ಬೈಟುಕಾಫಿ

ಬೆಳಕಿನ ಭೋಜನ

Published On :

ಬೆಳದಿಂಗಳ ಊಟ ಅಂದರೆ ಸ್ವಲ್ಪ ರೊಮ್ಯಾಂಟಿಕ್ ಅನಿಸಬಹುದು. ಆದರೆ ಇದು ರಮ್ಯತೆಯನ್ನೂ ಮೀರಿದ ತಿಳಿವಳಿಕೆಗೆ ಸಂಬಂಧಿಸಿದ್ದು. ಸಾಂಪ್ರದಾಯಿಕ, ವಿಷಮುಕ್ತ ದೇಶೀಯ ಆಹಾರ ಕುರಿತು ಅರಿವು ಮೂಡಿಸಲು ಬಾನುಲಿ ಕೃಷಿ ಉತ್ಪಾದಕರ ಕಂಪನಿಯು ಪ್ರತಿ ತಿಂಗಳು ಹುಣ್ಣಿಮೆಯಂದು ಬೆಳದಿಂಗಳ ಊಟ ಏರ್ಪಡಿಸುತ್ತಿದೆ.
ಕಂಪನಿ ಮೈಸೂರು ಆಕಾಶವಾಣಿ ರೂಪಿಸಿರುವ ಕೃಷಿಕರ ಮುಂದಾಳತ್ವದ ಸಂಸ್ಥೆ. ಮೈಸೂರಿನ ಜಯಲಕ್ಷ್ಮೀಪುರಂನ 7ನೇ ಮುಖ್ಯರಸ್ತೆಯ ಎಸ್‌ಬಿಎಂ ತರಬೇತಿ ಕೇಂದ್ರದ ಎದುರು ಆಡಳಿತ ಕಚೇರಿ ಹೊಂದಿದೆ. ಉತ್ತಮ ಆಹಾರ- ವಿಹಾರ ಕುರಿತಂತೆ ಬಾನುಲಿ ಕೃಷಿ ಸಂವಾದದ ನಂತರ ಸಾವಯವ ಭೋಜನ ಕಾರ್ಯಕ್ರಮ ಕಳೆದ ಎರಡು ತಿಂಗಳಿಂದ ನಡೆಯುತ್ತಿದೆ.
ಸಾವಯವ ಭಕ್ಷ್ಯಗಳು
ಕಷಾಯ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಕೆಂಪಕ್ಕಿ ಅನ್ನ, ಬಸ್ಸಾರು, ಮೊಳಕೆ ಕಾಳಿನ ಪಲ್ಯ, ಕೋಸಂಬರಿ, ಮೊಳಕೆ ಕಾಳಿನ ಹಪ್ಪಳ, ಔಷಧಿ ಅಕ್ಕಿ (ನವರ) ಪಲಾವ್, ಕಜ್ಜಾಯ, ದೇಶಿ ಅಕ್ಕಿ ಪಾಯಸ, ಪುನರ್‌ಪುಳಿ ಶರಬತ್, ಜೋಳದ ರೊಟ್ಟಿ, ಮಡಿಕೆ ಕಾಳು ಪಲ್ಯ, ಅಗಸೆ ಚಟ್ನಿ, ನುಗ್ಗೆ ಉಪ್ಸಾರು, ನುಗ್ಗೆ ಸೊಪ್ಪಿನ ಬಾತು, ನವಣೆ ಅಕ್ಕಿ ಪಾಯಸ, ರಾಗಿ ಪಕೋಡ, ತೊಗರಿ ನುಚ್ಚಿನ ಉಂಡೆ, ಡಯಾನ ರೈಸ್ (ಮಧುಮೇಹಕ್ಕೆ ಒಳ್ಳೆಯದು), ತಂಬುಳಿ, ಹುರಳಿ ಹಪ್ಪಳ, ಬೆಟ್ಟದ ನೆಲ್ಲಿ ಶರಬತ್, ಸಾವೆ ಅಕ್ಕಿ ಫ್ರೈಡ್‌ರೈಸ್, ಹುರಳಿಕಾಳು ಒಬ್ಬಟ್ಟು, ಪದ್ಮರೇಖ ಅನ್ನ, ಬರ್ಮಾ ಬ್ಲಾಕ್ ಪಾಯಸ, ಸಣ್ಣಾವಾಳ್ಯ ಅಕ್ಕಿ ಹಪ್ಪಳ ಮುಂತಾದವು ಇಲ್ಲಿ ಸೆಳೆಯುವ ಐಟಂಗಳು.
ಸಾವಯವ ಭೋಜನಕ್ಕೆ ಮಿತ ದರ ನಿಗದಿಪಡಿಸಲಾಗಿದೆ. ಈ ಬಾರಿ ಜ.27ರಂದು ಬೆಳದಿಂಗಳ ಊಟವಿದೆ. ಸಂಪರ್ಕ: ಕೆ. ವೆಂಕಟೇಶ್, ಮೊ.99452 90334.

ಗ್ರಾಹಕರ ಬೇಡಿಕೆಯ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ನಾಡಹಸುವಿನ ಹಾಲು ಮಾರಾಟವನ್ನು ಬಾನುಲಿ ಕೃಷಿಕರ ಉತ್ಪಾದಕರ ಕಂಪನಿ ಆರಂಭಿಸಲಿದೆ. ಎಚ್.ಡಿ. ಕೋಟೆ ತಾಲೂಕಿನ ಗಡಿಭಾಗದ ತನಿಮಂಟಿ ಎಂಬ ಗ್ರಾಮದಲ್ಲಿ ಹೆಚ್ಚಾಗಿ ನಾಡ ಹಸುಗಳನ್ನು ಸಾಕುತ್ತಿದ್ದು, ಅಲ್ಲಿಂದ ಹಾಲು ತರಿಸಲಾಗುವುದು.
- ಕೆ. ವೆಂಕಟೇಶ್

= ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.