ಬೆಳ್ಳೆಗಿನ ಮನಸು

ವೈದ್ಯರೆಂದರೆ ಮಕ್ಕಳಿಗೂ ಕೂಡಾ ಔಷಧ ಮತ್ತು ಇಂಜೆಕ್ಷನ್ ತಟ್ಟನೆ ನೆನಪಾಗುತ್ತದೆ, ಆದರೆ ಇದನ್ನು ದೂರ ಇಟ್ಟೇ ವೈದ್ಯಕೀಯ ವೃತ್ತಿಯಲ್ಲಿ ಮೇರು ವ್ಯಕ್ತಿಯಾದವರು ಬೆಳ್ಳೆ ಮೋನಪ್ಪ ಹೆಗ್ಡೆ. ಹೀಗಂದರೆ ಪಕ್ಕನೆ ಗೊತ್ತಾಗದು. ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಬಿ.ಸಿ.ರಾಯ್ ಪ್ರಶಸ್ತಿ (1999), ಭಾರತದ ಪ್ರಜೆಗಳಿಗೆ ಸಿಗುವ ಮೇರು ಗೌರವ ಪದ್ಮಭೂಷಣ (2010) ಪಡೆದವರು ಡಾ.ಬಿ.ಎಂ. ಹೆಗ್ಡೆ (1938). ಇವರು ದುಡ್ಡಿಗೆ ಆಸೆ ಪಟ್ಟು ವೈದ್ಯಕೀಯ ವೃತ್ತಿ ಮಾಡಿದವರಲ್ಲ.
ಎಂಆರ್ಸಿಪಿ ಮಾಡಿ ಇಂಗ್ಲೆಂಡ್, ಅಯರ್ಲೆಂಡ್ನ ರಾಯಲ್ ಕಾಲೇಜ್ ಸದಸ್ಯತ್ವ ಪಡೆದ ಹೆಮ್ಮೆಯ ಕನ್ನಡಿಗ. ಶ್ವೇತವರ್ಣೀಯರಿಗೂ ಮೌಲ್ಯಮಾಪನ ಮಾಡಿ ಕ್ರಾಂತಿ ಮಾಡಿದ ಹೆಗ್ಡೆ, ವೈದ್ಯಕೀಯ ಕಾಲೇಜು ಒಳಗೊಂಡ ಮಣಿಪಾಲ ವಿವಿ ಕುಲಪತಿಯಾಗಿದ್ದರೂ ಡ್ರಗ್ಸ್ ಮಾಫಿಯಾ ವಿರೋಧಿಸಿದವರು. ಜೀವನ ಕ್ರಮದಿಂದಲೇ ಔಷಧ ದೂರ ಇಟ್ಟು ಬದುಕಬಹುದು ಎಂದು ಸಾರಿ, ಸಾರಿ ಹೇಳಿದವರು.
ವೈದ್ಯ ಕ್ಷೇತ್ರ ವಿಮರ್ಶೆಗೆ ಒಳಪಡಿಸಿದ 'ಮುನ್ನಾಭಾಯಿ ಎಂಬಿಬಿಎಸ್' ಹಿಂದಿ ಸಿನಿಮಾ ಮಾಡುವ ಮುಂಚೆಯೇ 'ವಾಟ್ ದೇ ಡೋಂಟ್ ಟೀಚ್ ಇನ್ ಮೆಡಿಕಲ್ ಸ್ಕೂಲ್' ಎಂಬ ಪುಸ್ತಕ ಬರೆದು ವೈದ್ಯಕೀಯ ಕ್ಷೇತ್ರದ ಸರಿ, ತಪ್ಪುಗಳನ್ನು ವಿಮರ್ಶಿಸಿದ ಧೈರ್ಯವಂತ. ಅಲೋಪತಿಯ ಹಲವು ಪದವಿಗಳನ್ನು ಪಡೆದರೂ ಆಯುರ್ವೇದ ಶಿಫಾರಸು ಮಾಡುತ್ತಿದ್ದರು. ಜನರನ್ನು ಅರ್ಥ ಮಾಡಿಕೊಂಡು ರೋಗಿಗಳ ಮನಸ್ಸಿಗೆ ಚಿಕಿತ್ಸೆ ನೀಡುತ್ತಿದ್ದರು.
