ಬೈಟುಕಾಫಿ

ಸ್ವಪ್ರಯತ್ನದಲ್ಲಿ ತೊಡಗಿ

Published On :

ಜೀವನ ಸಾವಿರ ಕನಸುಗಳ ಸರಮಾಲೆ. ಎಲ್ಲವನ್ನೂ ನನಸಾಗಿಸಬೇಕೆಂಬ ಆಸೆ ಮನಸ್ಸಿನೊಳಗಿದ್ದರೂ ಸ್ವಪ್ರಯತ್ನದಲ್ಲಿ ನಂಬಿಕೆ, ಮುನ್ನುಗ್ಗುವ ಅಚಲ ಧೈರ್ಯ, ಪರಿಸ್ಥಿತಿಗಳನ್ನು ಮೆಟ್ಟಿನಿಂತು ಗೆಲ್ಲುವ ವಿಶ್ವಾಸ ಇವು ಒಡಮೂಡಿದಾಗ ಆಸೆಯ ಬದುಕು ಸಾಕಾರಗೊಳ್ಳುತ್ತದೆ. ನಮ್ಮ ಬದುಕನ್ನು ಬೇರೆ ಯಾರೂ ಕಟ್ಟಿಕೊಡಲಾರರು, ನಾವೇ ಕಟ್ಟಿಕೊಳ್ಳಬೇಕು. ಅದಕ್ಕೆ ಸ್ವಪ್ರಯತ್ನವೇ ಮೊದಲ ಹೆಜ್ಜೆ. ಶಕ್ತಿವಂತರಾಗಿ, ಸತ್ಯಶೀಲರಾಗಿ ಮುನ್ನಡೆದಾಗ ಸಾಕ್ಷಾತ್ಕಾರವೂ ಸಾಧ್ಯ.
ಸತ್ಯ ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾದುದು ಸ್ವ ಪ್ರಯತ್ನ. ಯಾರು ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನೆ ಕುಳಿತಿರುತ್ತಾನೋ ಅವನ ಮೇಲೆ ಭಗವಂತ ಹೇಗೆ ಕೃಪೆ ಮಾಡಿಯಾನು? ಯಾರಲ್ಲಿ ಪೌರುಷವಿರುವುದಿಲ್ಲವೋ ಅವರಲ್ಲಿರುವುದು ಬರಿಯ ತಮಸ್ಸು ಮಾತ್ರ. ವೀರಾಧಿವೀರನಾದ ಅರ್ಜುನ ಈ ಪೌರುಷವನ್ನು ಕಲೆದುಕೊಂಡವನಂತೆ ಕಂಡುಬಂದುದರಿಂದಲೇ ಶ್ರೀಕೃಷ್ಣ ಅವನ ಸ್ವಭಾವಕ್ಕೆ ಅನುಗುಣವಾಗಿ ಜೀವನಕರ್ತವ್ಯಗಳನ್ನು ಅನುಸರಿಸುವಂತೆ ಅವನಿಗೆ ಆಜ್ಞಾಪಿಸಿದ್ದು. ಹೀಗೆ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ಮ ಮಾಡುವುದರ ಮೂಲಕ ಅವನು ಹೃದಯಶುದ್ಧಿ, ಕರ್ಮತ್ಯಾಗ ಹಾಗೂ ಶರಣಾಗತಿ ಎಂಬ ಸಾತ್ವಿಕ ಗುಣಗಳನ್ನು ಹೊಂದುವಂತಾಗಲಿ ಎಂಬುದೇ ಶ್ರೀಕೃಷ್ಣನ ಉದ್ದೇಶವಾಗಿತ್ತು.
ಮನುಷ್ಯನಿಗೆ ತೀವ್ರ ಹಂಬಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸ್ವಪ್ರಯತ್ನವೇ ಇದಕ್ಕೆ ಮೊದಲ ಮೆಟ್ಟಿಲು.

- ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.