ಸುವರ್ಣದಲ್ಲಿ ಇಂಗ್ಲಿಷ್ ಕಲಿಕೆ
ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಪ್ರಕೃತಿ ಎನ್. ಬನವಾಸಿ ಅವರದು. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರಾಜಕಾರಣಗಳಿಗೆ, ಚಿತ್ರರಂಗದ ಹಲವರಿಗೆ ಹಾಗೂ ಜನಸಾಮಾನ್ಯರಿಗೆ ಕಳೆದ 15 ವರ್ಷಗಳಿಂದಲೂ ಇಂಗ್ಲಿಷ್ ಕಲಿಸುವ ಕಾಯಕದಲ್ಲಿ ತೊಡಗಿರುವುದು ಪ್ರಕೃತಿ ಬನವಾಸಿಯವರ ಹೆಗ್ಗಳಿಕೆ. ಇದೀಗ ಟಿ.ವಿ. ಮೂಲಕ ಇಂಗ್ಲಿಷ್ ಕಲಿಸುವ ಹೊಸ ಕಾರ್ಯಕ್ರಮವೊಂದನ್ನು ಅವರು ನಡೆಸಿಕೊಡಲಿದ್ದಾರೆ. ಸುವರ್ಣ ಚಾನೆಲ್‌ನಲ್ಲಿ, ಮಧ್ಯಾಹ್ನ 12.30ಗೆ ಪ್ರಸಾರವಾಗುವ ಈ ಕಾರ್ಯಕ್ರಮ ಏಪ್ರಿಲ್ 1ರಿಂದ ಆರಂಭವಾಗಲಿದೆ.
ಬದಲಾದ ಈ ಕಾಲಮಾನದಲ್ಲಿ ಸಂವಹನ ಕಾರಣಕ್ಕೆ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗಾದರೂ ಇಂಗ್ಲಿಷ್ ಕಲಿಯಬೇಕಾದ ಅನಿವಾರ್ಯತೆಯಿದೆ. ಆದರೆ ಕೋಚಿಂಗ್ ಕ್ಲಾಸ್‌ಗೆ ಹೋಗಿ ಕಲಿಯುವಷ್ಟು ತಾಳ್ಮೆ ಹಾಗೂ ಸಮಯ ಎಲ್ಲರಿಗೂ ಇಲ್ಲ. ಅದರಲ್ಲೂ, ಮನೆಯಲ್ಲೇ ಇರುವ ಗೃಹಿಣಿಯರಿಗೆ, ಕೋಚಿಂಗ್ ತರಗತಿಗಳಿಗೆ ಹೋಗಲು ನಾಚಿಕೆ, ಮುಜುಗರ. ಅಂಥವರು ದೈನಂದಿನ ವ್ಯವಹಾರಕ್ಕೆ ಅಗತ್ಯವಿರುವಷ್ಟು ಇಂಗ್ಲಿಷ್‌ನ್ನು ಟಿ.ವಿ. ನೋಡುತ್ತಲೇ ಕಲಿಯುವಂತೆ ಮಾಡುವುದು ನನ್ನ ಉದ್ದೇಶ ಎನ್ನುತ್ತಾರೆ ಪ್ರಕೃತಿ ಬನವಾಸಿ.
ಇಂಗ್ಲಿಷ್ ಮಾತಾಡಬೇಕೆಂದರೆ, ವಿಪರೀತ ಎಂಬಷ್ಟು ಇಂಗ್ಲಿಷ್ ಓದಿಕೊಂಡಿರಬೇಕು. ಇಂಗ್ಲಿಷ್ ಗ್ರಾಮರ್‌ನ ಪರಿಚಯ ಸಂಪೂರ್ಣವಾಗಿ ಇರಬೇಕು ಎಂಬೆಲ್ಲಾ ತಪ್ಪು ಕಲ್ಪನೆಗಳಿವೆ. ಇದೇನೂ ಗೊತ್ತಿಲ್ಲದವರೂ ಇಂಗ್ಲಿಷ್ ಮಾತಾಡಬಹುದು. ಜನ 20 ವರ್ಷಗಳಲ್ಲಿ ಕಲಿಯದ ಭಾಷೆಯನ್ನು ಕೇವಲ 20 ನಿಮಿಷದಲ್ಲಿ ಕಲಿಸುವ ಸವಾಲು ನನ್ನ ಮುಂದಿದೆ. ಅದರಲ್ಲಿ ನಾನು ಖಂಡಿತ ಯಶಸ್ವಿಯಾಗುತ್ತೇನೆ ಅನ್ನುವ ಬನವಾಸಿ, ಕಾರ್ಯಕ್ರಮದ ರೂಪು-ರೇಷೆ ಸಿದ್ಧಪಡಿಸುವ ಸಂದರ್ಭದಲ್ಲಿ ಸುವರ್ಣ ಚಾನೆಲ್‌ನ ಮುಖ್ಯಸ್ಥರಾದ ಅನೂಪ್ ಚಂದ್ರಶೇಖರ್ ಅವರು ನೀಡಿದ ಸಲಹೆ-ಸಹಕಾರವನ್ನೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