ಪೈಗಳ ಬುಲಾವ್
ವೈದ್ಯಕೀಯ ಪದವಿ ಮುಗಿಸಿ ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದ ಹೆಗ್ಡೆಗೆ ಟಿಎಂಪೈ ಅವರು ನಮ್ಮ ಕಾಲೇಜಿನಲ್ಲಿ ಟೀಚ್ ಮಾಡುಬಹುದಲ್ಲಾ ಎಂದು ಕೇಳಿದರು. ಅದರಂತೆ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 2 ವರ್ಷ ಬೋಧನೆ ಮಾಡಿ ಇಂಗ್ಲೆಂಡ್ಗೆ ತೆರಳಿ ಉನ್ನತ ಶಿಕ್ಷಣ ಮುಗಿಸಿ ಮತ್ತೆ ಭಾರತಕ್ಕೆ ಬಂದರು. ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜ್ನಲ್ಲಿ ಪ್ರಾಂಶುಪಾಲರಾಗಿದ್ದ ವೇಳೆ ಭಾರತೀಯ ವಿದ್ಯಾಭವನ ಅಧ್ಯಕ್ಷರಾಗಿ ಅನೇಕ ವರ್ಷದಿಂದ ಭಾರತೀಯ ಸಂಸ್ಕೃತಿ, ಸಂಸ್ಕೃತ, ಸಂಗೀತ ಶಿಕ್ಷಣ ನೀಡುವಲ್ಲಿ ಹೆಗ್ಡೆ ಪಾತ್ರ ಸ್ಮರಣೀಯ.
ನೆಹರು, ಇಂದಿರಾಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ಸುಬ್ರಹ್ಯಣ್ಯಂ, ಚುನಾವಣೆ ಆಯೋಗ ಮಾಜಿ ಕಮಿಷನರ್ ಟಿನ್.ಶೇಷನ್, ಖುರ್ಷಿದ್ ಅಲಂ ಖಾನ್ ಮೊದಲಾದ ಗಣ್ಯರು ಹೆಗ್ಡೆ ಅವರ ಬಳಿ ಚಿಕಿತ್ಸೆಗೆ ಸಮಯ ಕೇಳುತ್ತಿದ್ದರು.
'ಹೆಗ್ಡೆ ಅವರಿಗೆ ದೇವರ ಮೇಲೆ ನಂಬಿಕೆ. ಪ್ರಾಚೀನ ವೈದ್ಯ ಪದ್ಧತಿ ಬಗ್ಗೆ ಒಲವು. ಡ್ರಗ್ಸ್ ಮಾಫಿಯಾ ವಿರೋಧಿ. ಅವರು 25 ವರ್ಷಗಳ ಹಿಂದೆ ಹೇಳುತ್ತಿದ್ದ ಮಾತುಗಳು ಈಗ ಸತ್ಯವಾಗುತ್ತಿವೆ. ಅನೇಕ ಔಷಧಗಳು ಬ್ಯಾನ್ ಆಗುತ್ತಿವೆ. ನೇರ ನಡೆ ನುಡಿಯ ಹೆಗ್ಡೆ, ಸಾವಿರಾರು ಕಡೆ ಉಪನ್ಯಾಸ ನೀಡಿದ್ದಾರೆ. 40ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶಿವರಾಮ ಕಾರಂತರನ್ನು ಬಿಟ್ಟರೆ ಬಿ.ಎಂ. ಹೆಗ್ಡೆ ಅವರೇ ದೊಡ್ಡ ಸ್ಕಾಲರ್' ಎನ್ನುವುದು ಡೀನ್ ಡಾ.ಅರುಣಾಚಲಂ ಕುಮಾರ್ ಅಭಿಪ್ರಾಯ. <
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ವೈದ್ಯರ ಬಳಿ ಅಲ್ಲ. ರೋಗಿಯ ಪರಿಸರ ಮತ್ತು ಮನಸ್ಸು ಬದಲಾವಣೆಯಿಂದ ರೋಗ ನಿವಾರಣೆ ಮಾಡಬಹುದು.'there is a pill for every ill, which is only a myth' ಇಂಥ ಸುಳ್ಳುಗಳನ್ನು ಮಾಧ್ಯಮ ಮೂಲಕ ಪ್ರತಿ ದಿನ ಪ್ರಚಾರ ಮಾಡಲಾಗುತ್ತದೆ.
-ಡಾ.ಬಿ.ಎಂ.ಹೆಗ್ಡೆ
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


