ಸೃಷ್ಟಿ ವಿಶ್ವ ನೃತ್ಯ ಸಪ್ತಾಹ
ನೃತ್ಯ ಕಲಾವಿದರಿಗೊಂದು ಅಪೂರ್ವ ಅವಕಾಶ. ಸೃಷ್ಟಿ ವಿಶ್ವ ನೃತ್ಯ ಸಪ್ತಾಹ-2013, ಏಪ್ರಿಲ್ 29, 2013ರಿಂದ ಮೇ 5, 2013ರವರೆಗೆ ಏಳು ದಿನಗಳ ಕಾಲ ನಡೆಯಲಿದೆ. ಶಾಸ್ತ್ರೀಯ ನೃತ್ಯಗಳಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ರಂಗಪ್ರವೇಶ ಮಾಡಿರುವ ನೃತ್ಯ ಕಲಾವಿದರು ಮಾತ್ರ ಸೃಷ್ಟಿ ವಿಶ್ವ ನೃತ್ಯ ಸಪ್ತಾಹದಲ್ಲಿ ಪ್ರದರ್ಶನ ನೀಡಲು ಅರ್ಹರಾಗಿರುತ್ತಾರೆ. ಆದ್ದರಿಂದ ಆಸಕ್ತ, ಅರ್ಹ ಅಭ್ಯರ್ಥಿಗಳು, ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ, ನಂ. 77/11, 5ನೇ ಅಡ್ಡರಸ್ತೆ, ಹನುಮಂತನಗರ, ಬೆಂಗಳೂರು-19, ಈ ವಿಳಾಸಕ್ಕೆ ಅಥವಾ ಇ-ಮೇಲ್: dancetherapyindia@gmail.com ಮೂಲಕವೂ ಅರ್ಜಿ ಸಲ್ಲಿಸಬಹುದು.
ಚಿತ್ರಕಥಾ ತರಬೇತಿ
ಕರ್ನಾಟಕ ಚಲನಚಿತ್ರ ಅಕಾಡೆಮಿಯು 3ನೇ ಚಲನಚಿತ್ರ ಚಿತ್ರಕಥಾ ತರಬೇತಿಯನ್ನು 2013ರ ಮಾರ್ಚ್ ಎರಡನೇ ವಾರದಿಂದ ಪ್ರಾರಂಭಿಸಲಿದೆ. 4 ತಿಂಗಳ ಕಾಲ ಒಟ್ಟು 100 ಗಂಟೆಗಳ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ.
ಶಿಬಿರದಲ್ಲಿ ಖ್ಯಾತ ನಿರ್ದೇಶಕರು, ಚಿತ್ರಕಥಾ ಲೇಖಕರು, ತಂತ್ರಜ್ಞರು ಭಾಗವಹಿಸುವರು. ಚಲನಚಿತ್ರ ಮಾಧ್ಯಮ-ವ್ಯಾಕರಣ, ಛಾಯಾಗ್ರಹಣ, ಸಂಕಲನ ಮತ್ತು ಅವು ಚಿತ್ರಕಥೆ ರಚನೆಯ ಮೇಲೆ ಬೀರುವ ಪ್ರಭಾವಗಳು ಮುಂತಾದ ವಿಷಯಗಳು ತರಬೇತಿಯಲ್ಲಿ ಒಳಗೊಂಡಿವೆ. ಜೊತೆಗೆ ಚಲನಚಿತ್ರ ಉದ್ದಿಮೆ ರೂಪುರೇಷೆ, ವ್ಯವಹಾರದ ಸ್ವರೂಪ, ನಿಯಮಾವಳಿ, ಕಾನೂನು ಪರಿಚಯಗಳೂ ತರಬೇತಿ ಅಂಗಗಳಾಗಿರುತ್ತವೆ. ತರಬೇತಿ ಬೆಂಗಳೂರು ಜೆ.ಸಿ. ರಸ್ತೆಯ ಬಾದಾಮಿ ಹೌಸ್ ಕಟ್ಟಡದಲ್ಲಿ ನಡೆಯುತ್ತದೆ. ಅರ್ಜಿ ಸಲ್ಲಿಸಲು ಕೊನೆ ದಿನ 23.02.2013, ಹೆಚ್ಚಿನ ವಿವರಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಿಂದ ಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

