ಬೈಟುಕಾಫಿ

ಆಕೆ ಮಾತನಾಡುವಾಗ..

Published On :

ಆಕೆ
ಮಾತನಾಡುವಾಗ
ಕಣ್ಣಿನ ಮೇಲೆ
ಕೂದಲು ಬೀಳುತ್ತಲೇ
ಇರುವುದು ಜಾರಿ ಜಾರಿ,
ಅದನ್ನವಳು
ಸರಿಮಾಡಿಕೊಳ್ಳುತ್ತ
ಹೇಳುವಳು
'ಸಾರಿ ಸಾರಿ'!

-ಪರೇಶ್ ಸರಾಫ್
---
ನುಲಿ ನಲಿ

ನಾಲಿಗೆ ನುಲಿ
ಬೆಳ್ಳಂಬೆಳಗು ಬಾಳಬೆಳಕು ಬಾನಿನಲ್ಲಿ ಬಂದಿತು ಬಂಗಾರದ ಬೆಳ್ಳಿಮೋಡವಾಗಿ!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಖಂಡಿತ ಆಗುತ್ತದೆ, ಆಗಬಹುದು
ಎನ್ನುವನಾದ್ಯತೆ ನೂರಕ್ಕೆ ನೂರು        -
ಕಾಡಿಗೆ ಭಯಪ್ರವೇಶವಾಗಿ ಸುಂದರಮಂದಿರ
ಅಲ್ಲೇ ನಿರ್ಮಾಣ            -
ಹೊಡೆದುಹಾಕುವುದಕ್ಕೆ ಕಾಡು ಬಂದು
ಸುಂದರ ಯುವತಿ            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಹನುಮನ ಪ್ರಾಣ ರಾಮನಿಗೆ
ಮೊದಲಲ್ಲೇ 'ಜಯ'ಕಾರ        -
ಇವನು ಪಾಂಡವರಲ್ಲಿ ಮೊದಲಿಗ, ಧರ್ಮ
ದೇವತೆಯ ಮಗ            -
ಹಸು-ಎಮ್ಮೆ, ಕುರಿಯಂಥ 'ರಾಸು'ಗಳು
ಒಟ್ಟಿಗೆ ಕೂಗುವ 'ರಾಗ'            -
ಚುನಾವಣೆಯಲ್ಲಿ ಆರಿಸಿ ಬರಬೇಕಾದರೆ
ಇವುಗಳು ಬೇಕೇಬೇಕು            -

ಗತಪ್ರತ್ಯಾಗತ
ಮುಂದೋಡುವ ಪದಗಳು: ವರ, ವರದ, ವರಪ್ರದ, ವರಪ್ರಸಾದ.
ಹಿಂದೋಡುವ ಪದಗಳು: ಭವ, ಸಂಭವ, ಅಸಂಭವ

ನಿನ್ನೆಯ ಉತ್ತರಗಳು:

3 ಅಕ್ಷರ:  ಬದನೆ, ದವನ, ನೆನಪು
4 ಅಕ್ಷರ:  ಇತಿಹಾಸ, ತಿಮ್ಮನಿಲ್ಲ, ಹಾನಿಕರ, ಸಲ್ಲರಲ್ಲ.

-ಎಲ್.ಜಿ. ಜ್ಯೋತೀಶ್ವರ
-lgjyothish@gmail.com
ಮೊ:9845317141

----
ಲೆಕ್ಕಾ ರಾಜ ರಾಣಿ
1 ಜಗತ್ತಿನ ಅತಿವೇಗದ ಹಾವು ಬ್ಲ್ಯಾಕ್ ಮಾಂಬಾ. ಗಂಟೆಗೆ 16- 19 ಕಿ.ಮೀ. ವೇಗ.

24 ಬಾಕ್ಸ್ ಜೆಲ್ಲಿ ಫಿಶ್‌ಗೆ ಇಷ್ಟು ಕಣ್ಣುಗಳು ಇರುತ್ತವೆ!

150 ಹಾಕಿ ಸ್ಟಿಕ್ ಇರಬೇಕಾದ ಕನಿಷ್ಠ ಉದ್ದ ಇಷ್ಟು ಸೆಂಟಿಮೀಟರ್.

1898 ಇಷ್ಟನೇ ಇಸವಿಯಲ್ಲಿ ಅಮೆರಿಕದ ನಿಕೋಲ ಟೆಲ್ಸಾ ಎಂಬಾತ ಟಿವಿ ರಿಮೋಟ್ ಕಂಡುಹಿಡಿದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.