ಬೈಟುಕಾಫಿ

ಎಲ್ಲಾ ಪದಾರ್ಥಗಳಲ್ಲಿರುವ ಸೂಕ್ಷ್ಮ ಕಣಗಳು ಚಲಿಸುತ್ತವೆಯೇ?

Published On :

ಪ್ರತಿಯೊಂದು ಪದಾರ್ಥವೂ 'ಮಾಲಿಕ್ಯೂಲ್ಸ್‌' ಎಂಬ ಹೆಸರಿನ ಸೂಕ್ಷ್ಮ ಕಣಗಳಿಂದ ರಚಿತವಾಗಿದೆ. 'ಮಾಲಿಕ್ಯೂಲ್‌'ನ ಅತ್ಯಂತ ಚಿಕ್ಕ ಕಣವು ಕೂಡ ಪ್ರತ್ಯೇಕ ಕಣವಾಗಿರುತ್ತದೆ. ಅದು ಆ ಪದಾರ್ಥದ ಎಲ್ಲಾ ಗುಣಗಳನ್ನು ತೋರಿಸುತ್ತದೆ. ಉದಾಹರಣೆಗೆ ಸಕ್ಕರೆಯು ಒಂದು ಕಣ. ಅದರ ರುಚಿ, ಆಕಾರ, ಬಣ್ಣ ಇತ್ಯಾದಿ ಗುಣಗಳನ್ನೆಲ್ಲ ಪ್ರದರ್ಶಿಸುತ್ತದೆ. ಆದರೆ ವಿವಿಧ ಪದಾರ್ಥಗಳ ಕಣಗಳು ವಿವಿಧ ಗಾತ್ರದಲ್ಲಿರುತ್ತವೆ.
ಈ ಸೂಕ್ಷ್ಮಕಣಗಳ ಮೂಲಶಕ್ತಿ ನೇರವಾಗಿ ಅವುಗಳ ನಿರಪೇಕ್ಷ ಉಷ್ಟಾಂಶಕ್ಕೆ ಅನುಗುಣವಾಗಿರುತ್ತದೆ ಎಂಬುದು ಕಂಡುಬಂದಿದೆ. ಪದಾರ್ಥದ ಶಾಖ ಹೆಚ್ಚಿದಷ್ಟೂ, ಸೂಕ್ಷ್ಮಕಣಗಳ ಚಲನೆಯ ಗತಿಯೂ ಶೀಘ್ರಗೊಳ್ಳುತ್ತದೆ. ದ್ರವಗಳ ಮತ್ತು ಘನಪದಾರ್ಥಗಳ ಸೂಕ್ಷ್ಮ ಕಣಗಳ ಚಲನೆಗೆ ಹೋಲಿಸಿದರೆ ಅನಿಲದ ಕಣಗಳು ತುಂಬಾ ವೇಗವಾಗಿ ಚಲಿಸುತ್ತವೆ. ಮಂಜುಗಡ್ಡೆಯ ಸೂಕ್ಷ್ಮ ಕಣಗಳು ಸಹ ಚಲಿಸುತ್ತವೆ. ಹಾಗಾದರೆ ಪದಾರ್ಥಗಳ ಸೂಕ್ಷ್ಮ ಕಣಗಳು ಚಲಿಸುವುದಾದರೆ, ಅವು ಏಕೆ ಅಲುಗಾಡಿದ ಹಾಗೆ ಕಾಣುವುದಿಲ್ಲ? ಇದಕ್ಕೆ ಕಾರಣವೇನೆಂದರೆ, ಕಣಗಳ ನಡುವೆ ಅವೆಲ್ಲವನ್ನೂ ಒಟ್ಟಿಗೆ ಹಿಡಿದಿಡುವಂತಹ ಒಂದು ಆಕರ್ಷಣ ಶಕ್ತಿ ಇದೆ. ಇಲ್ಲದಿದ್ದರೆ ಪದಾರ್ಥದ ಸೂಕ್ಷ್ಮ ಕಣಗಳು ಎಲ್ಲ ದಿಕ್ಕುಗಳಿಗೂ ಚಲ್ಲಾಪಿಲ್ಲಿಯಾಗಿ ಹರಡಿಬಿಡುತ್ತಿದ್ದವು.
ಘನ ಪದಾರ್ಥವೊಂದನ್ನು ಕಾಯಿಸಿದಾಗ ಸೂಕ್ಷ್ಮಕಣಗಳ ವೇಗ ಹೆಚ್ಚುತ್ತದೆ. ಅವುಗಳನ್ನು ಹಿಡಿದಿಟ್ಟಿರುವ ಶಕ್ತಿಯ ಪ್ರಬಲತೆ ಕಡಿಮೆಯಾಗುತ್ತದೆ. ನಾವು ಪದಾರ್ಥದ ಶಾಖವನ್ನು ಹೆಚ್ಚಿಸುತ್ತಾ ಹೋದಂತೆ ಸೂಕ್ಷ್ಮ ಕಣಗಳ ಚಲನದ ಗತಿಯೂ ಹೆಚ್ಚುತ್ತದೆ. ಆಗ ಘನ ಪದಾರ್ಥ ದ್ರವವಾಗಿ ಮಾರ್ಪಡುತ್ತದೆ. ಕಡೆಗೆ ಅದು ಅನಿಲದ ರೂಪಕ್ಕೆ ಬರುತ್ತದೆ. ಈ ರೀತಿ ಪದಾರ್ಥಗಳನ್ನಾಧರಿಸಿ ಸೂಕ್ಷ್ಮ ಕಣಗಳ ಚಲನೆ ವಸ್ತುವಿನಿಂದ  ವಸ್ತುವಿಗೆ ಭಿನ್ನವಾಗಿರುತ್ತವೆ.

- ಹರಳಹಳ್ಳಿ ಪುಟ್ಟರಾಜು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.