಸಬೇಡಿ. ಏಕೆಂದರೆ ಅವುಗಳಲ್ಲಿ ಎಂಎಸ್ಡಿ ಜಾಸ್ತಿ ಇರುತ್ತದೆ.
ಕೆಲವು ವಾಣಿಜ್ಯ ಬೆಳೆಗಳನ್ನು ಬೆಳೆಯುವಾಗಲೇ ಆಕ್ಸಿಗ್ರೊ ಎನ್ನುವ ರಾಸಾಯನಿಕ ದ್ರಾವಣ ಬಳಸಿ ಎಂಎಸ್ಜಿ ಸಂಸ್ಕರಣೆಗೆ ಒಳಪಡಿಸಿರುತ್ತಾರಂತೆ! ಹಣ್ಣು, ತರಕಾರಿ, ಬೆಳೆಗಳ ಮೇಲೆ ಇದನ್ನು ಸಿಂಪಡಿಸಿಬಿಟ್ಟರೆ ಮುಗಿಯಿತು. ದ್ರಾಕ್ಷಿ, ಸೌತೆ, ಈರುಳ್ಳಿ, ಶೇಂಗಾ, ಆಲೂಗಡ್ಡೆ, ಸ್ಟ್ರಾಬೆರ್ರಿ, ಟೊಮೆಟೊ, ಬ್ರಕೋಲಿ, ಕ್ಯಾಬೇಜ್ ಇತ್ಯಾದಿ ಬೆಳೆಗಳಲ್ಲಿ ಆಕ್ಸಿಗ್ರೊ ಬಳಕೆಗೆ ಅನುಮತಿ ನೀಡುವಂತೆ ಅದರ ಉತ್ಪಾದಕ ಕಂಪನಿ ದಶಕಗಳ ಹಿಂದೆಯೇ ಮನವಿ ಮಾಡಿತ್ತು. ಆದರೆ ಅಮೆರಿಕ ಸಾರಾಸಗಟು ಈ ಪ್ರಸ್ತಾಪ ತಳ್ಳಿಹಾಕಿತ್ತು. ನೆಮ್ಮದಿ ಏನೆಂದರೆ ಈಗ ಜಗತ್ತಿನಲ್ಲಿ ಎಲ್ಲಿಯೂ ಹೊಲದಲ್ಲಿಯೇ ಫಸಲನ್ನು ಆಕ್ಸಿಗ್ರೊ ಮೂಲಕ ಎಂಎಸ್ಜಿ ಸಂಸ್ಕರಣೆಗೆ ಒಳಪಡಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ತುಸು ತುಟ್ಟಿ ಅನ್ನಿಸಿದರೂ ಸಾವಯವ ಉತ್ಪನ್ನಗಳನ್ನೇ ಬಳಸುವುದು ಒಳ್ಳೆಯದು. ಕೆಲವು ಸಂಸ್ಥೆಗಳು ನೇರವಾಗಿ ಬೆಳೆದವನಿಂದ ಬಳಕೆದಾರನಿಗೆ ತಲುಪಿಸುವ ಪ್ರಯತ್ನ ಮಾಡುತ್ತಿರುವುದೂ ಒಳ್ಳೆಯ ಬೆಳವಣಿಗೆಯೇ.
ನಿಮ್ಮ ಮಕ್ಕಳ ವರ್ತನೆ ಮೇಲೆ ಆಹಾರ ಪರಿಣಾಮ ಬೀರಬಾರದು ಅಂತಾದರೆ ಹಣ್ಣು, ತರಕಾರಿ, ಸೊಪ್ಪನ್ನು ಜಾಸ್ತಿ ಕೊಡಿ. ಸಮತೋಲಿತ ಆಹಾರಕ್ಕೆ ಆದ್ಯತೆ ಇರಲಿ. ಕೃತಕ ಸಕ್ಕರೆ ಸೇರಿದಂತೆ ಎಲ್ಲಾ ಬಗೆಯ ಕೃತಕ ಸಿಹಿ ಬಗ್ಗೆ ಎಚ್ಚರ ಇರಲಿ. ಸಂಸ್ಕರಿತ ಆಹಾರ ವರ್ಜಿಸುವ ಅಥವಾ ಕಡಿಮೆ ಮಾಡುವ ಮೂಲಕ ಎಂಎಸ್ಜಿ ಇನ್ಟೇಕ್ ಅನ್ನು ನಿಯಂತ್ರಿಸಿ.
ಸೂಚನೆ: ಈ ಸಲಹೆಗಳು ವಯಸ್ಕರಿಗೂ ಅನ್ವಯಿಸುತ್ತವೆ!
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


