ಎಲ್ಪಿಜಿ ಹುಜೂರ್!

ರೈಲು ಪ್ರಯಾಣ ದರ ಏರಿಕೆ ಆಯಿತು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಏರಿಕೆ ಆಯಿತು. ಇದೀಗ ಅಡುಗೆ ಅನಿಲದ ಸರದಿ. ಅಡುಗೆ ಅನಿಲದ ಬೆಲೆ ಏರಿಸುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಪ್ರಕಟಣೆ ಯಾವ ಕ್ಷಣದಲ್ಲೂ ಹೊರಬೀಳಬಹುದು. ಇಂತಹ ಸನಿವೇಶದಲ್ಲಿ ಬೆಲೆ ಏರಿಕೆಯ ತಾಪ ದಿಂದ ಪಾರಾಗಲು ಮುನೆಚ್ಚರಿಕೆ ವಹಿಸಬೇಕಾದ್ದು ಅವಶ್ಯಕ. ಅಡುಗೆ ಅನಿಲದ ಖರ್ಚನು ಕಡಿಮೆ ಮಾಡಿಕೊಳ್ಳುವುದೊಂದೇ ನಮಗಿರುವ ಉಪಾಯ. ಆ ನಿಟ್ಟಿನಲ್ಲಿ ಕೆಲವೊಂದು ಉಪಾಯಗಳನು ಇಲ್ಲಿ ಗಮನಿಸೋಣ.
ನೆನೆಸಿಡಿ: ದವಸ ಧಾನ್ಯಗಳು ಮತ್ತು ಬೇಳೆಗಳನು ಬೇಯಿಸಬೇಕಾದ ಸಂದರ್ಭದಲ್ಲಿ ಅಡುಗೆಗೆ ಮುನ, ಸ್ವಲ್ಪ ಕಾಲ ನೆನೆಸಿಡಿ. ಇದರಿಂದ ಇವು ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ಇಂಧನ ಉಳಿತಾಯವಾಗುತ್ತದೆ.
ತಾಪಮಾನಕ್ಕೆ ಹೊಂದಿಕೊಳ್ಳುವಂತೆ ಮಾಡಿ: ರೆಫ್ರಿಜರೇಟರ್ನಿಂದ ಬಿಸಿ ಮಾಡಲು ಅಥವಾ ಮರುಬಳಕೆಗೆಂದು ಆಹಾರ ಪದಾರ್ಥಗಳನು ಹೊರತೆಗೆದಾಗ ಅವು ರೂಂ ಟೆಂಪರೇಚರ್ ಅಥವಾ ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳಲು ಬಿಡಿ. ನಂತರ ಬಿಸಿ ಮಾಡಿ ಅಥವಾ ಅಡುಗೆ ಮಾಡಿ. ಇದರಿಂದ ಇಂಧನ ಉಳಿತಾಯವಾಗುತ್ತದೆ.
ಅಡುಗೆ ಅನಿಲದ ಮಿತವ್ಯಯ ಸಾಧಿಸುವುದು ಹೇಗೆ?
ಪಾತ್ರೆ: ಅಡುಗೆಗೆ ನೀವು ಬಳಸುವ ಪಾತ್ರೆ ಸಹಾ ಇಂಧನ ಉಳಿತಾಯದಲ್ಲಿ ನೆರವಾಗುತ್ತದೆ. ಅಗಲ ತಳದ ಪಾತ್ರೆ ಬಳಕೆ ಜತೆ, ಅದರ ಮೇಲೆ ಮುಚ್ಚಳ ಮುಚ್ಚಿಡುವುದನೂ ಮರೆಯಬೇಡಿ. ಅಗಲ ತಳದ ಪಾತ್ರೆಗಳು ಸ್ಥಳ ಹೆಚ್ಚಳಕ್ಕೆ ನೆರವಾಗುತ್ತವೆ ಮತ್ತು ಬೇಗ ಬೇಯಲು ಸಹಕಾರಿಯಾಗುತ್ತವೆ.
ಸೂಕ್ತ ಪ್ರಮಾಣದಲ್ಲಿ ನೀರು: ಅಡುಗೆ ಮಾಡುವಾಗ ಸರಿಯಾದ ಪ್ರಮಾಣದಲ್ಲಿ ನೀರು ಬಳಕೆ ಬಗ್ಗೆ ಗಮನ ಇರಲಿ.
ಕಡಿಮೆ ಉರಿ ಇರಲಿ: ನೀರನು ಕುದಿಸುವ ಸಂದರ್ಭದಲ್ಲಿ, ನೀರು ಕುದಿ ಬಂದ ನಂತರ ಉರಿಯನು ಕಡಿಮೆ ಮಾಡಿ. ಸ್ಟವ್ನ ನಾಬ್ ಅನು ಮಂದ ಉರಿಗೆ ತಿರುಗಿಸಿ.
ಪ್ರೆಶರ್ ಕುಕ್ಕರ್: ಪ್ರೆಶರ್ ಕುಕ್ಕರ್ ಬಳಸಿ ಅಡುಗೆ ಮಾಡುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಇಂಧನ ಉಳಿತಾಯ ಸಾಧ್ಯ. ಪ್ರೆಶರ್ ಕುಕ್ಕರ್ನಲ್ಲಿ ವಿಭಿನ ಪ್ರಕಾರದ ಪಾತ್ರಗಳ ಬಳಕೆಯ ಸೌಲಭ್ಯವೂ ಇರುವ ಕಾರಣ ಇಂಧನ ಉಳಿತಾಯವಾಗುತ್ತದೆ.
ಸಿದ್ಧತೆ ಇರಲಿ: ಅಡುಗೆಗೆ ಬೇಕಾದ ಎಲ್ಲ ಪದಾರ್ಥಗಳನು ಸಿದ್ಧ ಮಾಡಿ ಇಟ್ಟುಕೊಂಡ ನಂತರವಷ್ಟೇ ಅಡುಗೆ ಶುರುಮಾಡಬೇಕು. ಪಾತ್ರೆಯನು ಸ್ಟವ್ ಮೇಲಿಟ್ಟ ನಂತರವಷ್ಟೇ ಉರಿ ಹೊತ್ತಿಸಿ. ತರಕಾರಿ ಇತ್ಯಾದಿಗಳನು ಹೆಚ್ಚಿಕೊಳ್ಳುವ ಮುನವೇ ಸ್ಟ್ಟವ್ ಹೊತ್ತಿಸಬೇಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


