ಮಾನವ ಸ್ನೇಹಿ ಈ ಕರಿಬೇವು
ಬಹುಶಃ ನಿಮಗೂ ಈ ಪ್ರಶ್ನೆ ಕಾಡಿರಬಹುದು. ಕರಿಬೇವು ಯಾಕೆ ಅಷ್ಟು ಪರಿಮಳಯುಕ್ತ, ಸ್ವಾದಿಷ್ಟ? ಅಂತ. ಏಕೆಂದರೆ, ಕರಿಬೇವಿನಲ್ಲಿ ವಿಮುಕ್ತ ಅಮೈನೊ ಆಮ್ಲಗಳೇ ಹೆಚ್ಚಿವೆ. ಅಸ್ಪರಿಜಿನ್, ಗ್ಲೈಸಿನ್, ಸೀರಿನ್, ಆಸ್ಪಾಟೀಕ್ ಆಮ್ಲ, ಗ್ಲುಟಾಮಿಕ್ ಆಮ್ಲ, ತ್ರೇಯೋನಿನ್, ಆ್ಯಲನಿನ್, ಪ್ರೋಲಿನ್, ಟೈರೋಸಿನ್, ಟ್ರಿಫ್ಟೋಫ್ಯಾನ್, ಅಮೈನೊ ಬ್ಯುಟರಿಕ್ ಆಮ್ಲ, ಆರ್‌ನಿತಿನ್, ಲೈಸಿನ್, ಆರ್‌ಜಿನಿನ್ ಮತ್ತು ಹಿಸ್ಪಿಡಿನ್ ಇವುಗಳ ಮೊತ್ತವೇ ಕರಿಬೇವು ಎಂಬ ಪರಿಮಳ ಮತ್ತು ಆರೋಗ್ಯದಾಯಕ ಎಲೆ.
ಅಲ್ಲದೆ, ಕರಿಬೇವಿನ ಕಡ್ಡಿಗಳು ಮತ್ತು ಎಲೆಗಳಲ್ಲಿ ಶೇ.0.8ರಷ್ಟು ಪೊಟ್ಯಾಶ್ ಇದೆ. ಆಗಷ್ಟೇ ಮರದಿಂದ ಕೊಯ್ದ ಎಲೆಗಳನ್ನು ನೀವು ಹಬೆ ಭಟ್ಟಿಗೆ ಹಾಕಿದಾಗ ಶೇ.2.6ರಷ್ಟು ತೈಲ ಸಿಗುತ್ತದೆ. ಕೆಲವೊಂದು ಸಾಬೂನುಗಳಿಗೆ ಗಾಢ ಪರಿಮಳ ಬರಲು ಈ ತೈಲವನ್ನು ಬಳಸಲಾಗುತ್ತದೆ. ಕರಿಬೇವಿನ ತೈಲಕ್ಕೆ ಚರ್ಮವನ್ನು ಕಾಂತಿದಾಯಕಗೊಳಿಸುವ ಸಾಮರ್ಥ್ಯವೂ ಇರುವುದರಿಂದ ಮಾರುಕಟ್ಟೆಯಲ್ಲಿ ಅತ್ಯಧಿಕ ಡಿಮ್ಯಾಂಡ್ ಇದೆ.
ಕರಿಬೇವಿನ ಬಳಕೆಗೆ ಶತಮಾನಗಳ ಇತಿಹಾಸ ಇದೆ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಕರ್ರಿ ಮತ್ತು ಚಟ್ನಿಗಳಲ್ಲಿ ಬಳಸುತ್ತಾರೆ. ಇನ್ನು ಆಯುರ್ವೇದಿಕ್ ಔಷಧಗಳಲ್ಲಿ ಕರಿಬೇವಿನ ಪಾತ್ರ ಅಮೋಘ ಅಂತಲೇ ಹೇಳಬೇಕು. ಈ ಗಿಡದಲ್ಲಿ ಯಾವುದೂ ನಿಷ್ಪ್ರಯೋಜಕ ಅಲ್ಲ. ಎಲೆ, ತೊಗಟೆ, ಬೇರನ್ನು ಶಕ್ತಿದಾಯಕ, ಜಠರೋತ್ತೇಜಕ, ವಾತಹರ ಗುಣಗಳಿಗಾಗಿ ಬಳಸುತ್ತಾರೆ. ಹುರಿದ ಎಲೆಗಳ ಕಷಾಯವನ್ನು ವಮನ ನಿಲ್ಲಿಸಲು ಬಳಸುತ್ತಾರೆ.
