ಇದು ಪೆಥಾಲಜಿ ಪ್ರಪಂಚ
ಪ್ರತಿ ದಿನ ಎನ್ನುವಂತೆ ನಾವು ಬ್ಲಡ್ ಟೆಸ್ಟ್, ಎಕ್ಸ್‌ರೇ, ಸಿಟಿ ಸ್ಕ್ಯಾನ್ ಮುಂತಾದ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಟೆಸ್ಟ್‌ಗಳನ್ನು ಮಾಡಿಸಿಕೊಂಡೂ ಇದ್ದೇವೆ. ಆದರೆ ಅದರ...

-ರೋಗ ಪತ್ತೆದಾರಿ
ಪ್ರತಿ ದಿನ ಎನ್ನುವಂತೆ ನಾವು ಬ್ಲಡ್ ಟೆಸ್ಟ್, ಎಕ್ಸ್‌ರೇ, ಸಿಟಿ ಸ್ಕ್ಯಾನ್ ಮುಂತಾದ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಟೆಸ್ಟ್‌ಗಳನ್ನು ಮಾಡಿಸಿಕೊಂಡೂ ಇದ್ದೇವೆ. ಆದರೆ ಅದರ ಬಗ್ಗೆ ಎಷ್ಟು ಜನ ಆಳವಾಗಿ ತಿಳಿದಿದ್ದೇವೆ?
ರಕ್ತಪರೀಕ್ಷೆ, ಮೂತ್ರಪರೀಕ್ಷೆ ಮುಂತಾದವುಗಳನ್ನೊಳಗೊಂಡ ಲ್ಯಾಬ್ ಡಯಾಗ್ನೋಸಿಸ್ ಆಗಿರಲಿ ಅಥವಾ ರೇಡಿಯೋ ಡಯಾಗ್ನೋಸಿಸ್ ಇರಲಿ, ಇವೆಲ್ಲವೂ ಪೆಥಾಲಜಿ ವಿಭಾಗದಲ್ಲೇ ಬರುತ್ತವೆ. ಫಿಸಿಯಾಲಜಿ ದೇಹರಚನೆ ಬಗ್ಗೆ ತಿಳಿಸಿದರೆ, ಪೆಥಾಲಜಿ ದೇಹದ 'ರೋಗಸ್ಥಿತಿ'ಯನ್ನು ತಿಳಿಸುವಂತಹದು.
ಗೈನಕಾಲಜಿಸ್ಟ್, ಫಿಸಿಷಿಯನ್, ಸರ್ಜನ್‌ಗಳಿಗೆ ಭೌತಿಕ ಪರೀಕ್ಷೆ ಮಾಡುತ್ತಲೇ ರೋಗದ ಅರಿವಾಗುತ್ತೆ. ಆದರೆ ರೋಗದ ಸ್ಥಿತಿ, ಕಾರಣ, ಲಕ್ಷಣ ಅರಿತು ಸರಿಯಾದ ಚಿಕಿತ್ಸೆ ನೀಡಲು ಪೆಥಾಲಜಿ ಸಹಾಯಕ. ಪೆಥಾಲಜಿಯಲ್ಲಿ ಎರಡು ವಿಧ, ಕ್ಲಿನಿಕಲ್ ಪೆಥಾಲಜಿ ಮತ್ತು ರೇಡಿಯಾಲಜಿ. ಕ್ಲಿನಿಕಲ್ ಪೆಥಾಲಜಿಯಲ್ಲಿ ಲ್ಯಾಬೊರೇಟರಿ ಟೆಸ್ಟ್‌ಗಳಾದ ಹೆಮಟಾಲಜಿ, ಮೈಕ್ರೋಬಯಾಲಜಿ, ಸಿರೋಲಜಿ, ಹಿಸ್ಟೋ ಪೆಥೋಲಜಿಗಳಿವೆ.
= ಪೆಥಾಲಜಿ ಟೆಸ್ಟ್‌ಗಳನ್ನು ಆರೋಗ್ಯವಂತರೂ ಮಾಡಿಸಿಕೊಳ್ಳಬೇಕಾಗುವುದು. 30 ವರ್ಷದ ಬಳಿಕ ಪ್ರತಿ ವರ್ಷ ಮಹಿಳೆಯರು ಮ್ಯಾಮೋಗ್ರಫಿ ಮಾಡಿಸಿಕೊಂಡು, ಬ್ರೆಸ್ಟ್ ಕ್ಯಾನ್ಸರ್ ಇದೆಯಾ ಎಂಬುದನ್ನು ಅರಿಯಬಹುದು. ಹಾಗೆಯೇ, ಕಣ್ಣು, ಹಲ್ಲು, ಕಿವಿ ಮುಂತಾದವುಗಳ ರುಟೀನ್ ಟೆಸ್ಟ್ ಮಾಡಿಸಲಾಗುವುದು. ಹೊಸ ಕೆಲಸಕ್ಕೆ ಸೇರುವಾಗ, ಹೊರದೇಶಕ್ಕೆ ಹೋಗುವಾಗ ಟೆಸ್ಟ್‌ಗಳನ್ನು ಮಾಡಿಸಲೇಬೇಕು ಅಂತಾರೆ ಲ್ಯೂಸಿಡ್ ಡಯಾಗ್ನೋಸ್ಟಿಕ್ಸ್‌ನ ಮೆಡಿಕಲ್ ಡೈರೆಕ್ಟರ್ ಡಾ. ವಿನಯ್ ನ್ಯಾಪತಿ.
