ಬೈಟುಕಾಫಿ

ನುಲಿ ನಲಿ

Published On :

ನಾಲಿಗೆ ನುಲಿ
ಮಲೆಗಳ ಮೇಲಿನ ಮರಗಳ ಮೆಳೆಗಳ ಮೂಲೆಮೂಲೆಗಳಲ್ಲಿ ಮತ್ತೆ ಮತ್ತೆ ಮಳೆ ಮೆರೆದಾಗ, ಮುಂಜಾವಿನಿಂದ ಮುಂದಿನ ಮುಂಜಾವಿನವರೆಗೆ ಮೆಳೆಗಳ ಮರಮರದಲ್ಲೂ ಮಳೆಯ ಮರ್ಮರದ ಮಧುರ ಮಂಜರಿ.

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಈ ವ್ಯಕ್ತಿಗೆ ನೀರಮೇಲೆ ನಾವೆಯಲ್ಲಿ
ವಿಹರಿಸುವುದೇ ಸ್ವರ್ಗ            -
ಇದು ನೇರವಾಗಿಲ್ಲ ವಕ್ರ, ಅಸಹಜ, ತಿರುಚಿದ್ದು.    -
ತೆಂಗಿನಕಾಯಿಯನ್ನು ಸಂಪೂರ್ಣವಾಗಿ
ಹೆರೆದರೆ ಕೈಗೆ ಸಿಗುವ ಚಿಪ್ಪು        -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಉಪವಾಸ ಮಾಡುವ ಹನ್ನೊಂದನೆಯ ದಿನದ ವ್ರತ-
ಕಾಡಿನಲ್ಲಿರುವ ಬೆಟ್ಟದಲ್ಲಿ ಮಳೆ ಸ್ವಲ್ಪವೇ ಮಂದ    -
ಈ ನರಿ ಪಂಚತಂತ್ರದಲ್ಲಿ ಬರುವ ಕರಟಕನ
ಸಹೋದರ                -
ಈ ವಿಗ್ರಹ ಕಲ್ಲಿನದು ಎಂದು ಹೇಳಲು
ಒಂದೇ ಒಂದು ಪದ            -     
ಗತಪ್ರತ್ಯಾಗತ
ಆ ಬುದ್ಧಿವಂತ ಎದುರಾಳಿ ಮಾಡಿದ ವಾದ, ಎಷ್ಟು ಸರಿ, ಸಮರ್ಪಕ, ಸಮಂಜಸ ಎಂದು ಗುಣಗ್ರಾಹಿ ಹಿರಿಯರು ಹೇಳಿದ್ದು ಒಂದೇ ಪದದಲ್ಲಿ-
'ಹದವಾದವಾದಹ!'
ನಿನ್ನೆಯ ಉತ್ತರಗಳು
3 ಅಕ್ಷರ:  ಕದನ, ದಡಿಯ, ನಯನ.
4 ಅಕ್ಷರ:  ಕಮಲೇಶ, ಮಹಾವಾಕ್ಯ, ಲೇವಾದೇವಿ, ಶಕ್ಯವಿಲ್ಲ.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.