ಆಧ್ಯಾತ್ಮಿಕ ಜೀವನ ವಿಧಾನ ರೂಢಿಸಿಕೊಳ್ಳಿ
ಸ್ವಾರ್ಥ ಪ್ರೇರಿತರಾಗಿ ಲೌಕಿಕ ಆಸೆಗಳಿಗೆ ದಾಸರಾಗಿ ಜೀವದ ಬಹುಸಮಯವನ್ನು ಕಲೆದುಕೊಂಡು ಕೊನೆಗಾಲದಲ್ಲಿ ಪರಿತಪಿಸುವುದರಿಂದ ಪ್ರಯೋಜನವಿಲ್ಲ. ಬುದ್ಧಿ ಬಲಿತಾಗಲೇ ದೃಢನಿರ್ಧಾರ ತೆಗೆದುಕೊಳ್ಳಿ. ನಮ್ಮ ಜೀವನಶೈಲಿ ಆಧ್ಯಾತ್ಮಿಕವಾಗಿರಬೇಕು, ಸಾರ್ಥಕತೆಯ ಸನ್ಮಾರ್ಗದಲ್ಲಿ ಸಾಗಬೇಕು, ಸಮಷ್ಟಿಹಿತ ಸಾಧನೆಗಾಗಿ ವ್ಯಕ್ತಗೊಳ್ಳಬೇಕು.
ನಿಜವಾದ ಆಧ್ಯಾತ್ಮಿಕ ಜೀವನದಿಂದ ಮಾತ್ರ ನಿನಗೆ ಶ್ರೇಯಸ್ಸು, ಶೀಲಬಲವನ್ನು ಕಾಪಾಡಿಕೊಳ್ಳುವುದರಲ್ಲೇ ನಿಜವಾದ ಆಧ್ಯಾತ್ಮಿಕತೆಯಿರುವುದು. ಎಲ್ಲ ಆಸೆಗಳನ್ನೂ, ಕಾಮಭಾವನೆಗಳನ್ನೂ ನಿರ್ಮೂಲನ ಮಾಡುವುದರಲ್ಲೇ ಆಧ್ಯಾತ್ಮಿಕತೆ ಇರುವುದು. ಮಂಕುಗೊಳಿಸುವ ಪವಾಡಗಳು ನಮ್ಮ ಜೀವನದ ಮಹತ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ನಿರರ್ಥಕವೋ ಅಂಥವುಗಳ ಹಿಂದೋಡುವುದೆಂದರೆ ಭಯಂಕರ ಶಕ್ತಿಹ್ರಾಸ. ಅವು ಮನುಷ್ಯನನ್ನು ಕಡುಸ್ವಾರ್ಥಿಯನ್ನಾಗಿಸಿ ಅಧಃಪತನದೆಡೆಗೆ ಎಳೆದೊಯ್ಯುತ್ತವೆ. ನಮಗೀಗ ಬೇಕಾಗಿರುವುದು ಪ್ರಬಲ ವಿವೇಕ ಪ್ರಜ್ಞೆ.
ಏಕಾಗ್ರ ಮನಸ್ಸಿನಿಂದ ಮಾಡುವ ಧ್ಯಾನವೇ ಆಧ್ಯಾತ್ಮಿಕ ಜೀವನದ ಕೀಲಿಕೈ. ಧರ್ಮವು ಕೇವಲ ನಂಬುವುದರಲ್ಲಿಲ್ಲ. ಆಗುವುದರಲ್ಲಿದೆ. ಅರ್ಥಾತ್ ಧರ್ಮವನ್ನು ಕೇವಲ ನಂಬಿದರೆ ಸಾಲದು ಧರ್ಮ ಸ್ವರೂಪಿಗಳೇ ಆಗಬೇಕು. ಆದ್ದರಿಂದ ನಮ್ಮ ಜೀವನವು ಹೊತ್ತಿ ಉರಿಯುವ ಆಧ್ಯತ್ಮಿಕ ಜ್ವಾಲೆಯಾಗಬೇಕು, ಆಧ್ಯಾತ್ಮಿಕತೆಯೇ ಪ್ರತಿಯೊಂದು ಕಾರ್ಯ ಯೋಜನೆಯ ತಳಹದಿಯಾಗಬೇಕು.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