= ರೊಟೀನ್ ಯೂರಿನ್, ಸ್ಟೋಲ್ ಮುಂತಾದವುಗಳ ಟೆಸ್ಟ್ ಮಾಡಿಸಿ ಇನ್‌ಫೆಕ್ಷನ್ ಇರುವುದನ್ನು ತಿಳಿಯಲಾಗುವುದು.
ಹೆಮಟಾಲಜಿ
ರಕ್ತಪರೀಕ್ಷೆ, ಹಿಮೋಗ್ಲೋಬಿನ್ ಕೌಂಟ್, ಬ್ಲಡ್ ಕೌಂಟ್, ಆರ್.ಎಚ್. ಗ್ರೂಪ್, ಬಳಿ ರಕ್ತ ಕಣ ಪರೀಕ್ಷೆ, ಕೆಂಪು ರಕ್ತ ಕಣ ಪರೀಕ್ಷೆಗಳಿಂದ ರಕ್ತಹೀನತೆ, ಬ್ಲಡ್ ಕ್ಯಾನ್ಸರ್ ಮುಂತಾದ ತೊಂದರೆಗಳನ್ನು ಕಂಡುಹಿಡಿಯಬಹುದು.
ಹಿಸ್ಟೋಪೆಥಾಲಜಿ
ಸಣ್ಣ ಪ್ರಮಾಣದ ಟಿಶ್ಯೂ ದೇಹದಿಂದ ತೆಗೆದು, 24-49 ಗಂಟೆಗಳ ಕಾಲ ಕಲ್ಚರ್ ಮಾಡಿ ಪರೀಕ್ಷಿಸಲಾಗುವುದು.
ಮೈಕ್ರೋಬಯಾಲಜಿ
ದೇಹದಲ್ಲಿ ರೋಗ ಹರಡುವ ಸೂಕ್ಷ್ಮಾಣುಗಳಾದ ವೈರಸ್, ಬ್ಯಾಕ್ಟೀರಿಯ, ಪ್ರೋಟೋಜೋವಾ ಮುಂತಾದವುಗಳ ಇರುವಿಕೆಯನ್ನ ಅರಿಯುವುದು, ಅದರ ಪ್ರಕಾರ ರೋಗಕ್ಕೆ ನೀಡಬಹುದಾದ ಆಂ್ಯಟಿಬಯಾಟಿಕ್ಸ್ ಮುಂತಾದ ಔಷಧದ ಅರಿವು, ಚಿಕಿತ್ಸೆಯ ಕ್ರಮ ತಿಳಿಯುವುದು.
ರೇಡಿಯಾಲಜಿ
ಎಕ್ಸ್‌ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಮ್ಯಾಮೋಗ್ರಫಿ, ಎಂಆರ್‌ಐಟಿ, ಸ್ಕ್ಯಾನ್ ಮುಂತಾದವುಗಳು.
ಎಕ್ಸ್‌ರೇ
ಸಾಮಾನ್ಯವಾಗಿ ಎದೆನೋವಿಗೆ ಸಂಬಂಧಿಸಿದ ತೊಂದರೆಗಳು, ಫ್ರಾಕ್ಚರ್, ಬೆನ್ನುನೋವು, ಹಲ್ಲಿನ ತೊಂದರೆ ಮುಂತಾದವುಗಳನ್ನು ಅರಿಯಲು ಉಪಯೋಗಿಸಲಾಗುವುದು.
ಸಿಟಿ ಸ್ಕ್ಯಾನ್
ತಲೆ, ಕತ್ತಿನ ತೊಂದರೆಗಳು, ಕ್ಯಾನ್ಸರ್, ಗಡ್ಡೆ, ಕಿಡ್ನಿ ಸ್ಟೋನ್‌ಗಳ ಇರುವಿಕೆ ತಿಳಿದು ಚಿಕಿತ್ಸೆ ನೀಡಲು ಉಪಯುಕ್ತ. 2ಡಿ, 3ಡಿ ನೋಟ ನೀಡುತ್ತೆ.
ಇಕೋ ಕಾರ್ಡಿಯೋಗ್ರಫಿ(ಇಸಿಜಿ)
ಹೃದಯಕ್ಕೆ ಸಂಬಂಧಿಸಿದ ತೊಂದರೆ ಅರಿಯಲು ಬಳಸುವ ಅತ್ಯಂತ ಪ್ರಾಚೀನ ಟೆಸ್ಟ್. ಯಾವುದೇ ರೀತಿಯ ಎದೆ ನೋವು ಕಂಡು ಬಂದರೆ ಇಸಿಜಿ ಮಾಡಿಸಲು ಸೂಚಿಸಲಾಗುವುದು.
