ನಟನೆ

ಹುಲಿಕಲ್ ನಟರಾಜು ಎಂದ ಕೂಡಲೇ ನೂರಾರು ಪವಾಡಗಳು ಕಣ್ಮುಂದೆ ಗೋಚರವಾಗುತ್ತವೆ. ಬುರುಡೆ ಪವಾಡಗಳ ಹಿಂದಿನ ಸತ್ಯಗಳನ್ನು ಬಯಲು ಮಾಡುವ ನಟರಾಜು ಅವರ ಸಾಹಸಗಳೂ ರೋಚಕ. ಜನತೆಯಲ್ಲಿ ವೈಜ್ಞಾನಿಕ ತಿಳುವಳಿಕೆ ಮೂಡಿಸುತ್ತಿರುವ ನಟರಾಜು ಅವರ ವೈಯಕ್ತಿಕ ಜೀವನವೂ ರೋಚಕ ಘಟನೆಗಳಿಂದ ಕೂಡಿದೆ.
ಅವರ ಆತ್ಮಕತೆ ಈಗ ಬೆಳ್ಳಿತೆರೆ ಮೇಲೆ ಸಿನಿಮಾ ರೂಪ ಪಡೆದುಕೊಳ್ಳುವ ಸನ್ನಾಹದಲ್ಲಿದೆ. ಅವರೇ ಬರೆದಿರುವ 'ಕಲ್ಲು ಮುಳ್ಳಿನ ಹಾದಿ' ಎನ್ನುವ ತಮ್ಮ ಆತ್ಮಕಥೆಗೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರ ಮುಂದಿನ ತಿಂಗಳು 25ರ ನಂತರ ಶುರುವಾಗಲಿದ್ದು, ನಾಲ್ಕೈದು ನಿರ್ಮಾಪಕರು ಮುಂದೆ ಬಂದಿದ್ದಾರೆ. ಚಿತ್ರದ ಮೂಲಕ ನಾಡಿನ ಪ್ರತಿ ಹಳ್ಳಿಯ ಸಾಮಾನ್ಯ ವ್ಯಕ್ತಿಯಲ್ಲೂ ವಿಜ್ಞಾನದ ತಿಳುವಳಿಕೆ ಮೂಡಿಸುವುದು ಉದ್ದೇಶ. ದೇವರ ಹೆಸರಿನಲ್ಲಿ ತಾಯಿಯನ್ನು ಅತ್ಯಾಚಾರ ಮಾಡಲು ಬಂದ ಕಪಟ ಸ್ವಾಮಿಯಿಂದ ಪಾರಾದದ್ದು, ಕೊಲೆ ಬೆದರಿಕೆ... ಹೀಗೆ ಹತ್ತಾರು ರೋಚಕ ಘಟನೆಗಳನ್ನು ಚಿತ್ರ ಒಳಗೊಂಡಿದೆಯಂತೆ. 'ಮಸಾಲೆ ಅಂಶಗಳನ್ನು ಒಳಗೊಂಡ ಕಮರ್ಷಿಯಲ್ ಚಿತ್ರದಂತೆ ಮಾಡುತ್ತಿಲ್ಲ. ಅರಿವಿನ ಭಾಗವಾಗಿಯೇ ಈ ಚಿತ್ರ ಮಾಡಲು ಮುಂದಾಗಿದ್ದೇನೆ' ಎನ್ನುತ್ತಾರೆ ನಟರಾಜು.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


