ಬೈಟುಕಾಫಿ

ಮೊಣಕಾಲ್ ಮಾರು

ಇಷ್ಟು ದಿನ ನಾವು ಜಾಹಿರಾತುಗಳನ್ನು ಎಲ್ಲೆಲ್ಲಿ ನೋಡಿದ್ವಪ್ಪ? ಹೆಚ್ಚಂದ್ರೆ ಟೀವಿ, ಪೇಪರು, ಪೋಸ್ಟರು, ಫ್ಲೆಕ್ಸ್, ಗೋಡೆಗಳ ಮೇಲೆ...

ಮೊಣಕಾಲ್ ಮಾರು
Published On :

ಇಷ್ಟು ದಿನ ನಾವು ಜಾಹಿರಾತುಗಳನ್ನು ಎಲ್ಲೆಲ್ಲಿ ನೋಡಿದ್ವಪ್ಪ? ಹೆಚ್ಚಂದ್ರೆ ಟೀವಿ, ಪೇಪರು, ಪೋಸ್ಟರು, ಫ್ಲೆಕ್ಸ್, ಗೋಡೆಗಳ ಮೇಲೆ. ಆದ್ರೆ ಈಗ ಹುಡುಗಿಯರ ಬಾಡಿ ಮೇಲೂ ನೋಡ್ಬೋದು! ಹೌದು, ಇದು ಜಪಾನ್ ಬಳಸುತ್ತಿರುವ ಹೊಸ ತಂತ್ರ.
ಹೈಫೈ ಜಗತ್ತಿನಲ್ಲಿ ಎಲ್ಲವೂ ರಂಗು ರಂಗೇ. ಅದರಲ್ಲೂ ನಿತ್ಯ ಮಾಡರ್ನ್ ಆಗುತ್ತಿರುವ ಹುಡುಗಿಯರು ಇನ್ನಷ್ಟು ರಂಗು. ಜನ ಟೀವಿ ನೋಡದೇ ಇದ್ರೂ ಈ ಹುಡುಗಿಯರನ್ನು ನೋಡೋದು ಬಿಡಲ್ಲ ಎಂಬುದು ಜಪಾನ್ ಕಂಡುಕೊಂಡ ಸತ್ಯ. ಹೊಸ ಹೊಸ ಪ್ರಾಡಕ್ಟ್‌ಗಳ ಜಾಹೀರಾತನ್ನು ಟೀವಿ, ಪೇಪರ್‌ಗಳಿಗೆ ಕೊಡದೆ ಹುಡುಗಿಯರಿಗೆ ನೀಡಲಾಗುತ್ತದೆ. ಹುಡುಗಿಯರ ತೊಡೆ ಮೇಲೆ ಜಾಹೀರಾತು ಪ್ರಕಟಗೊಳ್ಳುತ್ತದೆ. ಇತ್ತೀಚೆಗಷ್ಟೇ ಆವಿಷ್ಕಾರಗೊಂಡ ಈ ಗಿಮಿಕ್ ಜಪಾನ್‌ನಲ್ಲಿ ಮೆಲ್ಲನೆ ಕ್ಲಿಕ್ ಆಗ್ತಿದೆ ಅಂತೆ.

ಏನಿದು ಗಿಮಿಕ್?
ಟಿ-ಶರ್ಟ್‌ಗಳ ಮೇಲೆ, ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡು ಪ್ರಾಡಕ್ಟ್‌ಗಳನ್ನು ಪ್ರಚಾರ ಮಾಡೋದು ಅಲ್ಲೀಗ ಸಂಪೂರ್ಣವಾಗಿ ನಿಂತುಹೋಗಿದೆ. ರೂಪದರ್ಶಿಗಳ ಕಾಲಿನ ಭಾಗವನ್ನು ಜಾಹೀರಾತಿಗಾಗಿಯೇ ಮೀಸಲಿಡಲಾಗಿದೆ. ಹೀಗಾಗಿ, ಇಲ್ಲಿ ದಿನದ ಲೆಕ್ಕದಲ್ಲಿ ಹುಡುಗಿಯರ ಕಾಲುಗಳು ಬಾಡಿಗೆಗೆ ದೊರೆಯುತ್ತವೆ. ಜಾಹೀರಾತು ಕಂಪನಿಗಳು ಸಾವಿರಾರು ಸುಂದರಿಯರನ್ನು ಇದಕ್ಕಾಗಿ ನೇಮಕ ಮಾಡಿಕೊಂಡಿವೆ. ಕಂಪನಿ ನೀಡಿದ ಪ್ರಾಡೆಕ್ಟ್‌ಗಳ ಲೋಗೋ ಅಂಟಿಸಿಕೊಂಡು ದಿನಪೂರ್ತಿ ಟೋಕಿಯೊ ರೌಂಡ್ ಹೊಡೆಯುವುದು, ಮುಖ್ಯವಾದ ಸ್ಥಳಗಳಲ್ಲಿ ನಿಂತು ಪ್ರಚಾರ ಮಾಡುವುದು ಈ ರೂಪದರ್ಶಿಗಳ ಡ್ಯೂಟಿ.

