ಕಾರ್ಯನಿರತರಿಗೆ ಕಿವಿಮಾತು
ಆದರ್ಶವನ್ನು ಧರಿಸಿ ಸತ್ಯಶೀಲರಾಗಿ ಸೇವೆಗಾಗಿ ನಮ್ಮ ಬದುಕನ್ನು ಸವೆಸಲು ಮುಂದಾದಾಗ ಎಲ್ಲವೂ ಒಳ್ಳೆಯದೇ ಆಗುತ್ತದೆ. ಏಕೆಂದರೆ ನಾನು ತ್ಯಾಗಪೂರ್ಣವಾದ ಸತ್ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಭಾವಿಸುವುದು ಸಹಜ. ಆದರೆ ಸಮಾಜದಲ್ಲಿ ಸಾತ್ವಿಕ, ರಜೋ, ತಮೋಗುಣಗಳ ಸಮ್ಮಿಶ್ರಣವನ್ನು ವಾಸ್ತವ ದೃಷ್ಟಿಯಿಂದ ಗ್ರಹಿಸಬೇಕಾದುದು ಅಗತ್ಯ. ಹಾಗಾಗಿ ನಾನು ಸತ್ಕಾರ್ಯಕ್ಕೆ ತೊಡಗಿದಾಗ ಕೆಡುಕು, ದೋಷ, ಮೋಸ, ಮತ್ಸರ, ಆತಂಕಗಳು ಎದುರಾಗುತ್ತವೆ. ಆಗ ಹಿಡಿದ ಕಾರ್ಯಗಳನ್ನು ಮುನ್ನಡೆಸಲು ಗುರೂಜಿಯ ಸಲಹೆ ಆಲಿಸಿ.
'ಹೆದರದಿರಿ, ನಿಮ್ಮಿಂದ ಮಹತ್ಕಾರ್ಯಗಳು ಸಾಧ್ಯವಾಗಲಿವೆ, ಧೈರ್ಯತಾಳಿ. ಕಾರ್ಯನಿರತರಾಗಿ, ಭಗವಂತನೇ ನಿಮ್ಮ ಹಿಂದಿದ್ದಾನೆ. ಮಹಾಶಕ್ತಿಯೇ ನಿಮ್ಮೊಡನಿದ್ದಾಳೆ. ಧೈರ್ಯವಾಗಿ ಮುಂದೆ ಸಾಗಿ. ಯಶಸ್ಸು ಬೇಗ ಬರುವುದೆಂದು ನಿರೀಕ್ಷಿಸಬೇಡಿ. ಯಾವಾಗಲೂ ಶ್ರೇಷ್ಠವಾದುದನ್ನೇ ಅವಲಂಬಿಸಿ, ನಿಶ್ಚಲವಾಗಿರಿ, ಅಸೂಯೆ, ಸ್ವಾರ್ಥವನ್ನು ದೂರವಿಡಿ. ಸತ್ಯದ ಮಾನವತೆಯ, ನಿನ್ನ ರಾಷ್ಟ್ರದ ಸಲುವಾಗಿ ಕಾರ್ಯಕ್ಕೆ ಎಂದೆಂದಿಗೂ ವಿಧೇಯರಾಗಿ, ನಿಷ್ಠಾವಂತರಾಗಿರಿ. ಇಡೀ ಜಗತ್ತನ್ನೇ ಅಲುಗಾಡಿಸಬಲ್ಲಿರಿ. ಶಕ್ತಿಯ ರಹಸ್ಯವೆಂದರೆ ವ್ಯಕ್ತಿಯ ಶೀಲ ಮತ್ತು ಜೀವನ.'
'ನಿಮ್ಮ ಅಹಂಕಾರ ಬೆಳೆಯಲು ಅವಕಾಶ ಕೊಟ್ಟರೆ ಅದು ಶೋಚನೀಯ. ನಿಯಮಗಳಿಂದ ಬಂಧಿತರಾಗುವುದೇನೋ ಕೆಟ್ಟದ್ದೇ. ಆದರೆ ಇನ್ನೂ ಅಪ್ರಬುದ್ಧ ಸ್ಥಿತಿಯಲ್ಲಿರುವವರಿಗೆ ನಿಯಮ, ಕಟ್ಟಳೆಗಳ ಅವಶ್ಯಕತೆಯಿದೆ. ನೀನು ನಿನ್ನ ಕಾಲುಗಳ ಮೇಲೆ ನಿಲ್ಲಬೇಕೇ ಹೊರತು ಇನ್ನಾರ ರೆಕ್ಕೆಗಳ ಕೆಳಗೂ ಅಲ್ಲ.'
= ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

