Mango ಮೋಡಿ!

ಕೆಮಿಕಲ್‌ಗಳು ಕೊಡುವ ತಾತ್ಕಾಲಿಕ ಹೊಳಪೇ ಇಂದಿನವರಿಗೆ 'ಸೌಂದರ್ಯ'. ಕಾಲಸರಿದಂತೆ ನಮ್ಮ ಮುಖ ಹಳೇ ಟಾರ್ ರೋಡ್‌ಗಿಂತ ಕಡೆ ಆದಾಗ ಗೊತ್ತಾಗುತ್ತದೆ, ಅದರ ಬಂಡವಾಳ ಏನೆಂದು! ಮುಖಕ್ಕೆ ಮೆರುಗು ತುಂಬಲು ಕೆಮಿಕಲ್ ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೇ ಎಂದು ಪ್ರಶ್ನೆಯೆತ್ತಿದ ಕೆಮಿಕಲ್ ಕನ್ಯೆಯರಿಗೆ ಕಳೆದ ಕೆಲವು ವರ್ಷಗಳಿಂದ 'ಆಯುರ್ವೇದಿಕ್ ಸೌಂದರ್ಯ ಚಿಕಿತ್ಸೆ' ಮೂಲಕ ಉತ್ತರ ಕೊಡುತ್ತಾ ಬಂದಿರೋದು ಬೆಂಗಳೂರಿನ ದಿಶಾ ಬ್ಯೂಟಿ ಪಾರ್ಲರ್.
ಆಯುರ್ವೇದಿಕ್ ವಿಧಾನಗಳ ಮೂಲಕ, ಯಾವುದೇ ಅಡ್ಡಪರಿಣಾಮಗಳಿಲ್ಲದೆ, ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದ ಬ್ಯೂಟಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಈ ಪಾರ್ಲರ್ ಈಗ 'ಮಾವಿನ ಸೌಂದರ್ಯ ಮೇಳ' ಆಯೋಜಿಸಿದೆ. ಏ.19ರಿಂದ 21ರ ವರೆಗೆ ಗಾಂಧಿಬಜಾರ್‌ನಲ್ಲಿರುವ ದಿಶಾ ಬ್ಯೂಟಿ ಪಾರ್ಲರ್‌ನಲ್ಲಿ ಮೇಳ ನಡೆಯಲಿದೆ.
ಏನು ವಿಶೇಷ?
ಇಲ್ಲಿ ಮಹಿಳೆಯರಿಗಷ್ಟೇ ಪ್ರವೇಶ. ಮೇಳದಲ್ಲಿ ಪಾಲ್ಗೊಳ್ಳುವವರು ಅನುಕೂಲಕ್ಕೆ ತಕ್ಕಂತೆ ಎಷ್ಟಾದರೂ ಮಾವಿನಹಣ್ಣುಗಳನ್ನು ತರಬೇಕು. ಹೀಗೆ ತಂದವರಿಗೆ ತಾಜಾ ಮಾವುಗಳಿಂದ ಫುಲ್ ಪೇಶಿಯಲ್ ಅನ್ನು ಉಚಿತವಾಗಿ ಮಾಡಲಾಗುತ್ತದೆ. ಮುಖಕ್ಕೆ ಮಾವಿನಹಣ್ಣಿನ ಹೊಳಪು ತಂದುಕೊಡುವುದು ಮೇಳದ ಉದ್ದೇಶ. ಶಿಬಿರಾರ್ಥಿಗಳು ತಂದ ಮಾವುಗಳನ್ನು ಫೇಶಿಯಲ್‌ಗೆ ಬಳಸುವುದಿಲ್ಲ. ಫೇಶಿಯಲ್‌ಗಾಗಿಯೇ ದಿಶಾ ಪಾರ್ಲರ್ ಉತ್ಕೃಷ್ಟ ಮಾವುಗಳನ್ನು ಬಳಸುತ್ತದೆ. 'ಶಿಬಿರಾರ್ಥಿಗಳ ಮಾವಿನಹಣ್ಣುಗಳನ್ನು ಸೌಂದರ್ಯ ಮೇಳದ ನಂತರ ನಡೆಯುವ ಮ್ಯಾಂಗೋ ಪಾರ್ಟಿಯಲ್ಲಿ ಅನಾಥಾಶ್ರಮಗಳಿಗೆ ನೀಡಲಾಗುತ್ತದೆ' ಎಂಬುದು ದಿಶಾ ಬ್ಯೂಟಿ ಪಾರ್ಲರ್‌ನ ವ್ಯವಸ್ಥಾಪಕಿ ದೀಪಾ ನಾಗೇಶ್ ಅವರ ಮಾತು. ಆಸಕ್ತ ಮಹಿಳೆಯರು ಹೆಸರು ನೋಂದಾಯಿಸಲು ಮೊ. 7411996915 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


