ಬೈಟುಕಾಫಿ

ನಮ್ಮ ಮುಂದಿನ ಕಾರ್ಯ

Published On :

ಇಂದು ಜನರಲ್ಲಿ ಅನ್ನದ ಹಸಿನಿಗಿಂತ ಹಣದ ಹಸಿವು ಹೆಚ್ಚಾಗಿದೆ. ತಮ್ಮ ಶಕ್ತಿ, ಬುದ್ಧಿ, ಸಮಯ ಎಲ್ಲವನ್ನೂ ಹಣಗಳಿಕೆಗಾಗಿ ವಿನಿಯೋಗಿಸುತ್ತಾರೆ. ಅದಕ್ಕಾಗಿ ಅಳುತ್ತಾರೆ, ನಗುತ್ತಾರೆ, ಏನೆಲ್ಲಾ ಸಟೆಯಾಡುತ್ತಾರೆ, ನಟನೆ ಮಾಡುತ್ತಾರೆ. ಆದರೆ ಧನ ಸಂಪಾದನೆಗಾಗಿ ತೊಡಗಿಸುವ ಇಷ್ಟು ಪ್ರಮಾಣದ ಶಕ್ತಿ, ಏಕಾಗ್ರತೆಯನ್ನು ಸಾರ್ಥಕ ಕಾರ್ಯಗಳಲ್ಲಿ ಬಳಸಿದರೆ ಚಿರಚೇತನರಾಗುತ್ತಾರೆ. ನಮ್ಮ ಬದುಕಿನೊಡನೆಯೇ ದೇಶವನ್ನು ಕಟ್ಟುವ ಸತ್ಕಾರ್ಯಕ್ಕೆ ನಮ್ಮ ಜೀವದ್ರವ್ಯ ವ್ಯಯವಾಗುತ್ತದೆ.
ನಮ್ಮ ಸನಾತನ ಮಹರ್ಷಿಗಳು ಮಹಾತ್ಮರು ತೋರಿಸಿಕೊಟ್ಟ ಮಾರ್ಗವನ್ನು ಅನುಸರಿಸುವುದೇ ನನ್ನ ಕಾರ್ಯವಿಧಾನ. ಅವರು ಶಕ್ತಿ, ಪವಿತ್ರತೆ, ಸ್ಫೂರ್ತಿಯ ಚಿಲುಮೆಗಳಾಗಿದ್ದರು, ನಾವು ಅತ್ಯಂತ ಅದ್ಭುತ ಕಾರ್ಯಗಳನ್ನು ಸಾಧಿಸಬೇಕಾಗಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಒಂದು ಜೀವನೋದ್ದೇಶವಿರುವಂತೆ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಜೀವನಾದರ್ಶವಿದೆ. ಅದೇ ಅದರ ಜೀವಾಳ. ಧರ್ಮವೇ ಭರತಖಂಡದ ಡೀವಸ್ವರ. ರಾಷ್ಟ್ರಜೀವನದ ಉಳಿದ ಸ್ವರಗಳೆಲ್ಲ ಇದಕ್ಕೆ ಅಧೀನ, ನೀವು ನಿಮ್ಮ ಧರ್ಮವನ್ನು ಕಡೆಗಳಿಸಿ ರಾಜಕೀಯವನ್ನೋ ಇನ್ಯಾವುದನ್ನೋ ನಿಮ್ಮ ರಾಷ್ಟ್ರದ ಜೀವಾಳವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರೆ ನೀವು ನಿರ್ನಾಮವಾಗುವಿರಿ. ನಿಮ್ಮ ಬೆನ್ನೆಲುಬಿನಂತಿರುವ ಧರ್ಮವು ನಿಮ್ಮ ಸಮಸ್ತ ನರನಾಡಿಗಳಲ್ಲಿ ಮಿಡಿಯುತ್ತಿರಲಿ.
ಯಾವುದೇ ಪ್ರಗತಿಯಾಗಬೇಕಾದರೂ ಮೊದಲು ಧಾರ್ಮಿಕ ಆಂದೋಲನವಾಗಬೇಕು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.