ನಾಲಿಗೆ ನುಲಿ
ಚೋದ್ಯ ಚುಂಬಿತ ಚಾರು ಕೇಶಿಗಳು ಚೆಚನ್ಯಾದಿಂದ ಚೈನಾವರೆಗೆ, ಚಿಲಿಯಿಂದ ಚೆನ್ನೈವರೆಗೆ, ಚೀರದೆ ಚರ್ಚಿಸಿ, ಚೆನ್ನಾಗಿ ಚೇತರಿಸಿಕೊಂಡರು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಛಾಯಾಚಿತ್ರ, ರೇಖಾಚಿತ್ರ ಅಥವಾ ಕನ್ನಡಿಯಲ್ಲಿ ನನ್ನ ಬಿಂಬವನ್ನು 'ತೋರಿಸು'-
ಕೈಯಲ್ಲಿರುವುದು ಬಿಸಿ, ಆದ್ದರಿಂದ ಎಸೆದುಬಿಡು, 'ಬಿಸಾ'ಕು- ಒಂದೇಪದ-
ಮುಟ್ಟಿದ್ದನ್ನು ತನ್ನ ಶಾಖ ಅಥವಾ ಶಕ್ತಿಯಿಂದ ಹತ್ತಿಕೊಂಡು ಉರಿಯುವಂತೆ ಮಾಡುವ-
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇದು 'ಕೈ'ವಶವಾಗಿರುವ, ಅಭ್ಯಾಸದಿಂದ ವಶವಾಗಿರುವ ಕೌಶಲ್ಯ-
ಮನೆಗೆ ತಂದ 'ಮಣಿ'ಯನ್ನು ಹೆಂಡತಿ ನನಗೇ ಇರಲಿ ಎಂದು ಇಟ್ಟುಕೊಂಡಳಂತೆ-
'ಗಣಿ'ಯ ಲೆಕ್ಕಾಚಾರಕ್ಕೆ 'ತ' ಸೇರಿದರೆ, ಅಲ್ಲಿ ಲಾಭ ಲಭ್ಯ ಎನ್ನಬಹುದು-
ಇದು ಪ್ರತ್ಯೇಕವಾಗಿ 'ಎತ್ತಿಡು' ಎಂದು ಹೇಳುವ ಆಡು ಭಾಷೆಯ ಪದ-
ಗತಪ್ರತ್ಯಾಗತ
ನಮ್ಮ ಆಚಾರಿ ಬಹಳ ಒಳ್ಳೆಯವನು. ಅದಕ್ಕೇ ಅವನನ್ನು 'ಸದಾಚಾರಿ ಎಂದು ಕರೆಯುತ್ತಿದ್ದೆವು. ಆದರೆ, ಅವನು ಮಾತ್ರ 'ಚಾ'ಗೆ (ಇಂಗ್ಲಿಷ್‌ನ 'ಟೀ') ಪರಮದಾಸನಾಗಿ ಬಿಟ್ಟ. ಅವನನ್ನು ಹೀಗೆ ಕರೆಯೋಣವೇ?
- ಸದಾಚಾರಿಚಾದಾಸ
ನಿನ್ನೆಯ ಉತ್ತರಗಳು:
3 ಅಕ್ಷರ: ದಹನ, ಹನುಮ, ನಮನ
4 ಅಕ್ಷರ: ಅನುಗ್ರಹ, ನುಗ್ಗೇಹಳ್ಳಿ, ಗ್ರಹಚಾರ, ಹಳ್ಳಿರಸ್ತೆ
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

