ಬೈಟುಕಾಫಿ

ಸಾರ್ಥಕ ಜೀವನದ ಸನ್ಮಾರ್ಗ...

Published On :

ಸಂಪಾದನೆ ಜೀವನದ ಗುರಿಯಾದರೆ ಸೇವೆ ಸಾರ್ಥಕತೆಯ ಮೂಲ. ತ್ಯಾಗದಿಂದ ಕೂಡಿದ ಸೇವೆ ಸಂಪಾದನೆಗೆ ಮೌಲ್ಯವನ್ನು ತಂದು ಜೀವನದ ಉನ್ನತಿಗೆ ಕಾರಣವಾಗುತ್ತದೆ. ವೈಯಕ್ತಿಕ ಆಸೆ, ಹೆಸರು, ಕೀರ್ತಿಗಳಿಗೆ ಕಟ್ಟುಬಿದ್ದು ಸಮಷ್ಟಿಹಿತವನ್ನು ಕಡೆಗಣಿಸಿದಾಗ ಸಾರ್ಥಕ ಬದುಕು ನಮ್ಮಿಂದ ದೂರ ಸರಿಯುತ್ತದೆ. ಸತ್ಯನಿಷ್ಠರಾಗಿ ನಮ್ಮ ನಡೆ-ನುಡಿಗಳನ್ನು ರೂಢಿಸಿಕೊಂಡು ಆತ್ಮತೃಪ್ತಿಯ ಕಾರ್ಯಗಳನ್ನು ಕೈಗೊಳ್ಳುವುದರಿಂದ ನಾವು ಭಗವಂತನಿಗೆ ಹತ್ತಿರವಾಗುತ್ತೇವೆ. ಸ್ವಾರ್ಥವೇ ಸಾರ್ಥಕ ಜೀವನಕ್ಕೆ ಪ್ರಬಲ ಅಡ್ಡಿ. ನಮ್ಮ ಆಂತರ್ಯವನ್ನು ಮೊದಲು ತಿಳಿಗೊಳಿಸಿಕೊಂಡು ಸಾತ್ವಿಕಭಾವಗಳು ಬೆಳೆಯುತ್ತಾ ಸ್ವಾರ್ಥವು ತಂತಾನೇ ಜಾರಿಹೋಗುತ್ತದೆ. ಆಗ ಸಾರ್ಥಕ ಬದುಕು ಸದ್ಭಾವಗಳೊಂದಿಗೆ ಒಡಮೂಡುತ್ತದೆ.
'ಶ್ರೀ ರಾಮಕೃಷ್ಣರು ಜಗತ್ತಿನ ಒಳಿತಿಗಾಗಿ ಬಂದರೇ ಹೊರತು ಹೆಸರು, ಕೀರ್ತಿಗಾಗಿ ಅಲ್ಲ. ಅವರು ಏನನ್ನು ಬೋಧಿಸಲು ಬಂದರೋ ಅದನ್ನು ಮಾತ್ರ ಪ್ರಸಾರ ಮಾಡಿ. ಪ್ರತಿಯೊಬ್ಬರೂ ಗುರುವನ್ನು ಸ್ವೀಕರಿಸಲೇಬೇಕೆಂದು ಹಠಹಿಡಿದರೆ, ನೀವು ಒಂದು ಮತವನ್ನು ಹುಟ್ಟುಹಾಕುತ್ತೀರಿ. ಆಗ ಎಲ್ಲವೂ ಕುಸಿದುಬೀಳುತ್ತದೆ. ನಿಮ್ಮ ನಂಬಿಕೆಗೆ ಬದ್ಧರಾಗಿರಿ. ಮೊದಲು ನಿಮ್ಮಲ್ಲಿ ನೀವು ನಂಬಿಕೆಯಿಡಿ. ಇದೇ ಸಾರ್ಥಕ ಜೀವನದ ಸನ್ಮಾರ್ಗ. ಕರ್ತವ್ಯವೆಂಬುದು ಮಾನವತೆಯ ಜೀವಾಳವನ್ನೇ ದಹಿಸುತ್ತಿರುವ ನಡುನೆತ್ತಿಯ ಸೂರ್ಯನ ಉಗ್ರ ಕಿರಣಗಳಿದ್ದಂತೆ. ಅದು ಒಂದು ಕಾಲದಲ್ಲಿ ಒಂದು ಶಿಸ್ತಾಗಿ ಮಾತ್ರ ಅವಶ್ಯಕ; ಅದರಿಂದಾಚೆಗೆ ಅದೊಂದು ಕೆಟ್ಟರೋಗ.'
= ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.