ನುಲಿನಲಿ
ನಾಲಿಗೆ ನುಲಿ
ಹಾಡುಹಗಲಿನ ಹೊತ್ತಿನಲ್ಲೇ ಹೊರಬಾಗಿಲನ್ನು ಹಾರುಹೊಡೆದು ಹೀಗೆ ಹರಟೆ ಹೊಡೆಯುತ್ತಿದ್ದರೆ ಹೇಗೆಂದು ಹೌಹಾರಿ ಹೇಳಿದೆ!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಪಟಪಟ ಮಾತನಾಡಿಸುವ ಇವನ ನಟನೆ
ಬರೀ ಮೋಸ, ಕಡೆಯಲ್ಲಿ ಕೈಗೆ ಕರಟ -
ಇವನೊಬ್ಬ ತುಂಟ, ತರಲೆತನದ ಟಿಂಗರಬುಡ್ಡಣ್ಣ -
ನಮ್ಮ ಹಳೆಯ ಸ್ನೇಹಿತ, ಕೊಂಬು ಹೊತ್ತಿರುವ
ಶಕ್ತಿಶಾಲಿ ಗಂಡುಮೇಕೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಈ ಕಲಾವಿದನ ಚಮತ್ಕಾರವೆಲ್ಲಾ ಅವನ
ಕೈಗಳ ಮಧ್ಯೆ ಅಡಗಿದೆ -
ಸ್ಫೋಟವಾದ ಜ್ವಾಲಾಮುಖಿಯಿಂದ ಹರಿಯುವ,
ಸಿಕ್ಕಿದ್ದನ್ನೆಲ್ಲಾ ಸುಡುವ ಬೆಂಕಿರಸ -
ಗುಟ್ಟಾಗಿ ಮಾಡಿದ ಯಾವುದಾದರೂ ಸಂಚಿಗೆ
ಮತ್ತೊಂದು ಅಚ್ಚ ಕನ್ನಡದ ಪದ -
ರಸವೇ ನದಿಯಾಗಿ ಹರಿದುಬಂದರೆ, ಅದನ್ನು
ಏನೆಂದು ಕರೆಯುವಿರಿ? -
ಗತಪ್ರತ್ಯಾಗತ
ನಮ್ಮ ಸ್ನೇಹಿತ ಒಬ್ಬನ ಹೆಸರು ರಘೋತ್ತಮ. ಅವನು ಕಂಠಪೂರ್ತಿ ಕುಡಿದು ಪಾನಮತ್ತನಾದರೆ, ಭೀಕರ, ಅಸಹನೀಯ, ಅಲ್ಲವೇ? 'ರಘೋತ್ತಮಮತ್ತಘೋರ'
ನಿನ್ನೆಯ ಉತ್ತರಗಳು
3 ಅಕ್ಷರ- ಪ್ರಕಾಶ, ಕಾಳಿಕಾ, ಶಕಾರ.
4 ಅಕ್ಷರ- ದಿನಕರ, ನಮ್ಮರಸ, ಕರಪತ್ರ, ರಸತ್ರಯ.
-ಎಲ್.ಜಿ. ಜ್ಯೋತೀಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

