ಮನೆ ಮನೆಗೆ ಮೈಯ್ಯಾಸ್
ಆಹಾರೋದ್ಯಮದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ಡಾ. ಪಿ. ಸದಾನಂದ ಮೈಯ್ಯ 'ಮನೆ ಮನೆಗೆ ಮೈಯ್ಯಾಸ್' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ, ಬಿಇಎಂಎಲ್ ಲೇಔಟ್, ಇಟ್ಟಮಡು, ಚಂದ್ರಾ ಲೇಔಟ್, ಬ್ಯಾಟರಾಯನಪುಗಳಲ್ಲಿ ಈ ತಿಂಗಳ 2ನೇ ವಾರದಿಂದ ಆರಂಭಿಸಲಿದ್ದಾರೆ.
ಆರೋಗ್ಯಕರ ಆಹಾರ ಸೇವನೆ ಕುರಿತು ಮಾಹಿತಿ, ದಕ್ಷಿಣ ಭಾರತದ ಅತೀ ಸುಸಜ್ಜಿತ,ಮೈಯ್ಯಾಸ್ ಆಹಾರ ತಯಾರಿಕಾ ಘಟಕದ ಸಾಕ್ಷ್ಯಚಿತ್ರವನ್ನು ಈ ಕಾರ್ಯಕ್ರಮದಲ್ಲಿ ತೋರಿಸಲಾಗುವುದು. ಜತೆಗೆ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಫ್ರೋಜನ್ ಫುಡ್ಸ್, ಮಿಕ್ಸಸ್ ಮತ್ತು ಪಾನೀಯಗಳ ಪರಿಚಯ ಮಾಡಿಕೊಡಲಾಗುತ್ತದೆ. ಕರ್ನಾಟಕದ ಆಹಾರ ಸಂಸ್ಕೃತಿ ಉಳಿಸಿಕೊಂಡು, ಆಹಾರದ ರುಚಿ, ಸತ್ವ ಮತ್ತು ಸೊಗಡನ್ನು ಕಾಪಾಡಿಕೊಂಡು ದಕ್ಷಿಣ ಭಾರತದ ಆಹಾರಗಳಾದ ಇಡ್ಲಿ, ವಡೆ, ದೋಸೆ, ನಿಪ್ಪಟ್ಟು, ಕೋಡಬಳೆ, ಚಕ್ಕುಲಿ, ಮಂಗಳೂರು ಬಜ್ಜಿ ಮತ್ತಿತರ 30ಕ್ಕೂ ಹೆಚ್ಚು ಪ್ರಕಾರಗಳನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸುವುದನ್ನು 'ಮನೆ ಮನೆಗೆ ಮೈಯ್ಯಾಸ್'ನಲ್ಲಿ ವಿವರಿಸಲಾಗುವುದು. ರಂಗಕರ್ಮಿ ಯಶವಂತ ಸರದೇಶಪಾಂಡೆ ನಿರ್ದೇಶನದಲ್ಲಿ, ಕಿರುತೆರೆ ಕಲಾವಿದೆ ಸುನೇತ್ರಾ ಪಂಡಿತ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 'ಮೈಯ್ಯಾಸ್ ರಂಗಾವಳಿ' ಸಹ ಆರಂಭವಾಗಲಿದೆ. ಆಸಕ್ತರು ಈ ಕಾರ್ಯಕ್ರಮಗಳನ್ನು ತಮ್ಮ ಬಡಾವಣೆಯಲ್ಲಿ ಆಯೋಜಿಸಲು ಪ್ರಸನ್ನದತ್ತ ಅವರನ್ನು 8548867801 ಮೂಲಕ ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

