ಹೃದಯಗಳ ಬಂಧನ
'ಮುಖ ಮನಸ್ಸಿನ ಕನ್ನಡಿ ಅಂತಾರೆ' ಹಾಗೆಯೇ 'ಅಕ್ಷರಗಳು ಭಾವನೆಗಳ ಕನ್ನಡಿ'. ಖಂಡಿತವಾಗಿಯೂ ಹೃದಯದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ವ್ಯವಹರಿಸಿದಾಗ ಮಾತ್ರ ಅದು ನಿಜವಾದ ಭಾವನೆಗಳ ಅನಾವರಣ. ಯಾವುದೇ ಇಬ್ಬರು ವ್ಯಕ್ತಿಗಳು ಪರಸ್ಪರ ಕೈ ಬರಹದಲ್ಲಿ ಬರೆದುಕೊಳ್ಳುವ ಪತ್ರಗಳು ಅಳಿಸಲಾಗದ ನೆನಪಾಗಿ ಉಳಿಯುತ್ತವೆ. ಆದರೆ ಈಗಿನ ಫಾಸ್ಟ್ ಜಮಾನಾದಲ್ಲಿ ಕೈ ಬರಹದಲ್ಲಿ ಪತ್ರ ಬರೆಯುವಷ್ಟು ತಾಳ್ಮೆ, ಸಮಯ ಯಾರಿಗೂ ಇದ್ದಂತಿಲ್ಲ. ಆದರೆ ನಾನು ಇವತ್ತಿಗೂ ನನ್ನ ಆತ್ಮೀಯರಿಗೆ ಪತ್ರಗಳ ಮೂಲಕವೇ ಸಂಪರ್ಕಿಸುವುದು.ಟಿ
= ಶ್ವೇತಾ ವಿನಾಯಕ, ಧಾರವಾಡ
ಸಮಷ್ಟಿ ಪ್ರೇಮಕ್ಕಾಗಿ
ಪ್ರೀತಿ-ಪ್ರೇಮ ಅಂತೆಲ್ಲ ಹೇಳಿ ಫೋನ್ ಮತ್ತು ಇ-ಮೇಲ್ಗಳು ದುಬಾರಿ ಎನಿಸಿ ಕೈಬರಹದಲ್ಲೇ, ಹೃದಯದಲ್ಲಿ ಬಚ್ಚಿಟ್ಟ ಗುಟ್ಟುಗಳನ್ನೆಲ್ಲಾ ಬಿಚ್ಚಿಟ್ಟು ಪುಟಗಟ್ಟಲೆ ಬರೆದರೂ ತಗುಲುವುದು ಅತಿ ಕಡಿಮೆ ಖರ್ಚು. ಇದನರಿತು ಬರೆಯುತ್ತಿದ್ದು ಎಷ್ಟೆಷ್ಟೋ..! ಆದರೆ ಪ್ರೀತಿಯ ಹೆಸರಲ್ಲಿ ನಾಟಕವಾಡಿದ್ದು ಮನಗಂಡು ಬರವಣಿಗೆಗೇ ಬಿತ್ತು ಕುತ್ತು. ಫೋನ್ ಮತ್ತು ಇಮೇಲ್ಗಳು ಬಂದು ನಮ್ಮ ಕೈ ಬರಹದ ಸಂಸ್ಕೃತಿಗೆ ಬಂತು ಆಪತ್ತು. ನಾನೀಗ ಎಲ್ಲವ ಮರೆತು ಸಮಷ್ಟಿ ಪ್ರೇಮಕ್ಕಾಗಿ ಲೆಕ್ಕಣಿಗೆ ಹಿಡಿದೇ ಬರೆಯುತ್ತಿರುತ್ತೇನೆ. ಪತ್ರಿಕೆಗಳಿಗೆ, ಲೇಖಕರಿಗೆ, ಹಿತೈಷಿಗಳಿಗೆ ಅಷ್ಟು ಇಷ್ಟು....ಟಿ
= ಬೊಮ್ಮಣ್ಣ ಕಣಗಿಲ, ದಾವಣಗೆರೆ
ಬಿಡಲಾರದ ನಂಟು
ಕೈಬರಹದಲ್ಲಿ,
ಬರೆದವನ ವ್ಯಕ್ತಿತ್ವವಿದೆ
ಓದುಗನೊಡನೆ ಬಂಧುತ್ವವಿದೆ
ಅಕ್ಷರಕ್ಕೆ ಆದರವಿದೆ
ವಿಷಯಕ್ಕೆ ಗೌರವವಿದೆ
ಭಾವಗಳ ಬೆಸುಗೆಯಿದೆ
ಭಾವನೆಗಳ ಒಸಗೆಯಿದೆ
ಆದ್ದರಿಂದಲೇ ನನಗೆ
ಆರು ದಶಕಗಳಿಂದ
ಕೈಬರಹವು ಅಂಟಿದೆ
ಅದರೊಡನೆ, ಬಿಡಲಾರದ ನಂಟಿದೆ.ಟಿ
= ಎಚ್. ಆನಂದರಾಮ ಶಾಸ್ತ್ರಿ, ಬೆಂಗಳೂರು
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

