ಲೆಕ್ಕ ರಾಜ ರಾಣಿ
1 ಭೂಮಿ ಮೇಲಿನ ಅತಿದೊಡ್ಡ ಹೂ ರಾಫ್ಲೆಸಿಯಾ ಅರ್ನಾಲ್ಡಿ. ಮೂಲ ಇಂಡೋನೇಷ್ಯಾ.
35 ಕಳೆದ ಇಷ್ಟು ವರ್ಷಗಳಲ್ಲಿ ಸುಮಾತ್ರ ಶೇ.50 ಕಾಡುಗಳನ್ನು ನಾಶಗೊಳಿಸಿದೆ.
175 ರಾಜಧಾನಿ ದೆಹಲಿಯಲ್ಲಿ ಇಷ್ಟು ರಾಷ್ಟ್ರೀಯ ಸ್ಮಾರಕಗಳಿವೆ.
2004 ಭೂನಕ್ಷೆ ತೋರಿಸುವ 'ಗೂಗಲ್ ಸರ್ಚ್' ಶುರುವಾದ ವರ್ಷ.
---
ಸಿಲ್ಲಿ ಕ್ವಿಜ್
ಹಾಸನದತ್ತ ಸಾಗುತ್ತಿರುವವರನ್ನು ಏನೆಂದು ಕರೆಯಬಹುದು?
- ಹಸನ್ಮುಖಿ (HASANಮುಖಿ)
ಗಂಡು ಪ್ರಾಣಿ ಮೊಟ್ಟೆ ಇಡುವ ಪ್ರದೇಶವನ್ನು ಹೀಗೆ ಕರೆಯಬಹುದು?
-ಅಂಡಮಾನ್ ("ANDA'"MAN')
-ಆರ್.ಕೆ.
---
ನಲಿನುಲಿ
ನಾಲಿಗೆ ನುಲಿ
ಕ್ಷಯದ ಕ್ಷೋಭೆಗೆ ಕ್ಷ-ಕಿರಣದಿಂದ ಕಾಯಕಲ್ಪ- ಕ್ಷಾಮಕ್ಕೆ ಕ್ಷಮೆಯ ಕ್ಷಾತ್ರವೇ ಕಾಮಧೇನು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಭಾರತದ ಮಾಜಿ ಕ್ರಿಕೆಟ್ ನಾಯಕ
ಗಂಗೂಲಿಯ 'ನೂರು ಶಬ್ದ'ಗಳು -
ರಜದಲ್ಲಿ ನೀ ಮೊಟಕಾದರೆ
ನಾನೇನೂ ಮಾಡಲಾರೆ -
ಈಕೆ ಸ್ತ್ರೀ, ಲಲನಾಮಣಿ, ಮಹಿಳೆ,
ಆದರಣೀಯ ವ್ಯಕ್ತಿ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಜನರನ್ನು ಸಂತೋಷಪಡಿಸುವ
ನಗುವಿನ ಒಂದು 'ಹನಿ' -
ಎದುರು ಪಕ್ಷದವ ಗೆದ್ದ, ಸೋತವನಿಗೆ ಸಿಟ್ಟು -
ಚಪಾತಿ ಪೂರ್ತಿ ಬೇಯದೇ ಇದ್ದಾಗ
ಇದು ಅಂಟಂಟು, ಆದರೂ ಬಿಸಿ -
ತುಂಬಾ ನಿರಾಸೆ ಆದಾಗ, ಏನೂ ಮಾಡಲಾಗದೆ
ಬಿಟ್ಟ ಶ್ವಾಸ -
ಗತಪ್ರತ್ಯಾಗತ
ಈ ತಿಂಡಿ ಬಲು ರುಚಿ, ಅದೂ ಬಿಸಿ ಬಿಸಿ ಇದ್ದಾಗ! ಆದರೆ ಅದರಲ್ಲೂ ಮೋಸ ಇದ್ದರೆ, ಹೇಗೆ, ಅಂತೀರಾ?
ಸಮೋಸ
ನಿನ್ನೆಯ ಉತ್ತರಗಳು:
3 ಅಕ್ಷರ: ಸಂಭವ, ಭವನ, ವನಜ.
4 ಅಕ್ಷರ: ಜಯರಾಮ, ಯಮಸುತ, ರಾಸುರಾಗ, ಮತಗಳು.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317ಛ141
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

