ಶತಕೋಟಿ ರುದ್ರ ಜಪಯಜ್ಞ ಬೆಳಗುತ್ತಿದೆ ಬೆಲಗೂರು

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಐತಿಹಾಸಿಕ ಬೆಲಗೂರು ಗ್ರಾಮ ಈಗ ದೇಶದ ಭೂಪಟದಲ್ಲಿ ಗುರುತಿಸಿಕೊಳ್ಳುವ ಸ್ಥಾನ ಪಡೆದಿದೆ.
ದೇಶದಲ್ಲಿಯೇ ಪ್ರಥಮ ಎನ್ನಲಾದ ಜ.18ರಿಂದ ಹನ್ನೊಂದು ದಿನಗಳ ಕಾಲದ ಲೋಕ ಕಲ್ಯಾಣಾರ್ಥ ಶತ ಕೋಟಿ ರುದ್ರ ಜಪಯಜ್ಞ ತತ್ಸಾಂಗತಾ ಮಹಾಯಾಗ ನಡೆಯುತ್ತಿದೆ. ಈ ಮಹಾಯಾಗದಲ್ಲಿ 136 ಹೋಮ ಕುಂಡಗಳಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಆಗಮಿಸಿದ 1331 ಋತ್ವಿಜರು ಪ್ರತಿನಿತ್ಯ 11 ಬಾರಿ ರುದ್ರ ಹೋಮ, ಒಟ್ಟು 1,61,051 ರುದ್ರ ಹೋಮಗಳನ್ನು ನಡೆಸುತ್ತಿದ್ದಾರೆ.
ಲೋಕ ಕಲ್ಯಾಣ ದೃಷ್ಟಿಯಲ್ಲಿಟ್ಟುಕೊಂಡು ನಾಡಿನ ಎಲ್ಲೆಡೆ ಸುಭಿಕ್ಷೆ ನೆಲೆಸಬೇಕೆಂಬ ಶ್ರೀ ಬಿಂದು ಮಾಧವ ಸ್ವಾಮೀಜಿಯವರ ಸಂಕಲ್ಪದಿಂದ ಈ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ನಾಡಿನ ವಿವಿಧೆಡೆ ದಶರುದ್ರ, ಶತರುದ್ರ, ಸಹಸ್ರ ರುದ್ರ, ದಶಸಹಸ್ರ ರುದ್ರ ಮುಂತಾದ ಕಾರ್ಯಕ್ರಮಗಳು ನಡೆದಿವೆ. ಆದರೆ, ಇದೇ ಮೊದಲ ಬಾರಿಗೆ ಶತಕೋಟಿ ರುದ್ರಯಾಗ ಬೆಲಗೂರಿನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಅಷ್ಟಾದಶ ಪುರಾಣಗಳ ಅಶ್ವತ್ಥ ಪ್ರದಕ್ಷಿಣೆ, ಸೂರ್ಯ ನಮಸ್ಕಾರ, ತ್ರಿಪುರ ರಹಸ್ಯ, ಪ್ರಸ್ಥಾನತ್ರಯಾ ಭಾಗ, ವೇದಾಂಗ ದಶಗ್ರಂಥ ಪಾರಾಯಣ, ಶುಕ್ಲ ಯಜುರ್ವೇದ ಪಾರಾಯಣ, ಸಾಮವೇದ ಪಾರಾಯಣ, ಭಗವದ್ಗೀತಾ ದಶದೇವಿ, ವಿಷ್ಣು ಗಣೇಶ, ಶಿವರಾಮ, ಆಂಜನೇಯ ಸ್ಕಂದ, ಸೂರ್ಯರನ್ನ ಕುರಿತು ಸಹಸ್ರನಾಮ ವಿವಿಧ ರಾಮಾಯಣ ಪಾರಾಯಣ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯುತ್ತಿವೆ. ಈ ಯಾಗವನ್ನು ಮಾಡುತ್ತಿರುವವರು ಬೆಲಗೂರಿನ ಶ್ರೀ ಬಿಂದು ಮಾಧವ ಶ್ರೀಗಳು. ಈ ಸ್ವಾಮೀಜಿ ಪ್ರತಿ ವರ್ಷ ಒಂದಿಲ್ಲೊಂದು ಯಜ್ಞ, ಯಾಗಾದಿಗಳನ್ನು ಕೈಗೊಂಡು ಲೋಕ ಕಲ್ಯಾಣಕ್ಕಾಗಿ ಇಂತಹ ಯಾಗಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಾಡಿನ ವಿವಿಧ ಪ್ರದೇಶಗಳ ಜನರು ಬೆಂಬಲ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


