ಬೈಟುಕಾಫಿ

ಹಗಲಿರುಳೂ ಯೋಚಿಸಿ

Published On :

ದಿನಕ್ಕೆ ಒಂದು ಹತ್ತು ಬಾರಿ ನಮ್ಮನ್ನು ನಾವು ಕೋತಿ ಎಂದು ಹೇಳಿಕೊಳ್ಳೋಣ. ಎಲ್ಲೋ ಒಂದು ಕಡೆ ನಮ್ಮ ವರ್ತನೆಗಳೂ ಪಕ್ಕಾ ಕೋತಿಯ ರೀತಿಯಲ್ಲೇ ಅಲ್ಲದಿದ್ದರೂ ಒಂದಷ್ಟು ಚೇಷ್ಟೆಗಳು ಹೆಚ್ಚುತ್ತಾ ಹೋಗುವುದಂತೂ ಸತ್ಯ. ನನಗಿವತ್ತು ಹಸಿವೆಯೇ ಆಗೋದಿಲ್ಲ ಅಂಥ ಗಟ್ಟಿಯಾಗಿ ಅಂದುಕೊಂಡರೆ ಖಂಡಿತಾ ಹಸಿವು ಅರಿವಿಗೇ ಬರೋದಿಲ್ಲ. ಹಸಿವಾದರೂ ಅದನ್ನು ತಡಕೊಳ್ಳೋ ಶಕ್ತಿ ಬರುವುದಂತೂ ನಿಶ್ಚಿತ. ಹಾಗಂತ ಮನಶ್ಶಾಸ್ತ್ರವೇ ಹೇಳುತ್ತದೆ. ನಮ್ಮೊಳಗೆ ನಾವು ಏನನ್ನು ನಂಬಿಕೊಳ್ಳುತ್ತೇವೋ ಅದೇ ನಾವಾಗಿ ಬದಲಾಗುತ್ತೇವೆ. ಮನಸ್ಸೇ ಎಲ್ಲದಕ್ಕೂ ಮೂಲಾಧಾರ. ಹುಲಿಯ ಮರಿಗಳ ಜತೆಯಲ್ಲಿ ಬೆಕ್ಕಿನ ಮರಿಯನ್ನು ತಂದು ಸೇರಿಸಿದರೆ ಅದು ಪ್ರತಿದಿನವೂ ಹುಲಿಯ ಮರಿಗಳೊಟ್ಟಿಗೇ ಆಡುತ್ತಾ ಬೆಳೆದು ಹುಲಿಯ ಬಹುತೇಕ ಗುಣಗಳನ್ನು ರೂಢಿಸಿಕೊಳ್ಳುತ್ತದೆ. ಮುಂದೊಂದು ದಿನ ಆಕಾರದಲ್ಲಿ ಬೆಕ್ಕಿನಂತೆಯೇ ಇದ್ದರೂ ಒಂದಷ್ಟು ಹುಲಿಯ ಸಾಮರ್ಥ್ಯವನ್ನು ಗಳಿಸಿಕೊಂಡಿರುತ್ತದೆ.
ಜೈವಿಕ ಸಿದ್ಧಾಂತವೂ ಇದಕ್ಕೆ ಪೂರಕ. ಕೆಲವೊಮ್ಮೆ ಹುಲಿಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಬೆಕ್ಕಿನ ಮರಿ ರೂಢಿಸಕೊಂಡರೂ ಆಶ್ಚರ್ಯವಿಲ್ಲ. ನಮ್ಮ ಮನಸ್ಸಿನ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರುವುದು ನಮ್ಮ ಯೋಚನಾ ಶೈಲಿ ಮತ್ತು ನಾವು ನೋಡುತ್ತಾ ಬೆಳೆಯುವ ಪರಿಸರ. ವ್ಯಕ್ತಿಯೊಬ್ಬನ ಬೆಳವಣಿಗೆಯಲ್ಲಿ ಅವನ ಚಿಂತನೆಗಳೂ ಖಂಡಿತಾ ಪ್ರಭಾವ ಬೀರುತ್ತದೆ. ವ್ಯಕ್ತಿಗತವಾದ ಸಾಮರ್ಥ್ಯ, ಸೌಲಭ್ಯಗಳು, ಅವಕಾಶಗಳಿಂದ ಹೆಚ್ಚಾಗಿ ಅವನ ಸಾಧನೆಗೆ ಪೂರಕವಾದ್ದದು ಅವನ ಆಲೋಚನೆಗಳು. ಹೀಗಾಗಿ ಯಾವತ್ತಿಗೂ ನಾವು ನಮ್ಮ ಗುರಿಯನ್ನು ಆದಷ್ಟು ಎತ್ತರದಲ್ಲಿ ನಿಗದಿಪಡಿಸಿಕೊಳ್ಳಬೇಕು. ಅದನ್ನು ತಲುಪುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿಯೇ ಚಿಂತಿಸಬೇಕು. ಮಾನಸಿಕ ಸದೃಢತೆ ಮತ್ತು ವಿಶ್ವಾಸ ವೃದ್ಧಿಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಂತರಂಗದ ವಿಕಸನಕ್ಕೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳಲು ಮನಸ್ಸೇ ಪ್ರೇರಕ ಅಂಶವಾಗಬೇಕು. ಅಸಾಧ್ಯವಾದುದನ್ನು ಸಾಧಿಸುವ ಎಲ್ಲ ಯಶಸ್ವೀ ವ್ಯಕ್ತಿಗಳೂ ತಮ್ಮ ಗುರಿಯ ಸೃಷ್ಟಿಯನ್ನು ತಮ್ಮ ಆಲೋಚನೆಗಳಿಂದಲೇ ಕೈಗೊಂಡಿರುತ್ತಾರೆ. ಅಸೀಮ ನಂಬಿಕೆಯೊಂದಿಗೆ ಮುನ್ನಡೆಯುತ್ತಲೇ ಇರಿ. ಯಾವುದೇ ಹಂತದಲ್ಲೂ ನಿಮ್ಮ ವಿಶ್ವಾಸವನ್ನು ನೀವು ಕಳೆದುಕೊಳ್ಳದಿದ್ದಾಗ ಯಶಸ್ಸು ತನ್ನಿಂದ ತಾನೇ ನಿಮಗೆ ಒಲಿಯುತ್ತದೆ. ನೀವೇನಾಗಬೇಕೆಂದುಕೊಳ್ಳುತ್ತೀರೋ ಅದನ್ನೇ ಹಗಲಿರುಳೂ ಯೋಚಿಸಿ. ಖಂಡಿತಾ ಹಾಗಾಗುವುದು ಕಷ್ಟವಲ್ಲ.


-ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.