ಮ್ಯಾಮೋಗ್ರಫಿ
ಇದರಿಂದ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತದೆ. 40 ವರ್ಷದ ನಂತರ ಪ್ರತಿ ಮಹಿಳೊ ಮಾಡಿಸಿಕೊಳ್ಳಬೇಕಾದ್ದು.
ಇದಲ್ಲದೆ ಹೃದಯದ ಕಾರ್ಯಕ್ಷಮತೆ ತಿಳಿಯುವ ಟ್ರೆಡ್‌ಮಿಲ್ ಟೆಸ್ಟ್, ಮೂಳೆಯ ಲವಣಾಂಶ ಸಾಂದ್ರತೆ ತಿಳಿಸುವ ಬೋನ್ ಮಿನರಲ್ ಡೆನ್ಸಿಟಿ ಟೆಸ್ಟ್, ದವಡೆ ಮೂಳೆಗಳ ಸರ್ಜರಿ ಸಂಬಂಧಿತ ಓಐಜಿ, ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳ ಪತ್ತೆಗೆ ಎಲೆಕ್ಟ್ರೋ ಎನ್‌ಸೆಫಲೋಗ್ರಾಂ ಟೆಸ್ಟ್‌ಗಳಿವೆ.
ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್(ಎಂಆರ್‌ಐ)
ಇಲ್ಲಿ ರೇಡಿಯೇಷನ್ ಬಳಸುವುದಿಲ್ಲ. ರೋಗಿಯನ್ನು ಕಾಂತೀಯ ವಲಯದೊಳಗೆ ಹಾಯಿಸಲಾಗುವುದು. ದೇಹದೊಳಗಿನ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್
ಯಕೃತ್, ಜಠರ, ಯುಟೆರಸ್, ಗರ್ಭಕೋಶ, ಕಿಡ್ನಿ ಮುಂತಾದ ಅಂಗಗಳ ತೊಂದರೆಗಳನ್ನು ಅರಿಯಲು ಉಪಯುಕ್ತ. ಅದೇ ರೀತಿ ಡಾಪ್ಲರ್ ಟೆಸ್ಟ್‌ನಿಂದ ವೆರಿಕೋಸ್ ವೈನ್ಸ್, ಡಯಾಬಿಟೀಸ್, ಗ್ಯಾಂಗ್ರೀನ್ ಮುಂತಾದವುಗಳ ಬಗ್ಗೆ ತಿಳಿಯಬಹುದು.
ಲ್ಯುಸಿಡ್ ಲ್ಯಾಬ್
'35 ವರ್ಷ ದಾಟಿದ ನಂತರ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಆರೋಗ್ಯ ತೊಂದರೆ ಕಾಣಿಸುವ ಕಾಲವಿದು. ಬಹುತೇಕ ಮಂದಿಗೆ ಪೆಥಾಲಜಿ ಬಗ್ಗೆ ಅರಿವಿರುವುದಿಲ್ಲ. ಅದನ್ನು ಪಡೆಯಬೇಕಾದ್ದು ಅಗತ್ಯ' ಅನ್ನುತ್ತಾರೆ ಲ್ಯುಸಿಡ್ ಡಯಾಗ್ನಾಸ್ಟಿಕ್‌ನ ಸಿಇಓ ಆರ್.ವೆಂಕಟೇಶ್ ಕುಮಾರ್. ಕೈಗೆಟುಕುವ ಬೆಲೆಗೆ ಪಂಚತಾರಾ ಟ್ರೀಟ್‌ಮೆಂಟ್ ಇಲ್ಲಿನ ವಿಶೇಷ. ಫೈಬ್ರಾಯ್ಡ್ ಟ್ರೀಟ್‌ಮೆಂಟ್, ಪರಿಸರಸ್ನೇಹಿ ವಾತಾವರಣ, ಗೈನಕಾಲಜಿಸ್ಟ್ ಮತ್ತು ಜನರಲ್ ಫಿಸಿಶಿಯನ್‌ಗಳ ಲಭ್ಯತೆ, ಅತ್ಯಂತ ಕಡಿಮೆ ವಿಕಿರಣ ಉಪಯೋಗಿಸಿ ಮಾಡುವ ಮ್ಯಾಮೋಗ್ರಫಿ ಇಲ್ಲಿನ ಹೈಲೈಟ್‌ಗಳು. ಕಾಲಿನ ರಕ್ತನಾಳಗಳಲ್ಲಿ ರಕ್ತಸಂಚಾರದ ತೊಂದರೆ ಕಂಡುಹಿಡಿಯುವ ಫೆರಿಫರಲ್ ಆರ್ಟೀರಿಯಲ್ ಡಿಸೀಸ್ ಟೆಸ್ಟ್ ರಾಜ್ಯದಲ್ಲೇ ಮೊದಲಂತೆ.
= ಗೀತಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


