ಬೈಟುಕಾಫಿ

ಮೂಳೆಗಳೇಕೆ ಬೇಗ ಅಳಿಯುವುದಿಲ್ಲ?(ಜನರಲ್ ಸ್ಟೋರ್)

Published On :

ಮನುಷ್ಯರ ದೇಹವನ್ನು ಮಣ್ಣಿನಲ್ಲಿ ಹುಗಿದು ಬಹಳ ವರ್ಷಗಳಾದರೂ ಅವರ ಅಸ್ಥಿಪಂಜರ ಆ ಸ್ಥಳದಲ್ಲಿ ಉಳಿದಿರುತ್ತದೆ. ಭೂಮಿಯನ್ನು ಅಗೆಯುವಾಗ ಮತ್ತು ಪ್ರಾಚ್ಯವಸ್ತುಶಾಸ್ತ್ರಜ್ಞರು ಉತ್ಖನನ ನಡೆಸಿದಾಗ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರಗಳು ಸಂಪೂರ್ಣವಾಗಿ ದೊರಕಿರುವ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ಕಾರಣವೆಂದರೆ ಮನುಷ್ಯನ ಮೂಳೆಯು ಶೇಕಡ 70ರಷ್ಟು ಲವಣಗಳಿಂದ ಕೂಡಿದ್ದು. ಇದರಲ್ಲಿ ಶೇಕಡ 85ರಷ್ಟು ಕ್ಯಾಲ್ಸಿಯಂ ಮತ್ತು ಫಾಸ್ಪೇಟ್ ಇದೆ. ಹೀಗಾಗಿ ಮೂಳೆಯ ಸುತ್ತಲಿನ ಅಂಗಾಂಶಗಳು ಹಾಳಾದರೂ ಮೂಳೆ ಮಾತ್ರ ಹಾಗೆಯೇ ಉಳಿದಿರುತ್ತದೆ. ಅಸ್ಥಿಪಂಜರದಲ್ಲಿ ಬಹು ದೀರ್ಘಕಾಲ ಉಳಿಯುವುದೆಂದರೆ ತಲೆಬುರುಡೆ ಮತ್ತು ದವಡೆಗಳು. ನಂತರದ ಸ್ಥಾನದಲ್ಲಿ ಕಾಲಿನ ಮೂಳೆ ಹಾಗೂ ಸೊಂಟದ ಮೂಳೆಗಳು.

ಚ್ಯೂಯಿಂಗ್ ಗಮ್‌ನ ನಂಟು

ಮಾಯಾ ಎಂಬ ಜನಾಂಗದವರು ಪ್ರಾಚೀನ ಕಾಲದಲ್ಲಿ ಮಧ್ಯ ಅಮೆರಿಕದಲ್ಲಿ ವಾಸವಾಗಿದ್ದರು. ಇವರು 'ಸಪೋಡಿಲ್ಲ' ಮರದ ರಬ್ಬರ್‌ನಂಥ ಗಟ್ಟಿಯಾದ ರಸವನ್ನು ಜಗಿಯುತ್ತಿದ್ದರು. ಉತ್ತರ ಅಮೆರಿಕದ ಇಂಡಿಯನ್ನರು 'ಸ್ಟ್ರೂಸ್‌' ಮರದ ಅಂಟನ್ನು ಜಗಿಯುತ್ತಿದ್ದರು. ಐರೋಪ್ಯರು ಉತ್ತರ ಅಮೆರಿಕಕ್ಕೆ ಬಂದಾಗ ಅವರೂ ಸಪೋಡಿಲ್ಲ ಮರದ ರಸವನ್ನು ಜಗಿಯುವ ಅಭ್ಯಾಸವನ್ನು ಬೆಳೆಸಿಕೊಂಡರು. ನಂತರ ಈ ರಸಕ್ಕೆ ಸುಗಂಧ, ಸಿಹಿಯನ್ನು ಬೆರೆಸಲಾಯಿತು. ಈಗಲೂ ಚ್ಯೂಯಿಂಗ್ ಮತ್ತು ಬಬಲ್ ಗಮ್‌ಗಳಲ್ಲಿ ಈ ಸಪೋಡಿಲ್ಲ ಮರದ ರಸವನ್ನೇ ಬಳಸಲಾಗುತ್ತದೆ. <
- ಅರಳಕುಪ್ಪೆ ಶ್ರೀನಿವಾಸ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.