ಬೈಟುಕಾಫಿ

ಕಾಮಿನಿ ಕಾಂಚಾಣ

ಕಾಮಿನಿ ಕಾಂಚಾಣ
Published On :

ಹಿಂದಿ ಚಿತ್ರರಂಗದ ನಾಯಕರ ನಟರ ಸಂಭಾವನೆಗೆ ಹೋಲಿಸಿದರೆ ನಾಯಕಿಯರ ಸಂಭಾವನೆ ಕಡಿಮೆ. ನಾಯಕ ನಟರಿಗೂ ನಮಗೂ ಯಾಕೆ ಸಂಭಾವನೆಯಲ್ಲಿ ತಾರತಮ್ಯ? ನಾವೇನು ಕಡಿಮೆ ಎಂದು ನಟಿ ವಿದ್ಯಾಬಾಲನ್ ಗುಟುರು ಹಾಕಿದ್ದು ಇತ್ತು. ಆದರೆ ಯಾರೇನೂ ಅದನು ಕಿವಿಗಿ ಹಾಕಿಕೊಂಡಂತಿಲ್ಲ. ನಾಯಕರಿಗೆ ಹೋಲಿಸಿದರೆ ನಟಿಯರ ವೃತ್ತಿ ಬದುಕಿನ ಆಯಸ್ಸು ಕಡಿಮೆ. ಇರುವ ಅತ್ಯಲ್ಪ ಅವಧಿಯಲ್ಲಿಯೇ ಸಾಕಷ್ಟು ಬಾಚಿಕೊಳ್ಳೋಣ ಎಂಬ ಆಸೆ ಸಹಜವೇ. ಆದರೆ ಅದಕ್ಕೆ ತಕ್ಕ ಬೇಡಿಕೆಯೂ ಇರಬೇಕಲ್ಲ.
ಹಾಗೆಂದು, ದಕ್ಷಿಣ ಭಾರತದ ನಟಿಯರಿಗೆ ಹೋಲಿಸಿದರೆ, ಬಾಲಿವುಡ್‌ನ ನಟಿಯರ ಸಂಭಾವನೆ ಮೊತ್ತ ಭರ್ಜರಿಯಾಗಿಯೇ ಇದೆ. ಇವರಲ್ಲೆಲ್ಲ ಮೊದಲಿಗಳಾಗಿರುವಾಕೆ ಕತ್ರೀನಾ ಕೈಫ್. ಈಕೆ 8ರಿಂದ 15 ಕೋಟಿ ರು. ತನಕ ಸಂಭಾವನೆ ಪಡೆಯುತ್ತಾಳೆ. ಸದ್ಯಕ್ಕೆ ಈಕೆ ಎಕ್ ಥಾ ಟೈಗರ್, ಜಬ್‌ತಕ್ ಹೈ ಜಾನ್, ಧೂಮ್ 3 ಮೂರು ಚಿತ್ರಗಳಲ್ಲಿ ಗೆದ್ದ ಕುದುರೆ.
ಎರಡನೇ ಸ್ಧಾನ ಕರೀನಾ ಕಪೂರ್‌ಳದು. ಈಕೆ ಗೋರಿ ತೇರೆ ಪ್ಯಾರ್ ಮೇ ಚಿತ್ರಕ್ಕಾಗಿ 10ರಿಂದ 14 ಕೋಟಿ ಪಡೆದಿದ್ದಳಂತೆ. ವಿದ್ಯಾ ಬಾಲನ್ ಸುಮಾರು 5ರಿಂದ 9 ಕೋಟಿ ಎಣಿಸುತ್ತಾಳೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಗಳಿಕೆಯನು 9 ಕೋಟಿಗೆ ಏರಿಸಿಕೊಂಡಿದ್ದಾಳೆ. ಈಕೆಗೆ ಹತ್ತಿರ ಇರುವವಳು ಕನಡತಿ ದೀಪಿಕಾ ಪಡುಕೋಣೆ. ಈಕೆಯ ಡಿಮ್ಯಾಂಡ್ 5ರಿಂದ 8 ಕೋಟಿ.
ಇನು ಅನುಷ್ಕಾ ಶರ್ಮ 3ರಿಂದ 8 ಕೋಟಿ, ಸೋನಾಕ್ಷಿ ಸಿನ್ಹಾ 3ರಿಂದ 7 ಕೋಟಿ, ಬಿಪಾಶಾ ಬಸು 4ರಿಂದ 5 ಕೋಟಿ, ಸೋನಂ ಕಪೂರ್ 2.5 ಕೋಟಿ, ಕಂಗನಾ ರಾನೌತ್ 3 ಕೋಟಿ ಕಮಾಯಿಸುತ್ತಾರಂತೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.