ಬೈಟುಕಾಫಿ

ಪ್ರಥಮ ಮಾಹಿತಿ ವರದಿ

Published On :

(ಎಫ್‌ಐಆರ್-first information report)
ಯಾವುದೇ ರೀತಿಯ ಅಪರಾಧ ನಡೆದಾಗ ಪೊಲೀಸರು ದಾಖಲಿಸಿಕೊಳ್ಳುವ ದೂರನ್ನು ಪ್ರಥಮ ಮಾಹಿತಿ ವರದಿ ಎನ್ನಲಾಗುತ್ತದೆ.
ಘಟನೆ ನಡೆದ ಬಗ್ಗೆ ಹಾಗೂ ಅದರ ವಿವರಣೆಯನ್ನು ದೂರುದಾರರೇ ಬರೆದು, ಅದಕ್ಕೆ ಸಹಿ ಹಾಕಿಕೊಡಬೇಕು. ಒಂದು ವೇಳೆ ದೂರುದಾರರಿಗೆ ಬರೆಯಲು ಸಾಧ್ಯವಾಗದಿದ್ದಲ್ಲಿ ಮತ್ತೊಬ್ಬರಿಂದ ಬರೆಯಿಸಿ ಅಥವಾ ಟೈಪ್ ಮಾಡಿಸಿ ನಂತರ ಅದನ್ನು ಓದಿ, ತಾವು ಬರೆದದ್ದಾಗಿ ದೂರುದಾರರು ಸಹಿ ಹಾಕಬಹುದು. ಒಂದು ವೇಳೆ ನಿಮಗೆ ಯಾರೂ ಸಹಾಯ ಮಾಡದಿದ್ದರೆ ಪೊಲೀಸರೇ ಘಟನೆಯ ವಿವರ ಕೇಳಿ ದೂರು ಬರೆದು, ಓದುತ್ತಾರೆ. ಅದನ್ನು ಕೇಳಿ ಸರಿ ಇಲ್ಲದಿದ್ದರೆ ಸರಿ ಮಾಡಿಸಿ. ನೀವು ಅಕ್ಷರಸ್ಥರಾಗಿದ್ದಲ್ಲಿ ನೀವೇ ಓದಿ ನಂತರ ಸಹಿ ಹಾಕಿ. ದೂರಿನ ಅರ್ಜಿಯಲ್ಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ತಿಳಿಸಬೇಕು.
ಅಪರಾಧ ನಡೆದ ತಕ್ಷಣ ಅದೇ ದಿನ ದೂರು ನೀಡಬೇಕು. ತಡವಾಗಿ ನೀಡಬಾರದು. ಇದರಿಂದ ಸಾಕ್ಷಿಗಳು ನಾಶವಾಗುವ ಹಾಗೂ ಪ್ರಕರಣ ದುರ್ಬಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಆ ದಿನ ದೂರು ನೀಡಲು ಸಾಧ್ಯವಾಗದಿದ್ದರೆ, ಮಾರನೆ ದಿನ ದೂರು ನೀಡಬಹುದು. ಅದಕ್ಕೆ ಸೂಕ್ತ ಕಾರಣವನ್ನು ಸಹ ನೀಡಬೇಕಾಗುತ್ತದೆ.
ಅಪರಾಧವನ್ನು ಪ್ರತ್ಯಕ್ಷವಾಗಿ/ಮೊದಲು ನೋಡಿದವರು ದೂರುದಾರರಾಗುತ್ತಾರೆ. ಒಂದು ವೇಳೆ ದೂರು ನೀಡುವಾಗ ಪ್ರಮುಖ ಮಾಹಿತಿ ಹೇಳಲು ಆಗದಿದ್ದರೆ, ಅದನ್ನು ತನಿಖಾಧಿಕಾರಿಗೆ ತಿಳಿಸಬೇಕು. ಅಪರಾಧ ನಡೆದ ಸ್ಥಳ ಯಾವ ಠಾಣೆಗೆ ಒಳಪಡುತ್ತದೆಯೋ ಅದೇ ಠಾಣೆಗೆ ದೂರು ನೀಡಬೇಕು. ಸಾಧ್ಯವಾಗದಿದ್ದರೆ ಬೇರೆ ಠಾಣೆಯಲ್ಲೂ ಸಲ್ಲಿಸಬಹುದು. ಪೊಲೀಸರು ಅದನ್ನು ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡುತ್ತಾರೆ.
ಕೆಲವೊಮ್ಮೆ ನೀವು ಠಾಣೆಗೆ ಹೋಗಿ ದೂರು ನೀಡಲು ಸಾಧ್ಯವಾಗದಿದ್ದರೆ ದೂರವಾಣಿ ಮುಖಾಂತರ ಸಲ್ಲಿಸಬಹುದು. ಅದನ್ನು ಸಂಬಂಧಪಟ್ಟ ಠಾಣಾಧಿಕಾರಿ ಡೈರಿಯಲ್ಲಿ ನಮೂದಿಸಬೇಕು. ಆಗ ಅದನ್ನೂ ಸಹ ಎಫ್‌ಐಆರ್ ಎನ್ನಲಾಗುತ್ತದೆ.

-ಶಾಂತಾ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.