ಶಕ್ತಿ ಗಳಿಸುವ ಮರ್ಮ ಅರಿಯಿರಿ
ಮನುಷ್ಯನಲ್ಲಿ ಮೂಲಶಕ್ತಿ ಒಂದೇ ಇದ್ದರೂ ಅದು ಅನಂತ ರೂಪಗಳಲ್ಲಿ ವ್ಯಯವಾಗುತ್ತಿರುತ್ತದೆ. ಚದುರಿಹೋಗುವ ಶಕ್ತಿಯಿಂದ ಯಾವ ಸಾಧನೆಯನ್ನೂ ಮಾಡಲಾಗದು. ಶಕ್ತಿಯನ್ನು ಏಕೀಕರಿಸಿ ಬಳಸಿದರೆ ನಿಮಗೆ ಯಶಸ್ಸು ಖಂಡಿತ.
'ದೈಹಿಕ ಶಕ್ತಿಗಳ ಮೇಲೆ ಹಿಡಿತ ತಂದುಕೊಳ್ಳುವುದರಿಂದ ಮನಶ್ಶಕ್ತಿ ಸಿದ್ಧಿಸುತ್ತದೆ. ದೈಹಿಕ ಶಕ್ತಿಗಳನ್ನು ವ್ಯರ್ಥವಾಗಿಸದೆ, ಮಾನಸಿಕ ಶಕ್ತಿಯಾಗಿ ಪರಿವರ್ತಿಸಬೇಕು. ಶಕ್ತಿಯನ್ನು ಭೋಗಲಾಲಸೆಗಾಗಿ ಬಳಸುವುದು ಅತ್ಯಂತ ಅಪಾಯಕಾರಿ. ಇದರಿಂದ ಮನಸ್ಸಿನ ಧಾರಣಶಕ್ತಿಯೇ ನಾಶವಾಗುತ್ತದೆ. ಜಪಧ್ಯಾನಗಳನ್ನು ಎಷ್ಟು ನಿಷ್ಠೆಯಿಂದ ಮಾಡುತ್ತೇವೆಯೊ ಅಷ್ಟೇ ನಿಷ್ಠೆಯಿಂದ ಸಣ್ಣ ಕೆಲಸವನ್ನು ಮಾಡಬೇಕು. ಇದು ಶಕ್ತಿ ಸಂಚಯಕ್ಕೆ ದಾರಿ.'
'ಮನಸ್ಸು ಎನ್ನುವುದು ಹುಚ್ಚು ಸ್ವಭಾವದ್ದು, ಸ್ವಲ್ಪ ಅವಕಾಶ ಸಿಕ್ಕರೆ ಸಾಕು ನಮ್ಮನ್ನು ಕೆಳಗೆಳೆಯುತ್ತದೆ. ಇಂತಹ ಮನಸ್ಸಿನ ಮೇಲೆ ಹಿಡಿತವನ್ನಿಟ್ಟುಕೊಳ್ಳಲು ನಿಯಮ ಪರಿಪಾಲನೆ ಮಾಡಲೇಬೇಕು. ಆದ್ದರಿಂದ ನಾವು ನಮ್ಮ ಮನಸ್ಸನ್ನು ಗೆದ್ದಿದ್ದೇವೆ ಎಂಬ ಭ್ರಮೆಯಿಂದ ಅದರ ಮೇಲಿನ ಹಿಡಿತವನ್ನು ಎಂದಿಗೂ ಸಡಿಲ ಮಾಡಬಾರದು.'
ವಿಸ್ಮಯಾದ್ಭುತ ಗ್ರಹಣಶಕ್ತಿ, ಸ್ಮರಣ ಶಕ್ತಿಗಳು ಮನುಷ್ಯಶಕ್ತಿಗೆ ಮೀರಿದ್ದು ಎಂದು ಭಾವಿಸಬೇಡಿ. ಇದರಲ್ಲಿ ಅಂತಹ ಪವಾಡವಾದದ್ದೇನೂ ಇಲ್ಲ. ಬ್ರಹ್ಮಚರ್ಯದ ಅಭಾವದಿಂದಾಗಿ ನಮ್ಮ ಇಡೀ ರಾಷ್ಟ್ರವೇ ಶಕ್ತಿಯಲ್ಲಿ ಹಾಗೂ ಬುದ್ಧಿಯಲ್ಲಿ ಬಡವಾಗುತ್ತಿದೆ. ತನ್ನ ಪುರುಷತ್ವವನ್ನೇ ಕಳೆದುಕೊಳ್ಳುತ್ತಿದೆ.
= ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

