ಬೈಟುಕಾಫಿ

ಶನಿಮಹಿಮೆ

ಶನಿಮಹಿಮೆ
Published On :

ಎಂಬತ್ತರ ದಶಕದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸೆಟ್ಟಿಸರ ಗ್ರಾಮದಲ್ಲಿ ಶನಿಕತೆ ಮೂಲಕ ಶನೀಶ್ವರನ ಆರಾಧನೆ ಆರಂಭಗೊಂಡಿತು. ಮುಂದೆ ಈ ಕಾರಣದಿಂದಲೇ ದೇವಸ್ಥಾನ ನಿರ್ಮಾಣವಾಗಿ, ಈಗ ಶನೀಶ್ವರ ಕ್ಷೇತ್ರವಾಗಿ ಬೆಳೆದು ಆಸ್ತಿಕರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ಕ್ಷೇತ್ರದಲ್ಲಿ ಯುಗಾದಿ ಹಬ್ಬದ ಮಾರನೇ ಶನಿವಾರ(ಏ.13) ವಾರ್ಷಿಕ ಜಾತ್ರೆ ಸಂಭ್ರಮ.

ಶನಿಕತೆಯಲ್ಲಿ ಶನಿಯ ಪ್ರವೇಶದ ಸಂದರ್ಭ ಪಾತ್ರಿ ಮೇಲೆ ದೇವರ ಆವಾಹನೆಯಾಗಿ ಭಕ್ತರ ಕಷ್ಟಗಳಿಗೆ ಪರಿಹಾರ ಸೂಚಿಸಲಾಗುತ್ತಿತ್ತು. ಮುಂದೆ ದೇವಸ್ಥಾನ ನಿರ್ಮಾಣದ ನಂತರ ಪ್ರತಿ ಶನಿವಾರ ಪಾತ್ರಿಯ ದರ್ಶನ ಆರಂಭಗೊಂಡಿತು.

ಕೆಲ ವರ್ಷಗಳ ನಂತರ ಭಕ್ತಳೊಬ್ಬಳಿಗೆ ಕಾಡಿನಲ್ಲಿ ಒಂದು ಲಿಂಗ ದೊರೆಯಿತು. ಅದನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳ ಸಲಹೆಯಂತೆ ಚಂದ್ರಮೌಳೇಶ್ವರ ಲಿಂಗದ ರೂಪದಲ್ಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ತ್ರಿಕಾಲ ಪೂಜೆ, ಅನ್ನದಾನಾದಿಗಳು ಪ್ರಾರಂಭಗೊಂಡಿತು. ಮುಂದೆ ಸಿದ್ಧಿವಿನಾಯಕ, ದುರ್ಗಾದೇವಿ, ಸುಬ್ರಹ್ಮಣ್ಯ, ನವಗ್ರಹ ಗುಡಿಗಳು ನಿರ್ಮಾಣವಾಗಿ ಒಂದು ಕ್ಷೇತ್ರವಾಗಿ ಬೆಳೆದುಬಂತು.

ಪ್ರವರ್ಧಮಾನಕ್ಕೆ ಬಂದ ಕ್ಷೇತ್ರಕ್ಕೆ ಬರುವ ಭಕ್ತರೂ ಜಾಸ್ತಿಯಾಗಿದ್ದಾರೆ. ಪ್ರತಿ ಶನಿವಾರದ ದರ್ಶನದಲ್ಲಿ ನೂರಾರು ಭಕ್ತರು ತಮ್ಮ ಕಷ್ಟ ನಿವೇದಿಸಿಕೊಂಡು ಪರಿಹಾರ ಕಂಡುಕೊಂಡ ಅನೇಕ ಉದಾಹರಣೆಗಳಿವೆ. ಕ್ಷೇತ್ರವಾಗಿ ಬೆಳೆದಿದ್ದರೂ ಈಗಲೂ ಭಕ್ತರ ಮನೆಗಳಿಗೆ ಹೋಗಿ ಇಡೀ ರಾತ್ರಿ ಶನಿಕತೆ ಪ್ರಸ್ತುತಪಡಿಸುವ ಸಂಪ್ರದಾಯ ಬಿಟ್ಟಿಲ್ಲ.  

ಪ್ರತಿವರ್ಷ ಯುಗಾದಿ ಹಬ್ಬದ ಮಾರನೇ ಶನಿವಾರ ಇಲ್ಲಿ ಜಾತ್ರೆ. ಈ ಸಂದರ್ಭ ಅನ್ನದಾನ, ವಿದ್ಯಾದಾನ, ವಸ್ತ್ರದಾನ, ಉಚಿತ ಸಾಮೂಹಿಕ ವಿವಾಹ ಅನೂಚಾನವಾಗಿ ನಡೆಯುತ್ತಿವೆ. ಜಾತ್ರೆಗೆ ಒಂದು ತಿಂಗಳು ಮೊದಲು ಶ್ರೀದೇವರ ಉತ್ಸವಮೂರ್ತಿಯ ಪಲ್ಲಕ್ಕಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿರುಗಿ ಧನ-ಧಾನ್ಯ ಸಂಗ್ರಹಿಸಿಕೊಂಡು ಬರುತ್ತದೆ.

ಹೋಗುವ ಬಗೆ
ಸಾಗರ ಪಟ್ಟಣದಿಂದ ವರದಹಳ್ಳಿ ಮಾರ್ಗದಲ್ಲಿ ಸುಮಾರು 6 ಕಿ.ಮೀ. ದೂರದ ಪ್ರಶಾಂತ ಪರಿಸರದಲ್ಲಿದೆ ಈ ಪುಟ್ಟ ಕ್ಷೇತ್ರ.

-ರಾಜೇಶ್ ಭಡ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.