ಜಾಹಿರಾತು ನೀಡೋದು ಹೇಗೆ?
ಹೆಚ್ಚು ಪ್ಯಾಷನ್, ಅಡ್ವಾನ್ಸ್ ಟೆಕ್ನಾಲಜಿ ಮತ್ತು ತುಂಬಾ ಬಬ್ಲಿ ಸಂಸ್ಕೃತಿ ಹೊಂದಿರುವ ಜಪಾನಿನಲ್ಲಿ ಜಾಹೀರಾತು ನೀಡಲು ಪಾಲ್ಗೊಳ್ಳಲೂ ರೂಲ್ಸುಗಳಿವೆ. ಈ ರೂಪದರ್ಶಿಗಳು 18 ವರ್ಷ ದಾಟಿರಬೇಕು. ಮಿನಿ ಸ್ಕರ್ಟ್ ಮತ್ತು ಶೂ ಧರಿಸುವುದು ಕಡ್ಡಾಯ. ಇವೆರಡರ ಮಧ್ಯದ ತೊಡೆಯ ಭಾಗದಲ್ಲಿ ಕಂಪನಿಯವರು ನೀಡಿದ ಬ್ರಾಂಡ್‌ಗಳ ಲೋಗೋಗಳನ್ನು ಟ್ಯಾಟೂಗಳ ಮೂಲಕ ಮುದ್ರಿಸಲಾಗುತ್ತದೆ. ದಿನದಲ್ಲಿ 8 ಗಂಟೆಯಷ್ಟೇ ಈ ಪ್ರಚಾರ ಕಾರ್ಯ.
ಬರೀ ಇಷ್ಟೇ ಅಲ್ಲ. ರೂಪದರ್ಶಿಗಳು ಈ ವೇಳೆ ಹಲವು ಫೋಟೋಗಳನ್ನು ತೆಗೆಸಿಕೊಂಡು ಫೇಸ್‌ಬುಕ್, ಟ್ವಿಟ್ಟರ್‌ನಂಥ ಸೋಶಿಯಲ್ ನೆಟ್‌ವರ್ಕ್‌ಗಳಲ್ಲಿ ಅಪ್ಲೋಡ್ ಮಾಡಬೇಕು. ಹೀಗೆ ಮಾಡಿದ ಹುಡುಗಿಯರಿಗೆ ಕಂಪನಿಯವರು ಕೇಳಿದಷ್ಟು ಹಣ ನೀಡುತ್ತಾರಂತೆ. ಟೋಕಿಯೊ ಒಂದರಲ್ಲೇ ಇದನ್ನು ತಿಳಿದ 1,300 ಯುವತಿಯರು ತಮ್ಮ ಕಾಲುಗಳ ನೋಂದಾಣಿ ಮಾಡಲು ಜಾಹೀರಾತು ಏಜೆನ್ಸಿಗೆ ಲಗ್ಗೆ ಇಟ್ಟಿದ್ದಾರಂತೆ!
ಇದಿನ್ನೂ ಹೆಚ್ಚಾಗಲಿದೆ ಎಂಬುದು ಜಪಾನ್ ಕಂಪನಿಗಳ ಹೇಳಿಕೆ. ಈ ತಂತ್ರವನ್ನು ಭಾರತೀಯರು ಅಳವಡಿಸಿಕೊಳ್ಳುವುದು ಯಾವಾಗ? ನಮ್ಮ ಹುಡುಗಿಯರು ತುದಿಗಾಲಲ್ಲಿ ನಿಂತಿದ್ದಾರೆ... ಹುಡುಗರಿಗೆ ಹುಡುಗಿಯರನ್ನು ನೋಡಲು ಒಂದು ನೆಪವೂ ಬೇಕಿದೆ.

- ವಿಜಯ್ ಆರ್. ಹೊಸನಗರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.