ಬೈಟುಕಾಫಿ

ಹೀಗೊಂದು ಆಸೆ

Published On :

ಒಂದು ಕುದುರೆ ಇತ್ತು. ಅದ್ಭುತ ಚೆಲುವು ಅದರದು. ಅಷ್ಟೇ ಚುರುಕು, ಬುದ್ಧಿವಂತಿಕೆ. ಎಲ್ಲರೂ ಅದನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದರು. ಆದರೂ ಆ ಅಶ್ವಕ್ಕೆ ಅತೃಪ್ತಿ. ಇನ್ನೂ ಸುಂದರವಾಗಿ ಕಾಣಬೇಕೆಂಬ ಹಂಬಲ. ಅದಕ್ಕಾಗಿ ಸೌಂದರ್ಯ ದೇವತೆಯನ್ನು ಕುರಿತು ತಪಸ್ಸು ಮಾಡಿತು. ಅದಕ್ಕೆ ಮೆಚ್ಚಿದ ದೇವತೆ 'ಏನು ವರ ಬೇಕು ಕೇಳು' ಎಂದಿತು.
'ನಾನು ಇನ್ನೂ ಸುಂದರವಾಗಿ ಕಾಣಬೇಕು. ಅದಕ್ಕಾಗಿ ಚಿಕ್ಕದಾಗಿರುವ ನನ್ನ ಕತ್ತನ್ನು ಇನ್ನಷ್ಟು ಉದ್ದ ಮಾಡು. ನಾನು ಎತ್ತರವಾಗಬೇಕು. ಅದಕ್ಕಾಗಿ ನನ್ನ ಕಾಲುಗಳನ್ನು ಎತ್ತರಿಸಿ, ಅವುಗಳನ್ನು ಸ್ವಲ್ಪ ಸಪೂರ ಮಾಡು' ಎಂದುಕೇಳಿಕೊಂಡಿತು. ಸೌಂದರ್ಯ ದೇವತೆ ನಗುತ್ತ 'ತಥಾಸ್ತು' ಅಂದಿತು. ಮರುಕ್ಷಣ ಕುದುರೆ ಒಂಟೆಯ ರೂಪ ಧರಿಸಿತು. ತನ್ನನ್ನು ತಾನು ನೋಡಿಕೊಂಡ ಅದು ಕಂಗಾಲಾಯಿತು. 'ಓಹ್ ದೇವರೆ, ನನ್ನನ್ನು ಇನ್ನಷ್ಟು ಸುಂದರವಾಗಿ ಮಾಡು ಎಂದರೆ ಒಂಟೆಯ ರೂಪವನ್ನೇಕೆ ಕೊಟ್ಟೆ' ಎಂದು ಗೋಳಿಟ್ಟಿತು.
ದೇವತೆ ಶಾಂತವಾಗಿ ಹೇಳಿತು, 'ನೀನು ಕೇಳಿದ್ದು ಉದ್ದನೆಯ ಕತ್ತು, ಎತ್ತರದ ನೀಳ ಕಾಲುಗಳು. ಅವುಗಳನ್ನು ಅನುಗ್ರಹಿಸಿದ್ದೇನೆ.' 'ಅಯ್ಯೋ ಬೇಡ, ನನಗೆ ಮೊದಲಿನ ರೂಪವೇ ಸಾಕು. ಅದನ್ನೇ ದಯಪಾಲಿಸು' ಕುದುರೆ ಕೇಳಿಕೊಂಡಿತು. 'ಅತಿ ಆಸೆ ಮಾಡಬಾರದು. ದೇವರು ನಮಗೆ ಎಷ್ಟು ಕೊಟ್ಟಿರುತ್ತಾನೆಯೋ ಅಷ್ಟರಲ್ಲೇ ತೃಪ್ತಿಪಟ್ಟುಕೊಳ್ಳಬೇಕು' ಎಂದು ಬುದ್ಧಿಮಾತು ಹೇಳಿದ ಸೌಂದರ್ಯ ದೇವತೆ, ಕುದುರೆಗೆ ಹಳೆ ರೂಪ ನೀಡಿತು. <

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.