ಜನಶಕ್ತಿಯೇ ರಾಷ್ಟ್ರಶಕ್ತಿ
ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಕ್ಷೇತ್ರವನ್ನು ಸ್ವಾಭಿಮಾನದ, ದೇಶಪ್ರೇಮದ ನೆಲೆಯನ್ನಾಗಿಸಿದಾಗ ಸಹಜವಾಗಿಯೇ ಸರ್ವರ ಶಕ್ತಿಯಾಗಿ ಮೊಳಗುತ್ತದೆ. ಸರ್ವರೂ ಕರ್ಮಯೋಗಿಗಳಾದಾಗ ವ್ಯಕ್ತಿಗಳು ರಾಷ್ಟ್ರಶಕ್ತಿಯಾಗಿ ಬೆಳಗುತ್ತಾರೆ.
'ಭಾರತೀಯ ಜೀವನವಾಹಿನಿಯು ಹಿಂದಿನಿಂದಲೂ ಹರಿದುಬಂದದ್ದು ಧರ್ಮದ ಕಾಲುವೆಯಲ್ಲೇ. ಜೀವನದ ಪ್ರತಿಯೊಂದು ಕ್ಷೇತ್ರದ ಅವಶ್ಯಕತೆಯನ್ನು ಪೂರೈಸಿಕೊಟ್ಟದ್ದು ಈ ಧರ್ಮದ ಕಾಲುವೆಯೇ. ಆದ್ದರಿಂದ ಸಮಸ್ತ ಭಾರತವನ್ನು ಧಾರ್ಮಿಕ-ಆಧ್ಯಾತ್ಮಿಕ ಆದರ್ಶಗಳ ಆಧಾರದ ಮೇಲೆ ಸಂಘಟಿಸುವಂತೆ ಮಾಡುವುದೇ ಪ್ರಧಾನಕಾರ್ಯ.'
'ಧರ್ಮವೆಂದರೆ ಶಾಸ್ತ್ರ ಪ್ರಣೀತವಾದ ಸನಾತನ ತತ್ತ್ವಗಳೇ ಹೊರತು, ನಮ್ಮ ದೈನಂದಿನ ದೇಶಾಚಾರ-ಕಂದಾಚಾರಗಳಲ್ಲ. ಈ ಕಂದಾಚಾರಗಳು ಪೈರಿನೊಂದಿಗೇ ಬೆಳೆಯುವ ಕಳೆಗಳಂತೆ ಅವುಗಳನ್ನು ಕಿತ್ತೊಗೆಯಬೇಕು.'
'ಒಂದು ರಾಷ್ಟ್ರದ ಸ್ಥಿತಿಗತಿ-ಸ್ಥಾನಮಾನಗಳು ಅವಲಂಬಿಸಿಕೊಂಡಿರುವುದು ಆ ರಾಷ್ಟ್ರದ ವ್ಯಕ್ತಿ ವ್ಯಕ್ತಿಗಳ ಶೀಲ ಸ್ವಭಾವಗಳನ್ನು. ವ್ಯಕ್ತಿಗಳ ಶಕ್ತಿಯೇ ರಾಷ್ಟ್ರದ ಶಕ್ತಿ. ಆದ್ದರಿಂದ ಶ್ರೇಷ್ಠ ರಾಷ್ಟ್ರ ನಿರ್ಮಾಣವಾಗಬೇಕೆಂದು ಬಯಸುವ ಪ್ರತಿಯೊಬ್ಬನೂ- ಅವನು ಅಧಿಕಾರಿಯಾಗಿರಲಿ, ಕಾರಕೂನನಾಗಿರಲಿ, ವೈದ್ಯನಾಗಿರಲಿ, ಶಿಕ್ಷಕನಾಗಿರಲಿ, ಜಾಡಮಾಲಿಯಾಗಿರಲಿ- ಮೊದಲು ತನ್ನ ಶೀಲವನ್ನು ರೂಪಿಸಿಕೊಳ್ಳಬೇಕು. ಧೈರ್ಯ, ಶಕ್ತಿ, ಸ್ವಾಭಿಮಾನ, ಅನುಕಂಪೆ, ಸೇವಾಮನೋಭಾವ ಇವುಗಳನ್ನು ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಯುವ ಪೀಳಿಗೆಯು ತ್ಯಾಗ ಮತ್ತು ಸೇವೆಗಳನ್ನು ತನ್ನ ಅತ್ಯುಚ್ಛ ಆದರ್ಶವನ್ನಾಗಿ ಮಾಡಿಕೊಳ್ಳಬೇಕು.'
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

