ಲೋಕ ಸೇವೆಗೆ ಸಂಘಟಿತರಾಗಿ..
ಭಾರತ ಅನಂತ ಸಮಸ್ಯೆಗಳ ಆಗರವಾಗಲು ಪ್ರಮುಖ ಕಾರಣ ಭಾರತೀಯರು ಸಂಘಟಿತರಾಗಿ ಒಂದು ಧ್ಯೇಯ ಸಾಧನೆಯಲ್ಲಿ ತೊಡಗದಿರುವುದು. ವ್ಯಕ್ತಿ ಎಷ್ಟೇ ಶಕ್ತಿಶಾಲಿ ಎನಿಸಿದರೂ ಸಂಘಟಿತರಾಗದೇ ಯಶಸ್ವಿಯಾಗುವುದು ಸಾಧ್ಯವಿಲ್ಲ. ಸಾಕ್ಷಾತ್ ಸ್ವಾಮಿ ವಿವೇಕಾನಂದರು ತಮ್ಮ ಇಡೀ ಶಕ್ತಿಯನ್ನು ರಾಮಕೃಷ್ಣ ಮಿಷನ್ ಸಂಸ್ಥೆಯಲ್ಲಿ ಸಂಘಟಿಸಿ ಎಲ್ಲರನ್ನೂ ಲೋಕಸೇವೆಯ ಧ್ಯೇಯ ಸಾಧನೆಗೆ ತೊಡಗಿಸಿದ್ದು ಅವರ ಯಶಸ್ಸಿಗೆ ಕಾರಣವಾಯಿತು. ಹಾಗೆಯೇ ಭಾರತೀಯರು ಸ್ವಾರ್ಥ, ಪ್ರತಿಷ್ಠೆ, ದಾರಿದ್ರ್ಯಗಳನ್ನು ತೊಲಗಿಸಿ ತ್ಯಾಗ, ಸೇವೆ, ಶ್ರಮಗಳಲ್ಲಿ ಮನಮಾಡಿ ಕಾರ್ಯಪ್ರವೃತ್ತರಾಗಬೇಕು.
ಸಮಸ್ತ ಜಗತ್ತಿಗೇ ಬೆಳಕು ನೀಡಬಲ್ಲ ಸನಾತನ ಹಿಂದೂ ಧರ್ಮವು ತನ್ನೆಲ್ಲಾ ವೈಭವವನ್ನೂ ಕಳೆದುಕೊಂಡು ಘೋರಾಂಧಕಾರದಲ್ಲಿ ಮುಳುಗಿರುವುದು. ಇಂತಹ ರಾಷ್ಟ್ರವನ್ನು ಮೇಲೆತ್ತುವವರು ಯಾರು? ಇಂತಹ ಜನರನ್ನು ಎಚ್ಚರಿಸುವವರು ಯಾರು?
ನಿಮ್ಮಲ್ಲಿ ಒಬ್ಬೊಬ್ಬರೂ ಶಕ್ತಿ ಸಂಪನ್ನರು. ನೀವೀಗ ಜಗತ್ತಿಗೆ ಹೊಸ ಬೆಳಕನ್ನು ನೀಡುವ ಕಾಲ ಸನ್ನಿಹಿತವಾಗಿದೆ. ದೀನ-ದಲಿತ-ದುಃಖಿಗಳಲ್ಲಿ ನಾರಾಯಣನನ್ನು ಕಂಡು ಸೇವೆಗೈದು, ಇತರರಿಗೆ ಮಾರ್ಗದರ್ಶನ ನೀಡುವಂತಾಗಬೇಕು. ಜನರಲ್ಲಿ ಸೇವಾ ಸ್ಫೂರ್ತಿಯನ್ನು ತುಂಬಬೇಕು. ನಿಷ್ಠೆಯಿಂದ ಪ್ರೀತಿಪೂರ್ವಕ ಸೇವೆಯ ಮೂಲಕ ಭಾರತದ ಲಕ್ಷೋಪಲಕ್ಷ ಜನಸಾಮಾನ್ಯರನ್ನು ಮೇಲೆತ್ತಲು ಕಂಕಣಬದ್ಧರಾಗಿ ನೀವು ಸಮಸ್ತ ಜಗತ್ತಿಗೇ ಆಶ್ರಯ ನೀಡಬಲ್ಲ ಮಹಾವಟವೃಕ್ಷವಾಗಬೇಕು.
-ಆನಂದ ಎಸ್.ಎನ್.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

