ಎರಡು ರೀತಿಯ ಅಪರಾಧ
ಪ್ರತಿನಿತ್ಯ ಅಪರಾಧ, ಅಪಘಾತಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಬೇಜವಾಬ್ದಾರಿತನದಿಂದ ಅಪರಾಧಗಳು ನಡೆಯುತ್ತವೆ. ಬೇರೆಯವರು ಆರೋಪಕ್ಕೆ ಗುರಿಯಾಗುತ್ತಾರೆ. ಅಂತಹ ಘಟನೆಗಳು ನಡೆದಾಗ ಜನರು ದೂರು ದಾಖಲಿಸುವುದು ಹೇಗೆ? ದೂರು ಎಂದರೇನು? ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ. ಆಗ ಏನು ಮಾಡಬೇಕು? ಎಲ್ಲಿಗೆ ದೂರು ನೀಡಬೇಕು?
ಅಪರಾಧ ಎಂದರೇನು? ಅಪರಾಧದಲ್ಲಿ ಎಷ್ಟು ವಿಧಗಳಿವೆ. ಅಪರಾಧ ಕೃತ್ಯಗಳು ನಡೆದಾಗ ಸಾಕ್ಷಿ ಸಂರಕ್ಷಿಸುವುದು ಹೇಗೆ? ಸಾಕ್ಷಿ ಒಂದು ಪ್ರಕರಣಕ್ಕೆ ಎಷ್ಟು ಮಹತ್ವದ್ದಾಗಿರುತ್ತದೆ? ಯಾವ ಸಮಯದಲ್ಲಿ ನ್ಯಾಯಲಯದಲ್ಲಿ ಹಾಜರಾಗಬೇಕು? ತನಿಖೆಗೆ ಯಾವ ರೀತಿ ಸಹಕರಿಸಬೇಕು?
ವಿಧಗಳು: ಸಂಜ್ಞೇಯವಾದ ಅಪರಾಧ (್ಛ್ಟ್ಜಟ್ಝಿಣಛಛಿಟಜ ್ಟಜಿಜಿಜಟ್ಛಿಜ- ಅತಿ ಗಂಭೀರವಾದ ಅಪರಾಧ) ಮತ್ತು ಸಂಜ್ಞೇಯವಲ್ಲದ (ಟ್ಟಿಟ್ಛ್ಟ್ಜಿಟ್ಝಿಣಛಛಿಟಜ ್ಟಜಿಜಿಜಟ್ಛಿಜ-ಅತಿಗಂಭೀರವಲ್ಲದ ಅಪರಾಧ) ಅಪರಾಧ. ಸಂಜ್ಞೇಯವಾದ ಅಪರಾಧ ಎಂದರೆ, ಕೊಲೆ, ಅತ್ಯಾಚಾರ, ದರೋಡೆ ಇತ್ಯಾದಿ. ಇಂತಹ ಅಪರಾಧಗಳಿದ್ದಾಗ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ವಾರೆಂಟ್ ಇಲ್ಲದೆ ಆತನನ್ನು ಬಂಧಿಸಿ, ತನಿಖೆ ಕೈಗೊಳ್ಳಬಹುದು. ಪೊಲೀಸರು ಮಾತ್ರವಲ್ಲ ಸಾರ್ವಜನಿಕರೂ ಆತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಬಹುದು.
ಸಂಜ್ಞೇಯವಲ್ಲದ ಅಪರಾಧ ಎಂದರೆ, ಚಿಕ್ಕ ಗಾಯವಾಗುವುದು, ಬೈಗುಳ, ಸಣ್ಣಪುಟ್ಟ ಅಪಘಾತಗಳು, ಭಯ ಉಂಟುಮಾಡುವಂತೆ ಪ್ರಚೋದನೆ ಮಾಡುವುದು, ಮಾನಹಾನಿ ಮಾಡುವುದು ಇತ್ಯಾದಿ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಮಾಹಿತಿಯನ್ನು ನಿರ್ದಿಷ್ಟ ಪುಟದಲ್ಲಿ ದಾಖಲಿಸಿ ನ್ಯಾಯಾಧೀಶರನ್ನು ಸಂಪರ್ಕಿಸಬೇಕು. ನ್ಯಾಯಾಲಯ ಆದೇಶ ನೀಡದ ಹೊರತು ಪೊಲೀಸರು ತನಿಖೆ ಆರಂಭಿಸುವಂತಿಲ್ಲ. ಆರೋಪಿಯು ತನ್ನ ಬಗ್ಗೆ ಮಾಹಿತಿ ನೀಡದ ಪಕ್ಷದಲ್ಲಿ ಅವನನ್ನು ಬಂಧಿಸಿ, ನಂತರ ಆತನಿಂದ ಮಾಹಿತಿ ಪಡೆದು ಮುಚ್ಚಳಿಕೆ ಪಡೆದು ಬಿಡಬಹುದು. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರಬಹುದು, ಕೆಲವೊಮ್ಮೆ ಗಂಭೀರವಾಗಿ ಪರಿಗಣಿಸಬಹುದು.
-ಶಾಂತಾ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

