ಬೈಟುಕಾಫಿ

ಗ್ರಂಥಗಳೇಕೆ?

ಗ್ರಂಥಗಳೇಕೆ?
Published On :

ಇಂದಿನ ಇಂಟರ್‌ನೆಟ್ ಯುಗದಲ್ಲಿ ಮಾಹಿತಿಗೆ ಯಾವ ಕೊರತೆಯೂ ಇಲ್ಲ. ಯಾರು ಬೇಕಾದರೂ ಅಂತರ್ಜಾಲ ಸಂಪರ್ಕವಿದ್ದರೆ ತಾವು ಸರ್ವಜ್ಞರೆಂದು ತೋರಿಸಿಕೊಳ್ಳಬಹುದು. ಆದರೆ ಹೀಗೆ ತೋರಿಸಿಕೊಳ್ಳುವುದಕ್ಕೂ ತುಸು ಅರಿವು ಬೇಕಾಗುತ್ತದೆ. ಮಾಹಿತಿಯೆಲ್ಲವೂ ಜ್ಞಾನವಲ್ಲ. ನಮ್ಮೆದುರು ಸಾವಿರಗಟ್ಟಲೆ ಪುಟಗಳಷ್ಟು ಮಾಹಿತಿಯ ಭಂಡಾರವೇ ಇರಬಹುದು. ಆದರೆ ಅದನ್ನು ಸರಿಯಾದ ಉಪಯೋಗಿಸಿಕೊಳ್ಳುವ ವಿವೇಕ ಇಲ್ಲದಿದ್ದರೆ ಆ ಮಾಹಿತಿಯ ಸಾಗರದಿಂದ ಏನು ಪ್ರಯೋಜನ? ಮಾಹಿತಿ ಭಂಡಾರದಿಂದ ಯಾವುದನ್ನು, ಎಲ್ಲಿಂದ, ಎಷ್ಟು ಪ್ರಮಾಣದಲ್ಲಿ ಹೆಕ್ಕಿಕೊಳ್ಳಬೇಕು ಎಂಬ ತಿಳಿವು ನಾವು ಗ್ರಂಥಗಳನ್ನು ಓದಿ ಪಕ್ವಗೊಳಿಸಿಕೊಂಡ ಬುದ್ಧಿಯಿಂದ ಬರುವಂಥದು. ಓದಿನ ಖುಷಿಯು, ಮನುಷ್ಯ ಕಂಡುಕೊಂಡ ಅತ್ಯಪೂರ್ವವಾದೊಂದು ಸುಖ. ಬ್ರಹ್ಮಾನಂದವನ್ನು ನಾನು ಕಂಡರಿಯೆವು, ಸಂಗೀತದಿಂದ ದೊರೆಯುವ ಆನಂದವನ್ನು ಅನುಭವಿಸಬಲ್ಲೆವು. ಓದಿನ ಸುಖವೂ ಅಂಥ ಒಂದು ರಸಾನುಭವ. ಅದು ಮಾತಿಗೆ ಮಿಗಿಲಾದದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.