ನಿಸ್ವಾರ್ಥಿಗಳಾಗಿ...
ನಮ್ಮ ನಿತ್ಯ ಜೀವನದಲ್ಲಿ ಅನುಭವಿಸುವ ನೋವು, ಸಂಕಟ, ಕಷ್ಟ, ವೇದನೆಗಳಿಗೆ ಕಾರಣಗಳನ್ನು ನಾವೆಂದೂ ಆಲೋಚಿಸುವುದಿಲ್ಲ. ಅದಕ್ಕೆಲ್ಲಾ ಕಾರಣ ದೇವರು, ವಿಧಿ ಎಂದು ದೂರುತ್ತೇವೆ. ಆದರೆ ನಾವೇ ದೇವರಾಗಿ ಒಮ್ಮೆ ಆಲೋಚಿಸಿದರೆ ನಮ್ಮ ನಿತ್ಯ ಜೀವನದಲ್ಲಿ ನಾವು ಯಾವ ಗುಣಗಳನ್ನು ಅಳವಡಿಸಿಕೊಂಡಿದ್ದೇವೆಯ ತ್ಯಾಗ, ಸೇವೆ, ನಿಷ್ಠೆ, ಪರೋಪಕಾರ, ಕರ್ತವ್ಯಪರತೆ, ನಿಃಸ್ವಾರ್ಥ ಮೊದಲಾದ ಗುಣಗಳನ್ನು ಎಷ್ಟರಮಟ್ಟಿಗೆ ಅನುಸರಿಸುತ್ತಿದ್ದೇವೆ?
'ಉತ್ತಿಷ್ಠತ, ಜಾಗೃತ, ಪ್ರಾಪ್ಯವರಾನ್ನಿ ಬೋಧತ' ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಿಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಇತರರ ಕ್ಷೇಮಕ್ಕಾಗಿ ನಿಮ್ಮ ಕ್ಷುದ್ರ ಜೀವನವನ್ನು ತ್ಯಾಗ ಮಾಡಿ. ಮಹರ್ಷಿಗಳಾಗಲೀ, ಪಾಪಿಯಾಗಲಿ, ಶ್ರೀಮಂತನಾಗಲಿ ಯಾರ ದೇಹವೂ ಶಾಶ್ವತ ವಲ್ಲ. ನಿಮ್ಮ ಜನಾಂಗದ ಹಿತಕ್ಕೆ, ಮಾನವ ಕೋಟಿಯ ಹಿತಕ್ಕೆ ತ್ಯಾಗ ಮಾಡುವುದು ಮಹಾಕಾರ್ಯ. ಈ ಬದುಕು ಹ್ರಸ್ವ, ಜಗತ್ತಿನ ವೈಭವಗಳು ಅಲ್ಪಕಾಲೀನ. ಆದರೆ ಯಾರು ಇತರರಿಗಾಗಿ ಬದುಕುತ್ತಾರೋ ಅವರುಮಾತ್ರ ಬದುಕುತ್ತಾರೆ.
ತ್ಯಾಗಿಗಳಾಗಿ, ತ್ಯಾಗವಿಲ್ಲದೆ ಯಾವ ಮಹಾಕಾರ್ಯವೂ ಸಾಧ್ಯವಾಗದು. ಯಾರು ಅತಿ ಕಡಿಮೆ ವಸ್ತುಗಳ ಮೇಲೆ ಜೀವಿಸುವರೋ, ಯಾರು ಸಂಯಮಿಗಳೋ ಅವರೇ ಕೊನೆಗೆ ಜಯಶಾಲಿಗಳಾಗುವರು.
ಯಾವುದಕ್ಕೆ ಸ್ವಾರ್ಥವೇ ಆಧಾರ ವಾಗಿದೆಯೋ, ಸ್ಪರ್ಧೆಯೇ ಮೂಲಮಂತ್ರ ವಾಗಿದೆಯೋ, ಭೋಗವೇ ಪರಮಗುರಿ ಯಾಗಿದೆಯೋ ಅದೆಲ್ಲ ಇಂದಲ್ಲ ನಾಳೆ ಸಾಯಲೇಬೇಕು. ಭೋಗದ ಹೆಸರಿನಲ್ಲಿ ಧರ್ಮ ಪ್ರಚಾರ ಮಾಡುವುದನ್ನು ಬಿಟ್ಟು ತ್ಯಾಗದ ಹೆಸರಿನಲ್ಲಿ ಮಾಡಿ! ತ್ಯಾಗಭೋಗಿಗಳಾಗಿ... ನಿಃಸ್ವಾರ್ಥಿಗಳಾಗಿ...
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

