ಜೆರೆಮಿಯ ಮತ್ತು ಅಡಿಗಲ್ಲು
ಜೆರೆಮಿಯ ತುಂಬ ಉದ್ದದ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಪ್ರತಿದಿನ ರಾತ್ರಿ ಅವಳು ಕೆಲಸ ಮಾಡುವ ಸ್ಥಳದಿಂದ ಅವಳನ್ನು ಅವಳ ಮನೆಯ ತನಕ ಅವನು ಬಿಟ್ಟು ಬರುತ್ತಿದ್ದ. ಈ ಸಂದರ್ಭದಲ್ಲಿ ಅವಳನ್ನೊಮ್ಮೆ ಚುಂಬಿಸಲು ಅವನು ಆಸೆಪಡುತ್ತಿದ್ದ. ಒಂದು ದಿನ ರಾತ್ರಿ ಹೇಗೋ ಧೈರ್ಯ ಮಾಡಿ ಕೇಳಿಯೇಬಿಟ್ಟ- 'ನಿನ್ನನ್ನೊಮ್ಮೆ ಚುಂಬಿಸಲು ಬಿಡುವೆಯಾ?' ಆಕೆ ಒಪ್ಪಿದಳು. ಆದರೆ ಜೆರೆಮಿಯನಾದರೋ ತುಂಬ ಕುಳ್ಳನಾಗಿದ್ದ. ಆದುದರಿಂದ ಅವನು ಏರಿ ನಿಂತುಕೊಳ್ಳಲು ಏನಾದರೂ ಸಿಗುವುದೋ ಎಂದು ಅವರು ಸುತ್ತಮುತ್ತ ನೋಡಿದರು. ಅಲ್ಲಿ ಅವರಿಗೆ ಯಾರೋ ಕಮ್ಮಾರರು ಬಿಟ್ಟುಹೋಗಿದ್ದ ಕುಲುಮೆ ಮತ್ತು ಅಡಿಗಲ್ಲು ಕಾಣಿಸಿತು. ಆ ಅಡಿಗಲ್ಲಿನ ದಪ್ಪ, ಜೆರೆಮಿಯ ತನ್ನ ಪ್ರೇಯಸಿಯನ್ನು ಚುಂಬಿಸಲು ಅಗತ್ಯವಿದ್ದಷ್ಟೇ ಎತ್ತರವಾಗಿತ್ತು. ಜೆರೆಮಿಯ ಆ ಅಡಿಗಲ್ಲಿನ ಮೇಲೆ ನಿಂತು ತನ್ನ ಪ್ರೇಯಸಿಯನ್ನು ಚುಂಬಿಸಿದ. ಇದಾಗಿ ಸುಮಾರು ಅರ್ಧ ಮೈಲು ನಡೆದ ಮೇಲೆ ಜೆರೆಮಿಯ ಕೇಳಿದ- 'ನಾನು ನಿನ್ನನ್ನು ಇನ್ನೊಂದು ಸಲ ಚುಂಬಿಸಲೆ, ಪ್ರಿಯೆ?' 'ಬೇಡ'. ಆ ಹುಡುಗಿ ಹೇಳಿದಳು - 'ಇವತ್ತಿಗೆ ಒಂದು ಸಾಕು.' ಜೆರೆಮಿಯ ಹೇಳಿದ- 'ಹಾಗಾದರೆ ಈ ಹಾಳಾದ ಅಡಿಗಲ್ಲನ್ನು ನಾನು ಹೊತ್ತು ಬರುವುದನ್ನು ನೀನೇಕೆ ತಡೆಯಲಿಲ್ಲ?'
ನೀತಿ: ಪ್ರೀತಿ ಹೊರೆಯನ್ನು ಹೊರುತ್ತದೆ; ಆದರೆ ಅದಕ್ಕೆ ಭಾರವೆನಿಸುವುದಿಲ್ಲ! <
- ನಂದಿನಿ ಡಿ. ಕಾಮತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