ವಿಷಜಂತುಗಳೇನಾದರೂ ಕಡಿದರೆ, ಅದರ ಮೇಲೆ ಕರಿಬೇವನ್ನು ಪೇಸ್ಟ್ ರೀತಿ ಬಳಿಯಲಾಗುತ್ತದೆ. ವಿಷವನ್ನು ಹೀರುವ ಸಾಮರ್ಥ್ಯವೂ ಈ ಕರಿಬೇವಿಗಿದೆ.
ಅಲ್ಲದೆ, ಕರಿಬೇವನ್ನು ನೀವು ಸಾಂಬಾರಿಗೆ ಹಾಕಿಯೇ ತಿನ್ನಬೇಕಂತಿಲ್ಲ. ಹಸಿಯಾಗಿಯೇ ತಿಂದರೂ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು. ಹೀಗೆ ಹಸಿರೆಲೆಗಳನ್ನು ತಿನ್ನುವುದರಿಂದ ರಕ್ತಬೇಧಿ ನಿಲ್ಲುತ್ತದೆ. ಎಲೆಯ ಕಷಾಯದ ಜತೆಗೆ ಕಹಿ ಔಷಧ ಬೆರೆಸಿದರೆ ಬಂದ ಜ್ವರವೂ ಹೊರಟು ಹೋಗುತ್ತದೆ.
ಪುದಿನ ಜತೆಗೆ ಎಲೆಗಳನ್ನು ಅರೆದು ಚಟ್ನಿ ಮಾಡಿ ತಿಂದರೆ ಅದು ವಮನ ತಡೆಯುತ್ತದೆ.
ಆಯುರ್ವೇದ ಪದ್ಧತಿಯಲ್ಲಂತೂ ಕರಿಬೇವನ್ನು ಒಣಗಿಸಿ ಮಾಡಿದ ಪುಡಿಯನ್ನಿ ಹಲವು ಚಿಕಿತ್ಸೆಗೆ ಬಳಸುವುದುಂಟು. ಅದಕ್ಕೆ ಜೇನುತುಪ್ಪ, ಅಡಕೆ ರಸ ಬೆರೆಸಿ ಸೇವಿಸಲು ಸೂಚಿಸಲಾಗುತ್ತದೆ. ಕರಿಬೇವಿನ ಎಲೆ, ಹಣ್ಣು, ತೊಗಟೆ ಮತ್ತು ಬೇರುಗಳಲ್ಲಿ 'ಕೊನಿಗಿನ್' ಎಂಬ ಗ್ಲೂಕೊಸೈಡ್ ಪದಾರ್ಥ ಇದೆ. ಎಲೆಗಳಿಂದ ನೀರಿನಲ್ಲಿ ತೆಗೆದ ಸಾರವನ್ನು ಹೆಣ್ಣು ಗಿನಿಪಿಗ್‌ಗಳಿಗೆ ಸೇವಿಸಲು ಕೊಟ್ಟಾಗ ಅವುಗಳಲ್ಲಿ ರಕ್ತಕಣ ಸೂಚ್ಯಂಕ ಹೆಚ್ಚುತ್ತದೆ. ಬೇರಿನ ರಸವನ್ನು ಮೂತ್ರಪಿಂಡಗಳಿಗೆ ಸಂಬಂಧಿಸಿದ ನೋವು ಹೋಗಲಾಡಿಸಲು ಕೊಡುತ್ತಾರೆ.
ಒಟ್ಟಿನಲ್ಲಿ ಕರಿಬೇವು ಮಾನವನ ಬಹುತೇಕ ರೋಗಕ್ಕೆ ರಾಮಬಾಣ ಆಗುವಂಥ ಎಲೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

