ವಿವಿಧೋಪಯೋಗಿ ಒಣಶುಂಠಿ
ಶುಂಠಿ ಆಹಾರಕ್ಕೆ ವಿಶಿಷ್ಟ, ಮಧುರ ಸುವಾಸನೆಯನ್ನು ಕೊಡುತ್ತದೆ. ರುಚಿ ಸ್ವಲ್ಪ ತೀಕ್ಷ್ಣವಾಗಿದ್ದರೂ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಾಂಬಾರ ಪದಾರ್ಥ. ಶುಂಠಿಯಲ್ಲಿರುವ ಜಿಂಜರಾಲ್, ಫೀನಾಲ್ ಮುಂತಾದ ಸಂಯುಕ್ತಗಳಿಂದ ಈ ಖಾರ ಉಂಟಾಗುತ್ತದೆ.
ಈಗ ಮಾರುಕಟ್ಟೆಗಳಲ್ಲಿ ಸಿಗುವ ತಿಂಡಿಗಳಲ್ಲಿ ಸಾಮಾನ್ಯವಾಗಿ ಬೇಕರಿ ಐಟಮ್ಗಳಲ್ಲಿ ಒಣಶುಂಠಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಜಿಂಜರ್ ಬ್ರೆಡ್, ಜಿಂಜರ್ ಉಪ್ಪಿನಕಾಯಿ, ಜಿಂಜರ್ ಪಾಪಡ್, ಜಿಂಜರ್ ಜಾಮ್ ಅಲ್ಲದೇ ಬಹುತೇಕ ಪಾನೀಯಗಳಲ್ಲಿ ಒಣ ಶುಂಠಿ ಬಳಕೆ ಮಾಡುತ್ತಾರೆ. ಮಜ್ಜಿಗೆಗೆ ಒಣಶುಂಠಿ ಪುಡಿ ಹಾಕಿ ಕುಡಿದರೆ ಅಜೀರ್ಣ ನಿವಾರಣೆ ನಿಶ್ಚಿತ. ಜಿಂಜರ್ ಫ್ಲೇವರ್ ಚಹಾಪುಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಜಿಂಜರ್ ಬಿಸ್ಕಿಟ್ ಕೂಡ ಸಿಗುತ್ತಿದೆ. ಶುಂಠಿ ಪೆಪ್ಪರಮಿಂಟ್ ಮಕ್ಕಳಿಗಂತೂ ಚಿರಪರಿಚಿತ.
ಭಾರತೀಯರ ಅಡುಗೆಯಲ್ಲಿ ಅದರಲ್ಲೂ ಚಿತ್ರಾನ್ನದ ಒಗ್ಗರಣೆಗೆ ಶುಂಠಿ ಇರಲೇಬೇಕು. ದಕ್ಷಿಣ ಭಾರತೀಯರು ಶುಂಠಿಯಿಂದ ತಂಬುಳಿ ತಯಾರಿಸುತ್ತಾರೆ. ಇಡ್ಲಿ ಹಾಗೂ ದೋಸೆಗೆ ಕಾಂಬಿನೇಷನ್ ಶುಂಠಿ ಚಟ್ನಿ. ಮಲೆನಾಡಿನ ಭಾಗಗಳಲ್ಲಿ ಮಳೆಗಾಲದಲ್ಲಿ ಶುಂಠಿ ಸಾರು ಇರಲೇಬೇಕು.
ಇನ್ನು ಶುಂಠಿ ಮೊರಬ್ಬ, ಮಿಠಾಯಿ ತಯಾರಿಕೆಯಲ್ಲಿ ಶುಂಠಿ ಬಳಸುತ್ತಾರೆ. ಇದಕ್ಕೆ ಬೇಡಿಕೆ ಕೂಡ ಹೆಚ್ಚು.
ಹೊರದೇಶಗಳಲ್ಲಿ ಹಾಟ್ಡ್ರಿಂಕ್ಸ್ಗೆ ಶುಂಠಿ ಬೆರೆಸುತ್ತಾರೆ. ಉದಾಹರಣೆಗೆ ಜಿಂಜರ್ ಬ್ರಾಂಡಿ, ಜಿಂಜರ್ ವೈನ್, ಜಿಂಜರ್ ಬೀರ್, ಜಿಂಜರ್ ಏಲ್ ಮೊದಲಾದ ಮದ್ಯಪಾನೀಯಗಳನ್ನು ತಯಾರಿಸುತ್ತಾರೆ.
ಆಯುರ್ವೇದ ವೈದ್ಯದಲ್ಲಿ ಶುಂಠಿಗೆ ವಾತಹರ ಮತ್ತು ಉತ್ತೇಜಕ ಗುಣಗಳಿವೆ ಎಂದು ಹೇಳಿದೆ. ಆದುದರಿಂದ ಇದನ್ನು ಅಜೀರ್ಣವ್ಯಾಧಿ, ವಾತದ ಹೊಟ್ಟೆಶೂಲೆಗೆ ಔಷಧವಾಗಿ ಕೊಡುತ್ತಾರೆ. ಹಲವು ಶಕ್ತಿದಾಯಕ ಮತ್ತು ಉತ್ತೇಜಕ ಔಷಧಗಳ ಜೊತೆ ಇದನ್ನು ಸೇರಿಸಲಾಗುತ್ತದೆ ಶುಂಠಿ ಯನ್ನು ನೀರಿನಲ್ಲಿ ತೇಯ್ದು ಹಣೆಗೆ ಹಚ್ಚುವುದರಿಂದ ತಲೆನೋವಿನಿಂದ ಉಪಶಮನ ಹೊಂದಬಹುದು. ಅರ್ಕಗಳಲ್ಲಿ ಶುಂಠಿಯನ್ನು ಉಪಯೋಗಿಸುತ್ತಾರೆ ಇದಕ್ಕೆ ಕಾಮೋತ್ತೇಜಕ ಗುಣವೂ ಇದೆಯೆಂಬ ನಂಬಿಕೆ.
ಪಶುಗಳ ಹೆಚ್ಚಿನ ಚಿಕಿತ್ಸೆಯಲ್ಲಿ ಶುಂಠಿಯನ್ನು ಬಳಸುತ್ತಾರೆ. ಪಶುಗಳಿಗೆ ಸಾಮಾನ್ಯವಾಗಿ ಮಳೆಗಾಲ ದಲ್ಲಿ ಬರುವ ಗಂಟಲು ಬೇನೆಯಲ್ಲಿ ಶುಂಠಿಯಿಂದ ಮಾಡಿದ ಲೇಹ್ಯವನ್ನು ಉಪಯೋಗಿಸುತ್ತಾರೆ.
ಕೆಲವು ಸುಗಂಧ ದ್ರವ್ಯಗಳಲ್ಲೂ ಶುಂಠಿ ತೈಲವನ್ನು ಉಪಯೋಗಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

