ನೀವು ತುಂಬಾ ಕುಳ್ಳಗಿದ್ದೀರಾ!?
ಕೆಲವರು ತುಂಬಾ ಎತ್ತರವಾಗಿರುತ್ತಾರೆ. ಕೆಲವರು ಅತಿ ಕುಳ್ಳರಾಗಿರುತ್ತಾರೆ. ಆದರೆ ಹೆಚ್ಚಿನ ಜನರು ಸಾಮಾನ್ಯ ಎತ್ತರದವರಾಗಿದ್ದರೆ, ಮತ್ತೆ ಕೆಲವರನ್ನು ನೋಡಿದರೆ ನಮಗೆ ನಗು ಬರುವಷ್ಟು ಕುಳ್ಳರಾಗಿರುತ್ತಾರೆ. ಆದರೆ ಒಬ್ಬ ಮನುಷ್ಯನ ಬೆಳವಣಿಗೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಅನುವಂಶಿಯ ಗುಣಗಳು ಒಂದು ಕಾರಣವಾದರೆ, ಗಿಡ್ಡತನಕ್ಕೆ ಮತ್ತೊಂದು ಕಾರಣವೇನೆಂದರೆ 'ಸರ್ಟಿಲೀಜ್' ಎಂಬ ರೋಗ.
ಸಾಮಾನ್ಯವಾಗಿ ಬಾಲ್ಯದಲ್ಲಿ ಮತ್ತು ತಾರುಣ್ಯದಲ್ಲಿ ಶರೀರದ ಎಲುಬು ಗೂಡಿನ ಎತ್ತರ ಹೆಚ್ಚುತ್ತದೆ. ಏಕೆಂದರೆ ಬೆಳೆಯುವ ಎಲುಬಿನ ತುದಿಯಲ್ಲಿ ಸರ್ಟಿಲೀಜ್, ಎಲುಬಾಗಿ ಪರಿವರ್ತನೆಗೊಳ್ಳುತ್ತದೆ. ಸರ್ಟಿಲೀಜ್‌ನ ಈ ರೋಗ ಕೈ ಕಾಲುಗಳು ಸಾಮಾನ್ಯ ರೀತಿಯಲ್ಲಿ ಬೆಳೆಯಲು ಆಡಚಣೆ ಉಂಟುಮಾಡುತ್ತದೆ. ಅಲ್ಲದೆ ಪಿಟ್ಯೂಯಿಟರಿ ಗ್ರಂಥಿಗಳು ಸಾಕಷ್ಟು ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡದಿದ್ದಾಗಲೂ ಗಿಡ್ಡತನ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ಪಿಟ್ಯೂಯಿಟರಿ ಗ್ರಂಥಿಗಳು ಕ್ರಿಯಾತ್ಮಕವಾಗಿರದಿದ್ದರೆ ದೇಹದ ಸಾಮಾನ್ಯ ಬೆಳವಣಿಗೆಗೆ ಕುಂದುಂಟಾಗುತ್ತದೆ. ಜೊತೆಗೆ ಎಡ್ರಿನಲ್, ಪಿಟ್ಯೂಯಿಟರಿ, ಥೈರಾಯಿಡ್ ಹಾಗೂ ಪುರುಷ ಮತ್ತು ಸ್ತ್ರೀ ಲೈಂಗಿಕ ಗ್ರಂಥಿಗಳ ದೋಷದಿಂದಲೂ ಕೂಡ ಕುಂಠಿತ ಬೆಳವಣಿಗೆ ಕಂಡುಬರುತ್ತದೆ.
= ಹರಳಹಳ್ಳಿ ಪುಟ್ಟರಾಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

