ಬದುಕಿನ ಭೀಕರತೆಯಲ್ಲೂ ಭಗವಂತನನ್ನು ಕಾಣಿರಿ
ಜೀವನದಲ್ಲಿ ಕಷ್ಟ-ನಷ್ಟ, ಸಾವು-ನೋವು ಸಂಭವಿಸಿದಾಗ ದೇವರ ಮೇಲೆ ತುಂಬಾ ಕೋಪಗೊಳ್ಳುವ ಜನರನ್ನು ಕಾಣುತ್ತೇವೆ. ಅದು ಸಹಜವೇ. ಆದರೆ ಪ್ರಶಾಂತವಾದ ಪ್ರಕೃತಿಯು ಒಮ್ಮೊಮ್ಮೆ ವಿಕೋಪಗೊಂಡು ಬದುಕನ್ನು ಅಸ್ತವ್ಯಸ್ತಗೊಳಿಸುತ್ತದೆ. ಶಾಂತಮೂರ್ತಿಯಾಗಿ ದೇವರನ್ನು ಭಾವಿಸುವ ಜನರು ಅವನು ಭೀಕರ ರೌದ್ರರೂಪ ತಾಳುವುದನ್ನು ಕಂಡಾಗ ಭಯಭೀತರಾಗುತ್ತಾರೆ.
ಜನ ಭಗವಂತನನ್ನು ಕರುಣಾಮಯಿ, ವರದಾಯಕ, ಅನುಗ್ರಹಕಾರಕ ಎಂದು ಕರೆಯುತ್ತಾರೆ. ಹೀಗೆ ಕರೆಯುವುದರ ಹಿಂದಿನ ಉದ್ದೇಶವೇನೆಂದರೆ ಮನುಷ್ಯನ ಸ್ವಾರ್ಥತೆ. ಅದು ಅವನ ಭೀರುತೆಯನ್ನು ತೋರಿಸುತ್ತದೆ. ಬೆದರಿದ ಮನುಷ್ಯ ಭಗವಂತನ ಭೀಕರತೆಯನ್ನು ಬಯಸಿಯಾನೆ? ಕಲ್ಪಿಸಿಯಾನೆ? ಅವನಿಗೆ ಬೇಕು ಸಾಂತ್ವನ, ಅವನಿಗೆ ಬೇಕು ಕರುಣೆ, ಅವನಿಗೆ ಬೇಕು ಅನುಗ್ರಹ. ಆದ್ದರಿಂದ ಅವನು ಅನುಗ್ರಹಕಾರಕನಾದ ದಯಾಮಯ ಭಗವಂತನನ್ನೇ ಭಾವಿಸಿ ಆರಾಧಿಸಲು ಬಯಸುತ್ತಾನೆ. ಭಗವಂತನ ಭೀಕರತೆಯನ್ನು ಅವನು ಕನಸಿನಲ್ಲೂ ನೆನೆಸಿಕೊಳ್ಳಲಾರ.
ನಾವು ಯಾವ ಭೂಕಂಪನವನ್ನು, ಯಾವ ಜ್ವಾಲಾಮುಖಿಯನ್ನು ನೋಡುತ್ತೇವೆಯೋ ಅವು ಕೂಡ ಭಗವಂತನ ರೂಪಗಳೇ. ಜಗತ್ತಿನಲ್ಲಿ ಏನೇನು ಒಳ್ಳೆಯದನ್ನು ಕಾಣುತ್ತಿದ್ದೇವೆಯೋ ಅದೂ ಭಗವಂತನೇ, ಏನೇನು ಕೆಟ್ಟದ್ದನ್ನು ಕಾಣುತ್ತಿದ್ದೇವೆಯೋ ಅದೂ ಭಗವಂತನೇ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

