ಬೈಟುಕಾಫಿ

ಲೋಳೆರಸ

ಲೋಳೆರಸ
Published On :

ಮಲೆನಾಡಿನ ಹಳ್ಳಿಗಳಲ್ಲಿ ಕಂಡ್ ಕಂಡಲ್ಲಿ ಎಡತಾಕಿದರೂ ಲೋಳೆಸರ ಸಿಗುತ್ತೆ. ಹೀಟ್ ಆಯಿತು ಅಂದ್ರೆ ಅದರದ್ದೇ ಜ್ಯೂಸ್ ಕುಡಿಯೋದು ಕಾಮನ್. ಇನ್ನೇನು ಮತ್ತಿ ಸೊಪ್ಪು ತರ್ಲಿಕ್ಕೆ ಆಗ್ಲಿಲ್ಲವೆಂದರೂ ಮನೆ ಬಾಗಿಲಲ್ಲೇ ಇರುವ ಲೋಳೆಸರದ್ದೇ ನ್ಯಾಚುರಲ್ ಶ್ಯಾಂಪೂ ರೆಡಿ ಆಗುತ್ತೆ.  ಆದರೂ, ಇದರಲ್ಲಿರುವ ಅಪಾರ ಪೋಷಕಾಂಶಗಳು ಹಾಗೂ ಸೌಂದರ್ಯ ವರ್ಧಕವನ್ನಾಗಿ ಬಳಸುವ ಬಗೆ ಹೇಗೆಂಬುದು ಎಲ್ಲರಿಗೂ ತಿಳಿದಿಲ್ಲ. ಅದಕ್ಕೆಂದೇ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಲಿದೆ ಈ ಅಲೋ ಅರಾ!
ನಿಟ್ಟೂರ್ ಶ್ರೀನಿವಾಸ್ ಸರ್ಕಲ್ ಹತ್ತಿರ ಇರುವ ಈಡನ್ ಸ್ಪಾ ಲೋಳೆಸರದ ಮೇಲೆ ಬೆಳಕು ಚೆಲ್ಲುವ ಫ್ಯಾಷನ್ ಶೋವೊಂದನ್ನು ಆ.2ರಿಂದ 17ರ ತನಕ ಆಯೋಜಿಸಿದೆ. ಈ ಶೋನಲ್ಲಿ ರೂಪದರ್ಶಿಯರು ತಮ್ಮ ಒನಪು ವಯ್ಯಾರದಿಂದಲೇ ಅಲೋವೆರಾ ಹೇಗೆ ತಮ್ಮ ಸೌಂದರ್ಯ ಹಾಗೂ ಚರ್ಮ ಕಾಂತಿಯನ್ನು ವೃದ್ಧಿಸಿದೆ ಎಂದು ತಿಳಿ ಹೇಳುತ್ತಾರೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ ಪ್ರಭೇದಕ್ಕೆ ಸೇರಿರುವ ಲೋಳೆಸರದಲ್ಲಿ ವಿಟಮಿನ್‌ಗಳು, ಕ್ಯಾಲ್ಸಿಯಂ, ಮೆಗ್ನಿಷಿಯಂ, ಜಿಂಕ್, ಕ್ಯಾಲ್ಸಿಯಂ ಸೇರಿದಂತೆ 20ಕ್ಕೂ ಹೆಚ್ಚು ಖನಿಜಗಳಿವೆ. ಅಮೈನೋ ಆಮ್ಲ, ಅಮೈನೋ, ಫ್ಯಾಟಿ ಆ್ಯಸಿಡ್‌ಗಳಿಂದಲೂ ಈ ಸಸ್ಯ ಸಮೃದ್ಧವಾಗಿದೆ.
ಸಂದು ನೋವಿಗೂ ಇದನ್ನು ಔಷಧಿಯನ್ನಾಗಿ ಬಳಸಬಹುದು. ಫಂಗಲ್, ವೈರಲ್ ಇನ್‌ಫೆಕ್ಷನ್‌ಗೂ ಪರಿಣಾಮ ಬೀರಬಲ್ಲದು.
ಬಾಹ್ಯವಾಗಿ, ಆಂತರಿಕವಾಗಿಯೂ ಬಳಸಬಹುದಾದ ಅಲೋವೆರಾವನ್ನು ಜ್ಯೂಸ್ ಮಾಡಿಕೊಂಡೂ ಕುಡೀಬಹುದು, ಸಲಾಡ್ ಆಗಿಯೂ ಬಳಸಬಹುದು. ಅಷ್ಟೇ ಅಲ್ಲ ಶ್ಯಾಂಪೂ ಆಗಿಯೂ, ಸ್ಕಿನ್ ಕೇರ್ ಲೋಷನ್ ಆಗಿಯೂ ವರ್ಕ್ ಔಟ್ ಆಗುತ್ತೆ. ಹೀಗೆ ಬಹುಪಯೋಗಿ ಲೋಳೆಸರದ ಬಗ್ಗೆ ಮತ್ತಷ್ಟು ಮಾಹಿತಿ ಇದ್ದರೆ ಒಳ್ಳೆಯದು ಅಲ್ವಾ?

ಏನು?: ಅಲೋ ವೆರಾ ಹಬ್ಬ
ಎಲ್ಲಿ?: ಈಡನ್ ಸ್ಪಾ, ಸೌತ್ ತಿಂಡೀಸ್ ಹೊಟೇಲ್ ಬಳಿ, ಎಸ್.ಕರಿಯಪ್ಪ ರಸ್ತೆ, ನಿಟ್ಟೂರು ಶ್ರೀನಿವಾಸ್ ಸರ್ಕಲ್ ಹಾಗೂ ಕೃಷ್ಣ ರಾವ್ ಪಾರ್ಕ್ ಮಧ್ಯೆ, ಬಸವನಗುಡಿ, ಬೆಂಗಳೂರು- 4
ಯಾವಾಗ?:  ಆಗಸ್ಟ್ 2ರಿಂದ 17ರತನಕ. ಬೆಳಗ್ಗೆ 10ರಿಂದ ರಾತ್ರಿ 9ರತನಕ

ಲೋಳೆಸರಕ್ಕೆ ರೋಗಗಳನ್ನು ಪ್ರತಿರೋಧಿಸುವ ನೈಸರ್ಗಿಕ ಸಾಮರ್ಥ್ಯವಿದೆ. ಪಚನ ಕ್ರಿಯೆಗೆ ಸಹಕರಿಸಿ ದೇಹದ ವಿಷ ವಸ್ತುಗಳು ವಿಸರ್ಜನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರ ಸಾರವನ್ನು ರಕ್ತದಲ್ಲಿ ಸೇರಿಸಿದರೆ ಆಮ್ಲಜನಕ ಪರಿಚಲನೆಯನ್ನು ದ್ವಿಗುಣಗೊಳಿಸಿ, ಕೆಂಪು ರಕ್ತ ಕಣಗಳು ಹರಡುವ ಸಾಮರ್ಥ್ಯ ಹೆಚ್ಚಿಸುತ್ತದೆ.
- ಮಾಲಿನಿ ರೆಡ್ಡಿ, ಈಡನ್ ಸ್ಪಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.