ವಿಶ್ವಾತ್ಮಭಾವ ನಿಮ್ಮದಾಗಲಿ
ಸ್ವಾರ್ಥ ಪ್ರಪಂಚದಲ್ಲಿ ಬದುಕುತ್ತಾ, ಎಲ್ಲವನ್ನೂ ದಕ್ಕಿಸಿಕೊಳ್ಳುವ ಭರದಲ್ಲಿ ದುಃಖಕ್ಕೆ ಸಿಲುಕಿಕೊಂಡು ಸಂಕಟಪಡುತ್ತಾ ದೇವರ ಮೊರೆಹೋಗುವ ಜನರು ಇಂದ್ರಿಯ ಸುಖದ ದಾರಿಯನ್ನು ತೋರುವಂತೆ ಬೇಡುತ್ತಾರೆ. ಧರ್ಮ, ದೇವರುಗಳ ಂಸಕುಚಿತ ವ್ಯಾಪ್ತಿಯ ಮೌಢ್ಯ ಆಚರಣೆಗಳಲ್ಲಿ ಮುಳುಗುತ್ತಾರೆ. ಇಷ್ಟಾದರೂ ಆತ್ಮಸಂತೋಷ ಪಡೆಯದೆ ಕೊರಗುತ್ತಾರೆ. ಆದರೆ ಪ್ರಾಪಂಚಿಕ ಬದುಕಿನ ಪರಿಧಿಯೊಳಗೆ ಆಧ್ಯಾತ್ಮಿಕ ಜೀವನಶೈಲಿ ರೂಢಿಸಿಕೊಂಡು ಎಲ್ಲದರಲ್ಲೂ ಒಂದನ್ನೇ ಕಾಣುವ, ಒಂದರಲ್ಲೇ ಎಲ್ಲವನ್ನೂ ಕಾಣುವ ವಿಶ್ವಾತ್ಮಭಾವವನ್ನು ಬೆಳೆಸಿಕೊಂಡರೆ ಬದುಕು ಆನಂದಮಯವೆನಿಸುವುದು.
'ಹೇಗೆ ನ್ಯೂಟನ್ನನು ಗುರುತ್ವಾಕರ್ಷಣೆಯನ್ನು ಕಂಡುಹಿಡಿಯುವ ಮೊದಲೂ ಅದು ಇದ್ದೇ ಇತ್ತೋ, ಅದೇ ರೀತಿಯಲ್ಲಿ ವೇದಗಳಲ್ಲಿ ಹೇಳಲಾಗಿರುವ ಆಧ್ಯಾತ್ಮಿಕ ತತ್ತ್ವಗಳನ್ನು ಬರೆಯುವ ಮೊದಲೂ ಅವು ಇದ್ದವು. ಎಂದರೆ ಇವು ಅನಾದಿಯಿಂದಲೂ ಇದ್ದವು. ಮಾನವನೆಂದರೆ ಆತನ ದೇಹವಲ್ಲ, ಆತನೊಳಗಿರುವ ಆತ್ಮ 'ಸೃಷ್ಟಿ'ಸಿದ ಪ್ರತಿಯೊಂದು ವಸ್ತುವಿಗೂ ನಿವಾಶವಿರುವುದರಿಂದ ಈ ದೇಹವು ನಾಶವಾಗುತ್ತದೆ. ಆದರೆ ಆತ್ಮವು ನಾಶವಾಗಲು ಸಾಧ್ಯವಿಲ್ಲ. ಸಾವೆಂದರೆ ಶರೀರವನ್ನು ತ್ಯಜಿಸುವುದು ಅಷ್ಟೇ. ಆತ್ಮತತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ನಾನು, ನನ್ನದು ಎಂಬ ಅಹಂಕಾರವನ್ನು ತ್ಯಜಿಸಲೇಬೇಕು. ಸ್ವಾರ್ಥಬುದ್ಧಿಯ ಸುತ್ತ ನಾವು ಹೆಣೆದುಕೊಂಡಿರುವ ಸಂಕುಚಿತ ಅಹಂಕಾರವನ್ನು ಹೋಗಲಾಡಿಸಿಕೊಂಡಾಗ ಅನಂತತೆಯ ಅನುಭವವಾಗುತ್ತದೆ. ಇದೇ ವಿಶ್ವಾತ್ಮಭಾವ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

