ಬೈಟುಕಾಫಿ

ಏ ನಿಲ್ಲು!

Published On :

ಅವನಿಗೆ ಅವಳನ್ನು ಕಂಡರೆ ಇಷ್ಟ. ಅವಳಿಗೂ ಅವನ ಮೇಲೆ ಅದೇ. ಆದರೆ ಇಬ್ಬರೂ ಬಾಯಿ ಬಿಟ್ಟಿರಲಿಲ್ಲ. ಗಂಡಸಾದ ಅವನೇ ಮೊದಲಿಡಲಿ ಎಂದು ಅವಳು, ಆದರೆ ಆತ ಆ ಸಮಯಕ್ಕೆ ಕಾಯುತ್ತಲೇ ಕಾಲ ಕಳೆದ. ಅವಳ ಮನೆಯಲ್ಲಿ ಮದುವೆಯ ಏರ್ಪಾಡೂ ಆಯಿತು. ಅವನನ್ನು ನಂಬಿ ಪ್ರಯೋಜನವಿಲ್ಲವೆಂದು ಒಪ್ಪಿಗೆ ಸೂಚಿಸಿದ್ದಳು. ಮುಹೂರ್ತ ಕಟ್ಟಿದ್ದೂ ಆಯಿತು. ಆತ ಮದುವೆಗೆ ಹಿಂದಿನ ದಿನವೇ ಹಾಜರಾದ. ಅವನಿಗೂ ಆಹ್ವಾನವಿದ್ದದ್ದರಿಂದ ಅವಳು ಹೆಚ್ಚು ಮಹತ್ವವೇನೂ ಕೊಡಲಿಲ್ಲ. ಆದರೆ ಅವನು ಉದ್ವೇಗಕ್ಕೊಳಗಾಗಿದ್ದ. ಅಕಸ್ಮಾತ್ ಒಂಟಿಯಾಗಿದ್ದಾಗ ಅವಳ ಹಿಂದೆ ಬಿದ್ದ. ಮೆಲ್ಲಗೆ ಅವಳಿಗೆ ಮಾತ್ರ ಕೇಳಿಸುವಂತೆ ಹೇಳಿದ- 'ಓಡಿ ಹೋಗೋಣವಾ?' ಹಿಂದೆಯೇ ಬಂದ 'ಫಟಾರ್‌' ಎಂಬ ಶಬ್ದ. ಆತ ನಡುಗಿಹೋದ. ಶರೀರದ ರಕ್ತವೆಲ್ಲ ಕೆನ್ನೆಗೆ ಇಳಿದಿತ್ತು. ಅವಳ ನಾಲ್ಕು ಬೆರಳುಗಳ ಮುದ್ರಣಕ್ಕಾಗಿ!! ಅವಮಾನದಿಂದ ಓಡಲುಪಕ್ರಮಿಸಿದ. 'ಏಯ್ ನಿಲ್ಲು!' ಜೋರಾಗಿ ಕಿರುಚಿದಳು 'ಇಷ್ಟು ದಿನ ಏನ್ ಕತ್ತೆ ಕಾಯ್ತಾ ಇದ್ಯಾ? ಬೆಳಗ್ಗೆ 4.45ಕ್ಕೆ ರೈಲು....'
- ಶ್ರೀನಿವಾಸನ್

ಬಡತನ ನಿವಾರಣೆ
ತನ್ನ ಕ್ಷೇತ್ರದ ಜನರ ಬಡತನ ನಿವಾರಣೆಯೇ ತಮ್ಮ ಗುರಿಯೆಂದು ಬಡ ಕುಟುಂಬದಿಂದ ಅಧಿಕಾರಕ್ಕೆ ಬಂದಂತಹ ರಾಜಕಾರಣಿಯೊಬ್ಬರು ಕೊನೆಗೂ ತಮ್ಮ ಮಾತಿನಂತೆ ಬಡತನದ ನಿವಾರಣೆಯ ಕಾರ್ಯಕ್ರಮದಡಿಯಲ್ಲಿ ತಮ್ಮ ಕುಟುಂಬದ ಮತ್ತು ತಮ್ಮ ಬಂಧುಗಳ ಬಡತನವನ್ನು ಬುಡಸಹಿತ ಕೀಳುವಲ್ಲಿ ಯಶಸ್ವಿಯಾದರು. <
- ಇಫ್ಕೋ ಗೋವಿಂದರಾಜ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.