ಬೈಟುಕಾಫಿ

ಹುಲ್ಲುಗಾವಲಿನಲ್ಲಿ ಕಾಡುಗಪ್ಪೆ

Published On :

ತಮ್ಮ ಮನೆಯ ಮುಂದಿರುವ ಅಂಗಳದಲ್ಲಿ ಬೆಳೆದಿರುವ ಹುಲ್ಲನ್ನು ಕೊಯ್ಲುಯಂತ್ರದಿಂದ ಅಚ್ಚುಕಟ್ಟಾಗಿ ಕತ್ತರಿಸಿದರೆ ಹಣ ಕೊಡುವೆನೆಂದು ಒಬ್ಬ ತನ್ನ ಹನ್ನೆರಡು ವರ್ಷದ ಮಗಳಿಗೆ ಹೇಳಿದ. ಆ ಹುಡುಗಿ ತುಂಬು ಉತ್ಸಾಹದಿಂದ ಹುಲ್ಲನ್ನು ಕತ್ತರಿಸತೊಡಗಿದಳು. ಸಂಜೆಯಾಗುವುದರೊಳಗೆ ಇಡೀ ಹುಲ್ಲು ಮೈದಾನದ ಹುಲ್ಲನ್ನು ಆಕೆ ಸುಂದರವಾಗಿ ಕತ್ತರಿಸಿದ್ದಳು. ಆದರೆ ಒಂದು ಮೂಲೆಯ ಒಂದಿಷ್ಟು ಜಾಗದಲ್ಲಿದ್ದ ಹುಲ್ಲು ಮಾತ್ರ ಕತ್ತರಿಸಲಾಗದೆ ಹಾಗೆಯೇ ಉಳಿದಿತ್ತು.
ಅದನ್ನು ನೋಡಿದ ಅವಳ ತಂದೆ, ಇಡೀ ಹುಲ್ಲು ಮೈದಾನದ ಹುಲ್ಲನ್ನು ಆಕೆ ಕತ್ತರಿಸದಿದ್ದುದರಿಂದ ತಾನು ಹೇಳಿದಂತೆ ಆಕೆಗೆ ಹಣ ನೀಡುವುದಿಲ್ಲ ಎಂದು ಹೇಳಿದ. ಹುಡುಗಿಯಾದರೋ ಹಣವನ್ನಾದರೂ ಬಿಟ್ಟುಕೊಡಲು ಸಿದ್ಧಳಿದ್ದಳು. ಆದರೆ ಆ ಮೂಲೆಯ ಹುಲ್ಲನ್ನು ಕತ್ತರಿಸಲು ಸಿದ್ಧಳಿರಲಿಲ್ಲ. ಇದರಿಂದ ಚಕಿತನಾದ ಅವಳ ತಂದೆ, ಆಕೆ ಹುಲ್ಲು ಕತ್ತರಿಸದೆ ಬಿಟ್ಟ ಜಾಗವನ್ನು ಕುತೂಹಲದಿಂದ ನೋಡಿದ. ಆ ಜಾಗದ ಮಧ್ಯದಲ್ಲಿ ಒಂದು ದೊಡ್ಡ ಕಾಡುಗಪ್ಪೆ ಕುಳಿತಿತ್ತು. ಆ ಮೃದುಹೃದಯಿ ಹುಡುಗಿಗೆ ಕೊಯ್ಲುಯಂತ್ರವನ್ನು ಆ ಕಾಡುಗಪ್ಪೆಯ ಮೇಲೆ ಓಡಿಸಲು ಮನಸ್ಸಾಗಿರಲಿಲ್ಲ.
ನೀತಿ: ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಅವ್ಯವಸ್ಥೆ ಇರುತ್ತದೆ. ಪರಿಪೂರ್ಣವಾದ ಕ್ರಮಬದ್ಧತೆ ಜಗತ್ತನ್ನು ಮಸಣವಾಗಿಸುತ್ತದೆ.

-ನಂದಿನಿ ಡಿ. ಕಾಮತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.